ಬದಿಯಡ್ಕ: ಉಬ್ರಂಗಳದ ಬಡಗು ಶಬರಿಮಲೆ ಶ್ರೀಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನದಲ್ಲಿ ಜೀರ್ಣೋದ್ಧಾರ ಕಾಮಗಾರಿಗಳು ತ್ವರಿತಗತಿಯಲ್ಲಿ ನಡೆಯುತ್ತಿದ್ದು, ಶ್ರೀ ಕ್ಷೇತ್ರದಲ್ಲಿ ಒಂದು ದಿನದ ಉತ್ಸವವು ಡಿ.19ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿರುವುದು.
ಇದರಂಗವಾಗಿ ಅಂದು ಬೆಳಗ್ಗೆ ಗಣಪತಿ ಹೋಮ, ನವಕಾಭಿಷೇಕ, ಬಲಿವಾಡು ಕೂಟ, ಕಾರ್ತಿಕ ಪೂಜೆ, ಹೂವಿನ ಪೂಜೆ ನಡೆಯಲಿದೆ. ಅಲ್ಲದೇ 11 ರಿಂದ ಜೀರ್ಣೋದ್ಧಾರ ಸಮಿತಿ, ಮಾತೃ ಸಂಘ, ಯುವಜನ ಸಮಿತಿ ಹಾಗೂ ಪ್ರಾದೇಶಿಕ ಸಮಿತಿಗಳ ಸರ್ವ ಸದಸ್ಯರ ಸಭೆಯು ನಡೆಯಲಿದೆ.