HEALTH TIPS

ಎನ್‍ಆರ್‍ಸಿಗೆ 2024 ಗಡುವು, ಅಷ್ಟರಲ್ಲಿ ಎಲ್ಲಾ ಅತಿಕ್ರಮಣಕಾರರನ್ನು ಹೊರಹಾಕುವುದು ಖಚಿತ: ಅಮಿತ್ ಶಾ


      ಚಕ್ರಧರಪುರ: ದೇಶಾದ್ಯಂ ಎನ್‍ಆರ್‍ಸಿಯನ್ನು ಜಾರಿಗೆ ತರಲು 2024 ರ ಗಡುವನ್ನು ಹಾಕಿಕೊಳ್ಲಲಾಗಿದೆ ಎಂದು ಕೇಂದ್ರ ಗೃಹ ಸಚಿವ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹೇಳಿದ್ದಾರೆ., ಮುಂದಿನ ಸಾರ್ವತ್ರಿಕ ಚುನಾವಣೆಗೆ ಮೊದಲು  "ಪ್ರತಿಯೊಬ್ಬ" ಒಳನುಸುಳು ಕೋರರನ್ನು ಗುರುತಿಸಿ ಹೊರಹಾಕಲಾಗುವುದು ಎಂದು ಅವರು ನುಡಿದರು.
    ಪಶ್ಚಿಮ ಬಂಗಾಳದ ಕೆಲವು ಬಿಜೆಪಿ ನಾಯಕರು ಎನ್‍ಆರ್‍ಸಿಯ ಬಗ್ಗೆ ಆತಂಕ ವ್ಯಕ್ತಪಡಿಸಿದ್ದು ಇತ್ತೀಚಿಗೆ ರಾಜ್ಯದಲ್ಲಿ ನಡೆದ ಉಪಚುನಾವಣೆಗಳಲ್ಲಿ ಕೇಸರಿ ಪಕ್ಷಕ್ಕೆ ಭಾರೀ ನಷ್ಟವಾಗಿದೆ  ಎಂದು ಒಪ್ಪಿಕೊಂಡರೂ, ಕೇಂದ್ರ ಗೃಹ ಸಚಿವ ಶಾ ಮಾತ್ರ ಜಾಖರ್ಂಡ್ ನಲ್ಲಿ ನಡೆದ ಚುನಾವಣಾ ರ್ಯಾಲಿಗಳಲ್ಲಿ ಮಾತನಾಡಿ, ವಿರೋಧದ ಹೊರತಾಗಿಯೂ ದೇಶಾದ್ಯಂತ ಎನ್‍ಆರ್‍ಸಿಯನ್ನು ವಿಸ್ತರಿಸಲಾಗುತ್ತದೆ ಎಂದಿದ್ದಾರೆ.
   "2024 ರ ಚುನಾವಣೆಗೆ ಮೊದಲು ಎನ್‍ಆರ್‍ಸಿಯನ್ನು  ದೇಶಾದ್ಯಂತ ವಿಸ್ತರಿಸಲಾಗುತ್ತದೆ. ಪ್ರತಿಯೊಬ್ಬ ಒಳನುಸುಳುವವರನ್ನು ಗುರುತಿಸಿ ಹೊರಹಾಕಲಾಗುತ್ತದೆ ಎಂದು ನಾನು ನಿಮಗೆ ಹೇಳಲು ಬಯಸುತ್ತೇನೆ."ರಾಹುಲ್ ಬಾಬಾ (ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ)  ಅತಿಕ್ರಮಣಕಾರರನ್ನು ಹೊರಹಾಕಬೇಡಿ ಎನ್ನುತ್ತಿದ್ದಾರೆ. ಹಾಗೊಮ್ಮೆ ಅವರನ್ನು ದೇಶದಿಂದ ಹೊರಹಾಕಿದರೆ ಅವರೆಲ್ಲಿಗೆ ಹೋಗಬೇಕು, ಏನನ್ನು ತಿನ್ನಬೇಕು ಎಂದು ರಾಹುಲ್ ಬಾಬಾ ಪ್ರಶ್ನಿಸುತ್ತಾರೆ. ಆದರೆ ರೆ 2024 ರಲ್ಲಿ ದೇಶವು ಚುನಾವಣೆಗೆ ಹೋಗುವ ಮೊದಲು ಎಲ್ಲಾ ಅಕ್ರಮ ವಲಸಿಗರನ್ನು ಹೊರಹಾಕಲಾಗುವುದು ಎಂದು ನಾನು ನಿಮಗೆ ಭರವಸೆ ನೀಡುತ್ತೇನೆ" ಎಮದು ಅವರು ನಿನ್ನೆ  ಚಕ್ರಧರಪುರ ಮತ್ತು ಬಹರಗೋರಾದಲ್ಲಿ ಚುನಾವಣಾ ರ್ಯಾಲಿಯನ್ನುದ್ದೇಶಿಸಿ ಶಾ ಮಾತನಾಡಿದ್ದಾರೆ.
   ಭಯೋತ್ಪಾದನೆಯನ್ನು ಬೇರುಸಹಿತ ಕಿತ್ತುಹಾಕುವುದು, ನಕ್ಸಲಿಸಂ ಮತ್ತು ಅಯೋಧ್ಯೆಯಲ್ಲಿ ಭವ್ಯವಾದ ರಾಮ ಮಂದಿರ ನಿರ್ಮಾಣ ಮುಂತಾದ ಪ್ರಮುಖ ವಿಷಯಗಳು ಜಾಖರ್ಂಡ್ ಚುನಾವಣೆಯಲ್ಲಿ ಬಳಕೆಯಾಗುತ್ತಿದೆ.ಇವೂ ಕೂಡ ಸ್ಥಳೀಯ ಅಭಿವೃದ್ಧಿ ಕೆಲಸಗಳಷ್ಟೇ ಮಹತ್ವದ್ದಾಗಿದೆ ಎಂದು ಶಾ ಪ್ರತಿಪಾದಿಸಿದ್ದಾರೆ.ರಾಮ ಜನ್ಮಭೂಮಿ-ಬಾಬ್ರಿ ಮಸೀದಿ ವಿವಾದವನ್ನು ಮತ್ತೊಮ್ಮೆ ಎತ್ತಿಹಿಡಿದ ಬಿಜೆಪಿ ಅಧ್ಯಕ್ಷ ಕಾಂಗ್ರೆಸ್ ಮೇಲೆ ಮುರಿದುಬಿದ್ದರು. "ರಾಮಜನ್ಮಭೂಮಿ ಪ್ರಕರಣವನ್ನು  ಆಲಿಸುವ ಅಗತ್ಯವಿಲ್ಲ ಎಂದು ಕಾಂಗ್ರೆಸ್ ನಾಯಕರು ಸುಪ್ರೀಂ ಕೋರ್ಟ್ ಗೆ ಹೇಳುತ್ತಾ ಬಂದಿದ್ದರು.ನಿಮ್ಮ (ಜನರ) ಬೆಂಬಲದೊಂದಿಗೆ, ಅದನ್ನು ವಿಚಾರಣೆಗೆ ತೆಗೆದುಕೊಳ್ಳಬೇಕೆಂದು ನಾವು ಅರ್ಜಿ ಸಲ್ಲಿಸಿದ್ದೆವು. ದರ ಫಲಿತಾಂಶವೆಂದರೆ ಸುಪ್ರೀಂ ಕೋರ್ಟ್ ಕೇವಲ ರಾಮ ಮಂದಿರದ ಪರವಾಗಿ ತೀರ್ಪು ನೀಡಿದೆ. ಜಾಖರ್ಂಡ್ ಕಾಂಗ್ರೆಸ್ ನಾಯಕರ ಕುರಿತು ಟೀಕಿಸಿದ ಶಾ "ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ, ಜಾಖರ್ಂಡ್ ರಾಜ್ಯಕ್ಕಾಗಿ ಆಂದೋಲನ ನಡೆಸುತ್ತಿದ್ದ ವಿದ್ಯಾರ್ಥಿಗಳ ಮೇಲೆ ಅದು ಗುಂಡು ಹಾರಿಸಿತು ಮತ್ತು ಅವರ ಮೇಲೆ ಲಾಠಿಗಳಿಂದ ಹಲ್ಲೆ ಮಾಡಿತು. ಈಗ ಹೇಮಂತ್ ಸೊರೆನ್ (ಜೆಎಂಎಂ ನಾಯಕ) ಅದೇ ಕಾಂಗ್ರೆಸ್ಸಿನ ಮಡಿಲಲ್ಲಿ ಕುಳಿತಿದ್ದಾರೆ, ಆದ್ದರಿಂದ ಅವರು ಮುಖ್ಯಮಂತ್ರಿಯಾಗಬಹುದು" ಎಂದು ಅವರು ಹೇಳಿದರು.
      "ರಾಹುಲ್ ಗಾಂಧಿ ಇಂದು ಜಾಖರ್ಂಡ್ನಲ್ಲಿದ್ದಾರೆ. ಕಾಂಗ್ರೆಸ್ ಸರ್ಕಾರಗಳು ಜಾಖರ್ಂಡ್ ಪರ 55 ವರ್ಷಗಳ ಆಡಳಿತದಲ್ಲಿ ಏನು ಮಾಡಿದೆ ಎಂಬುದರ ಬಗ್ಗೆ ಒಂದು ವಿವರ ನೀಡುವಂತೆ ನಾನವರಲ್ಲಿ ಸವಾಲು ಹಾಕುತ್ತೇನೆ.ಅದೇ ರೀತಿ ಕಳೆದ ಐದು ವರ್ಷಗಳಲ್ಲಿ ನಾವೇನು ಮಾಡಿದ್ದೇವೆ ಎನ್ನುವುದರ ಮಾಹಿತಿಯನ್ನೂ ಒದಗಿಸುತ್ತೇನೆ" ಎಂದು ಶಾ ಹೇಳೀದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries