ಮಂಜೇಶ್ವರ: : ಮಂಜೇಶ್ವರ ಬ್ಲಾಕ್ ಪಂಚಾಯತಿ ಆಶ್ರಯದಲ್ಲಿ ನಡೆದ ಕೇರಳೋತ್ಸವದ ಗುರುವಾರ ಸಂಜೆ ಮಂಜೇಶ್ವರ ಗೋವಿಂದ ಪೈ ಗಿಳಿವಿಂಡು ವೇದಿಕೆಯಲ್ಲಿ ಸಮಾಪ್ತಿಗೊಂಡಿತು.
ಬ್ಲಾಕ್ ಪಂ. ಉಪಾಧ್ಯಕ್ಷೆ ಮಮತ ದಿವಾಕರ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಮರಂಭವನ್ನು ಬ್ಲಾಕ್ ಪಂಚಾಯಿತು ಅಧ್ಯಕ್ಷ ಎ.ಕೆ.ಎಂ ಅಶ್ರಫ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ಕೇರಳೋತ್ಸವದಂತಹ ಕಾರ್ಯಕ್ರಮಗಳು ನಾಡಿನ ಸಾಂಸ್ಕøತಿಕ ಮತ್ತು ಕ್ರೀಡಾ ಚಟುವಟಿಕೆಗಳನ್ನು ಉತ್ತೇಜಿಸುದರೊಂದಿಗೆ, ಹೊಸ ಪ್ರತಿಭೆಗಳನ್ನು ಗುರುತಿಸುವಲ್ಲಿಯೂ ಸಫಲವಾಗುತ್ತಿದೆ. ಕೇರಳೋತ್ಸವದಂತಹ ಕಾರ್ಯಕ್ರಮದಲ್ಲಿ ಹೆಚ್ಚಿನ ಯುವ ಮಂದಿ ಭಾಗವಹಿಸಿ ಯಶಸ್ವಿಗೊಳಿಸಿರುವುದು ಸಂತಸ ತಂದಿದೆ ಎಂದರು. ಈ ಸಂದರ್ಭ ಪುಟ್ಬಾಲ್, ಕ್ರಿಕೆಟ್, ಶಟಲ್ ಮೊದಲಾದ ಕ್ರೀಡೆಗಳಲ್ಲಿ ವಿಜಯಗಳಿಸಿದ ತಂಡಗಳಿಗೆ ಪ್ರಶಸ್ತಿ ನೀಡಲಾಯಿತು.
ಈ ಸಂದರ್ಭ ಜನಪ್ರತಿನಿಧಿಗಳಾದ ಮುಸ್ತಫ ಉದ್ಯಾವರ, ಶಾಹುಲ್ ಹಮೀದ್, ಹಸೀನ , ಮಿಸ್ಬಾನಾ, ಪ್ರಸಾದ್ ರೈ, ಅಸಿಸ್ಟಂಟ್ ಬಿ ಡಿ ಒ ನೂತನ ಕುಮಾರಿ, ಬ್ಲಾಕ್ ಕಾರ್ಯದರ್ಶಿ ಸುರೇಂದ್ರ ಮೊದಲಾದವರು ಉಪಸ್ಥಿತರಿದ್ದರು. ಸಮಾರೋಪ ಸಮಾರಂಭಕ್ಕೆ ಮೊದಲು ವೇದಿಕೆಯಲ್ಲಿ ವವಿಧ ಸ್ಪರ್ಧೆಗಳು ನಡೆದವು. ಸಮಾರೋಪದ ವೇದಿಕೆಯಲ್ಲಿ ವಿಜಯಗಳಿಗೆ ಸನ್ಮಾನವನ್ನು ಕೂಡಾ ನೀಡಲಾಯಿತು.