HEALTH TIPS

ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾಸಂಘದ ರಜತ ಸಂಭ್ರಮ- ಡಿ.20, 21ರಂದು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮ

       
      ಬದಿಯಡ್ಕ: ಚುಕ್ಕಿನಡ್ಕ ಶ್ರೀ ಅಯ್ಯಪ್ಪ ಸೇವಾ ಸಂಘವು ರಜತ ಸಂಭ್ರಮದಲ್ಲಿದೆ. ಮಂದಿರದ 25ನೇ ವಾರ್ಷಿಕೋತ್ಸವ, ಶ್ರೀ ಅಯ್ಯಪ್ಪನ್ ತಿರುವಿಳಕ್ಕ್ ಮಹೋತ್ಸವವು ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ಡಿ. 20 ಹಾಗೂ ಡಿ. 21ರಂದು ಜರಗಲಿರುವುದು.
      ಡಿ.20ರಂದು ಪ್ರಾತಃಕಾಲ 5 ಕ್ಕೆ ದೀಪಪ್ರತಿಷ್ಠೆ, 9 ಕ್ಕೆ ಬದಿಯಡ್ಕ ಕೆಡೆಂಜಿ ಶ್ರೀ ಮಹಾವಿಷ್ಣು ಕ್ಷೇತ್ರದಿಂದ ಹೊರಟು ಬದಿಯಡ್ಕ ಪೇಟೆಯಾಗಿ ಸಾಗಿ ನೀರ್ಚಾಲು ಪೇಟೆಯ ಮೂಲಕ ಮಾನ್ಯ ಶ್ರೀ ಅಯ್ಯಪ್ಪ ಭಜನಾ ಮಂದಿರಕ್ಕೆ ಆಗಮಿಸಿ ಚುಕ್ಕಿನಡ್ಕ ಶ್ರೀ ಮಂದಿರಕ್ಕೆ ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಉಗ್ರಾಣ ತುಂಬಿಸುವುದು, ಮಧ್ಯಾಹ್ನ ಅನ್ನದಾನ. ಸಂಜೆ 7.30ರಿಂದ ಸಾಂಸ್ಕøತಿಕ ಕಾರ್ಯಕ್ರಮಗಳ ಆರಂಭ, ಸಭಾಕಾರ್ಯಕ್ರಮದಲ್ಲಿ ಚಂದ್ರಶೇಖರ ನಾಯ್ಕ್ ಚುಕ್ಕಿನಡ್ಕ ಅಧ್ಯಕ್ಷತೆಯಲ್ಲಿ ಮಂದಿರದ ಗುರುಸ್ವಾಮಿ ಕುಂಞÂಕಣ್ಣ ಮಣಿಯಾಣಿ ಉದ್ಘಾಟಿಸುವರು. ರಾತ್ರಿ 8 ರಿಂದ  ಮಿಮಿಕ್ರಿ, 9 ರಿಂದ ಅನ್ನದಾನ, 9.30ರಿಂದ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರೀ ಕೃಪಾಪೋಷಿತ ದಶಾವತಾರ ಯಕ್ಷಗಾನ ಮಂಡಳಿ ಮೂಲ್ಕಿ ಇವರಿಂದ ಬನತ್ತ ಬಂಗಾರ್ ಯಕ್ಷಗಾನ ಬಯಲಾಟ ನಡೆಯಲಿದೆ.
     ಡಿ.21ರಂದು ಪ್ರಾತಃಕಾಲ 5 ಕ್ಕೆ ದೀಪಪ್ರತಿಷ್ಠೆ, ಶರಣಂ ವಿಳಿ, 6 ಕ್ಕೆ ಗಣಪತಿ ಹೋಮ, ಬೆಳಗ್ಗೆ 8ರಿಂದ ವಿವಿಧ ಭಜನಾ ಸಂಘಗಳಿಂದ ಭಜನೆ, 10 ಕ್ಕೆ ಕೊಂಡೆವೂರು ಸದ್ಗುರು ಶ್ರೀ ಯೋಗಾನಂದ ಸರಸ್ವತೀ ಸ್ವಾಮೀಜಿ ಹಾಗೂ ಬ್ರಹ್ಮಶ್ರೀ ಕಮಲಾದೇವಿ ಪ್ರಸಾದ ಅಸ್ರಣ್ಣರವರ ಆಗಮನ, ಪೂರ್ಣಕುಂಭ ಸ್ವಾಗತ, ಸಭಾಕಾರ್ಯಕ್ರಮದ ಉದ್ಘಾಟನೆ, ಆಶೀರ್ವಚನ ನಡೆಯಲಿದೆ. ಉತ್ಸವ ಸಮಿತಿಯ ಗೌರವಾಧ್ಯಕ್ಷ ಗೋಪಾಲಕೃಷ್ಣ ಪೈ ಅಧ್ಯಕ್ಷತೆಯನ್ನು ವಹಿಸಲಿರುವರು. ಡಿ.ಎನ್.ಮಾನ್ಯ ಕಾರ್ಕಳ ಧಾರ್ಮಿಕ ಭಾಷಣ ಮಾಡಲಿರುವರು. ಹಿರಿಯರಾದ ಅರ್ಚಕ ಸುಬ್ರಹ್ಮಣ್ಯ ಭಟ್ ಕಂಬಾರು, ಕೇರಳ ರಾಜ್ಯಮಟ್ಟದ ಅತ್ಯುತ್ತಮ ವೈದ್ಯ ಪ್ರಶಸ್ತಿ ಪುರಸ್ಕøತ ಡಾ. ಜನಾರ್ಧನ ನಾಯ್ಕ್, ಎಂ.ಎ.ಪರೀಕ್ಷೆಯಲ್ಲಿ ಪ್ರಥಮ ರ್ಯಾಂಕ್‍ನೊಂದಿಗೆ ಚಿನ್ನದ ಪದಕ ಪಡೆದ ವಿದ್ಯಾರ್ಥಿನಿ ವಂದನಾ ಸಿ.ಎಚ್. ಇವರಿಗೆ ಗೌರವಾರ್ಪಣೆ ನಡೆಯಲಿದೆ. ಜನಪ್ರತಿನಿಧಿಗಳಾದ ಕೆ.ಎನ್.ಕೃಷ್ಣ ಭಟ್, ನ್ಯಾಯವಾದಿ ಕೆ.ಶ್ರೀಕಾಂತ್ ಮುಖ್ಯ ಅತಿಥಿಗಳಾಗಿ ಪಾಲ್ಗೊಳ್ಳಲಿರುವರು. ಶ್ಯಾಮಪ್ರಸಾದ ಮಾನ್ಯ, ಅವಿನಾಶ್ ರೈ, ರಾಜೇಶ್ವರಿ ಮಾನ್ಯ, ಧ.ಗ್ರಾ.ಯೋಜನೆಯ ಚೇತನಾ ಎಂ., ಕ್ಯಾಂಪ್ಕೋ ಉಪಾಧ್ಯಕ್ಷ ಶಂ.ನಾ.ಖಂಡಿಗೆ, ಜಯದೇವ ಖಂಡಿಗೆ, ಶಶಿಧರ ಶೆಟ್ಟಿ ಕಾಸರಗೋಡು, ವೆಂಕಟ್ರಮಣ ಭಟ್ ಚಂಬಲ್ತಿಮಾರ್ ಶುಭಾಶಂಸನೆಗೈಯಲಿರುವರು. ಮಧ್ಯಾಹ್ನ ಮಹಾಪೂಜೆ, ಅನ್ನದಾನ. 1.30ರಿಂದ ರಂಗಸಿರಿ ಸಾಂಸ್ಕøತಿ ವೇದಿಕೆ ಬದಿಯಡ್ಕ ಇದರ ವಿದ್ಯಾರ್ಥಿಗಳಿಂದ ಸಂಸ್ಕøತಿ ಸಿರಿ ವೈಭವದಲ್ಲಿ ಯಕ್ಷಗಾನ ಹಾಗೂ ಭಕ್ತಿಭಾವ ಸಂಗಮ, ಸಂಜೆ 5 ಕ್ಕೆ ತಾಯಂಬಕ, 6 ಕ್ಕೆ ಹುಲ್ಪೆ ಮೆರವಣಿಗೆ, ಪಾಲೆಕೊಂಬು ಮೆರವಣಿಗೆ ದೇವರಕೆರೆ ಶ್ರೀ ರಕ್ತೇಶ್ವರೀ ಪರಿವಾರ ದೈವಗಳ ಸನ್ನಿಧಿಯಿಂದ ಹೊರಡುವುದು. ಮೆರವಣಿಗೆಯಲ್ಲಿ ವಿಶೇಷ ಆಕರ್ಷಣೆಯಾಗಿ ಕಲ್ಲಡ್ಕ ಶಿಲ್ಪ ಗೊಂಬೆ ಬಳಗ, ಮುತ್ತುಕೊಡೆ, ಸಿಂಗಾರಿ ಮೇಳ, ವಾದ್ಯಘೋಷಗಳಿರುವುದು. 6.30ರಿಂದ ಭಜನೆ, ರಾತ್ರಿ 10 ಗಂಟೆಗೆ ಮಹಾಪೂಜೆ, ಅನ್ನದಾನ. 10.45ರಿಂದ ಜೂನಿಯರ್ ಜೇಸುದಾಸ್ ಖ್ಯಾತಿಯ ರತೀಶ್ ಕಂಡಡ್ಕಂ ಮುನ್ನಡೆಸುವ `ದೇವಗೀತಂ' ಭಕ್ತಿಗಾನಮೇಳ, ನಾಡನ್ ಪಾಟ್ಟ್‍ಗಳ ಮೆಘಾ ಶೋ, ರಾತ್ರಿ 2.30ರಿಂದ ಅಯ್ಯಪ್ಪನ್ ಗೀತೆ, ಬೇಟೆವಿಳಿ, ತಾಲಪ್ಪೊಲಿ, ಅಗ್ನಿಪೂಜೆ, ಬೆಳಗಿನ ಜಾವ ತಿರಿಉಯಿಚ್ಚಿಲ್, ಅಯ್ಯಪ್ಪನ್ ವಾವರ ಯುದ್ಧ, ಅಯ್ಯಪ್ಪನ್ ತಿರುವಿಳಕ್ಕ್ ಹಾಗೂ 5 ಕ್ಕೆ ದೀಪೋದ್ವಾಸನದೊಂದಿಗೆ ಕಾರ್ಯಕ್ರಮ ಸಂಪನ್ನವಾಗಲಿದೆ.
     ರಜತ ಸಂಭ್ರಮ ಕಟ್ಟಡ ಕಾಮಗಾರಿ ಪ್ರಗತಿಯಲ್ಲಿ:
    ಕಾಸರಗೋಡು ಜಿಲ್ಲೆಯ ಬೇಳ ಗ್ರಾಮದ ಚುಕ್ಕಿನಡ್ಕದಲ್ಲಿ 1994ರಲ್ಲಿ ಊರಿನ ಅಯ್ಯಪ್ಪ ಸ್ವಾಮಿ ಭಕ್ತರು ಒಂದುಗೂಡಿ ಶ್ರೀ ಅಯ್ಯಪ್ಪ ಸೇವಾಸಂಘವು ಅಸ್ತಿತ್ವಕ್ಕೆ ಬಂದಿತ್ತು. ಪ್ರತೀವರ್ಷ ಅನೇಕ ಮಂದಿ ಅಯ್ಯಪ್ಪ ವ್ರತಧಾರಿಗಳು ಶ್ರೀ ಭಜನಾ ಮಂದಿರದಲ್ಲಿ ಮಾಲಾಧಾರಣೆ ಮಾಡಿ ವ್ರತಕೈಗೊಂಡು ಶಬರಿಮಲೆ ಕ್ಷೇತ್ರ ದರ್ಶನ ಮಾಡಿ ಬರುತ್ತಿದ್ದಾರೆ.     ಶ್ರೀಮಂದಿರದಲ್ಲಿ ಪ್ರಾರ್ಥಿಸಿದ ಅನೇಕರಿಗೆ ತಮ್ಮ ಇಷ್ಟಾರ್ಥ ಸಿದ್ದಿಯಾದ ನಿದರ್ಶನವಿದೆ. ರಜತ ಸಂಭ್ರಮದ ಸವಿನೆನಪಿಗಾಗಿ ವಿಶಾಲವಾದ ಸಭಾಭವನದ ನಿರ್ಮಾಣ ಕಾಮಗಾರಿಯು ಪ್ರಗತಿಯಲ್ಲಿದೆ. ವಿವಿಧ ದಾನಿಗಳ ಸಹಕಾರದಿಂದ ಕಟ್ಟಡದ ಕಾಮಗಾರಿ ನಡೆಯುತ್ತಿದೆ. ನಿರೀಕ್ಷೆಯಂತೆ ಕೆಲಸಕಾರ್ಯಗಳು ನಡೆದಲ್ಲಿ ಎಪ್ರೀಲ್ ತಿಂಗಳಿನಲ್ಲಿ ಕಟ್ಟಡವು ಲೋಕಾರ್ಪಣೆಗೊಳ್ಳಲಿದೆ ಎಂದು ಸಮಿತಿಯ ಪದಾಧಿಕಾರಿಗಳು ತಿಳಿಸಿರುತ್ತಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries