ಕಾಸರಗೋಡು: 2020ನೇ ಇಸವಿಯ ಡಿಸೆಂಬರ್ ತಿಂಗಳಲ್ಲಿ ಮನೆಯಿಲ್ಲದ ಎಲ್ಲರಿಗೂ ವಸತಿ ಭಾಗ್ಯ ಒದಗಲಿದೆ ಎಂದು ಸ್ಥಳೀಯಾಡಳಿತ ಸಚಿವ ಎ.ಸಿ.ಮೊಯ್ದೀನ್ ಭರವಸೆ ನೀಡಿದರು.
ವೆಸ್ಟ್ ಏಳೇರಿ ಪಂಚಾಯತ್‍ನಲ್ಲಿ ನಡೆದ ಸಮಾರಂಭದಲ್ಲಿ ಲೈಫ್ ಯೋಜನೆ ಪ್ರಕಾರ ನಿರ್ಮಿಸಿರುವ ವಸತಿಗಳ ಕೀಲಕೈ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಎರಡು ವರ್ಷಗಳ ಅವಧಿಯಲ್ಲಿ 320 ಮನೆಗಳನ್ನು ನಿರ್ಮಿಸುವ ಮೂಲಕ ವೆಸ್ಟ್ ಏಳೇರಿ ಗ್ರಾಮ ಪಂಚಾಯತ್ ಇತರರಿಗೆ ಮಾದರಿಯಾಗಿದೆ. ಈ ಯೋಜನೆಯ ಮೊದಲ ಹಂತದಲ್ಲಿ 54 ಸಾವಿರ ಮಂದಿ ಸದಸ್ಯರಾಗಿದ್ದರು. ಎರಡನೇ ಹಂತದಲ್ಲಿ ಇವರ ಸಂಖ್ಯೆ 1.37 ಲಕ್ಷ ವಾಗಿ ಹೆಚ್ಚಳಗೊಂಡಿತ್ತು. ರಾಜ್ಯದ 50 ಕ್ಕೂ ಅ„ಕ ಪ್ರದೇಶಗಳಲ್ಲಿ ನೂರಾರು ವಸತಿ ಸಮುಚ್ಛಯಗಳನ್ನು ನಿರ್ಮಿಸಿ ನೀಡುವ ಯೋಜನೆ ಮೂರನೇ ಹಂತವಾಗಿ ನಡೆಯುತ್ತಿದೆ. ಹೆಚ್ಚುವರಿಯಾಗಿ 200 ಪ್ರದೇಶಗಳನ್ನು ಈ ನಿಟ್ಟಿನಲ್ಲಿ ಆಯ್ಕೆ ಮಾಡಲಾಗಿದೆ ಎಂದವರು ತಿಳಿಸಿದರು.
ಸಭೆಯಲ್ಲಿ ತ್ರಿಕರಿಪುರ ಶಾಸಕ ಎಂ.ರಾಜಗೋಪಾಲನ್ ಅಧ್ಯಕ್ಷತೆ ವಹಿಸಿದ್ದರು. ಪರಪ್ಪ ಬ್ಲಾಕ್ ಪಂಚಾಯತ್ ಅಧ್ಯಕ್ಷ ಪಿ.ರಾಜನ್, ವೆಸ್ಟ್ ಏಳೇರಿ ಗ್ರಾಮ ಪಂಚಾಯತ್ ಉಪಾದ್ಯಕ್ಷ ಟಿ.ಕೆ.ಸುಕುಮಾರನ್, ಖಾದಿ ಮಂಡಳಿಯ ಮಾಜಿ ಅಧ್ಯಕ್ಷ ಎಂ.ವಿ.ಬಾಲಕೃಷ್ಣನ್, ಲೈಫ್ ಮಿಷನ್ ಜಿಲ್ಲಾ ಸಂಚಾಲಕ ಎಂ.ವತ್ಸಲನ್ ಮೊದಲಾದವರು ಉಪಸ್ಥಿತರಿದ್ದರು.