ಕಾಸರಗೋಡು: ಪ್ರವಾಸಿಗರ ಕಣ್ಮನ ತುಂಬಿಕೊಳ್ಳಲು ಬೇಕಲಕೋಟೆಯಲ್ಲಿ ಕೃಷಿ-ಪುಷ್ಪ ಮೇಳ ನಡೆಯಲಿದೆ. ರಜೆ ದಿನಗಳಲ್ಲಿ ಪ್ರವಾಸಕ್ಕಾಗಿ ಜಿಲ್ಲೆಗೆ ಆಗಮಿಸುವ ಪ್ರವಾಸಿಗರನ್ನು ಸೆಳೆಯುವ ನಿಟ್ಟಿನಲ್ಲಿ ಈ ಕೃಷಿ ಪುಷ್ಪೋತ್ಸವ ನಡೆಸಲಾಗುತ್ತಿದೆ. ಪುಷ್ಪೋತ್ಸವ ಅಂಗವಾಗಿ ಆಹಾರ ಮೇಳ, ಕರಾವಳಿ ಕ್ರೀಡಾಮೇಳ ಇತ್ಯಾದಿಗಳೂ ನಡೆಯಲಿವೆ.
ಅಗ್ರಿ ಹಾರ್ಟಿ ಸೊಸೈಟಿ ನೇತೃತ್ವದಲ್ಲಿ ಡಿ.24ರಿಂದ 2020 ಜ.1 ವರೆಗೆ ಬೇಕಲ ಕೃಷಿ-ಪುಷ್ಪ ಮೇಳ ನಡೆಯಲಿದೆ. ವಿದೇಶೀಯರ ಸಹಿತ ಇಲ್ಲಿಗೆ ಆಗಮಿಸುವ ಪ್ರವಾಸಿಗರಿಗಾಗಿ ಬೇಕಲ ಕೋಟೆಯಲ್ಲಿ ಈ ಮೇಳೆ ಸಿದ್ಧವಾಗಲಿದೆ. ಜಿಲ್ಲೆಯೇತರ ಪ್ರವಾಸಿ ತಾಣಗಳಿಗೂ ಈ ಪ್ರವಾಸಿಗರನ್ನು ಆಕರ್ಷಿತರನ್ನಾಗಿಸುವ ನಿಟ್ಟಿನಲ್ಲೂ ಜಿಲ್ಲಾಡಳಿತೆ ಈ ಪುಷ್ಪೋತ್ಸವದಲ್ಲಿ ವ್ಯವಸ್ಥೆ ನಡೆಸಿದೆ ಎಂದು ಸಂಬಂಧಪಟ್ಟವರು ತಿಳಿಸಿದರು. ಕುಟುಂಬಶ್ರೀ ಸಹಿತ ಸಂಘಟನೆಗಳ, ಸಾರ್ವಜನಿಕರ, ಸ್ವಯಂಸೇವಾ ಸಂಘಟನೆಗಳ ಸಹಕಾರದೊಂದಿಗೆ ಈ ಮೇಳವನ್ನು ಜನಪರ ಉತ್ಸವವಾಗಿ ಮಾಡಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದರು.
ಸಮಿತಿಗಳ ರಚನೆ : ಬೇಕಲ ಕೃಷಿ ಪುಷ್ಪ ಮೇಳದ ಯಶಸ್ಸಿಗಾಗಿ ವಿವಿಧ ಸಮಿತಿಗಳನ್ನು ರಚಿಸಲಾಗಿದೆ.
ಸ್ಟಾಲ್ ಸಮಿತಿ : ಎಕ್ಸ್ ಆಫೀಷ್ಯೋ ಅಧ್ಯಕ್ಷ-ಪುಲ್ಲೂರು ಪೆರಿಯ ಕೃಷಿ ಅಧಿಕಾರಿ ಪಿ.ಪ್ರಮೋದ್ ಕುಮಾರ್, ಅಧ್ಯಕ್ಷ-ವಿನೋದ್ ಕುಮಾರ್ ಪನೆಯಾಲ್, ಸಂಚಾಲಕ-ಬಶೀರ್ ಕುನ್ನಿಲ್.
ಪ್ರಚಾರ ಸಮಿತಿ: ಎಕ್ಸ್ ಆಫೀಷ್ಯೋ ಅಧ್ಯಕ್ಷ- ಜಿಲ್ಲಾ ವಾರ್ತಾಧಿಕಾರಿ ಮಧುಸೂದನನ್ ಎಂ., ಎಕ್ಸ್ ಆಫೀಷ್ಯೋ ಸಂಚಾಲಕ-ಪಳ್ಳಿಕ್ಕರೆ ಕೃಷಿ ಅಧಿಕಾರಿ ಕೆ.ವೇಣುಗೋಪಾಲ್. ಅಧ್ಯಕ್ಷ-ಸುಕುಮಾರನ್ ಪೂಚ್ಚಕ್ಕಾಡ್, ಸಂಚಾಲಕ-ಅಜಯನ್ ಪನೆಯಾಲ್,
ಸ್ವಾಗತ ಸಮಿತಿ: ಎಕ್ಸ್ ಆಫೀಷ್ಯೋ ಅಧ್ಯಕ್ಷ-ಸಹಾಯಕ ಕೃಷಿ ಅಧಿಕಾರಿ ಕೆ.ವಿ.ಭಾಸ್ಕರನ್, ಅಧ್ಯಕ್ಷ-ಪಳ್ಳಿಕ್ಕರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಟಿ.ಎಂ.ಅಬ್ದುಲ್ ಲತೀಫ್, ಸಂಚಾಲಕ-ವಾರ್ಡ್ ಸದಸ್ಯೆ ಎಂ.ಜಿ.ಆಯಿಷಾ,
ಕಾರ್ಯಕ್ರಮ ಸಮಿತಿ: ಎಕ್ಸ್ ಆಫೀಷ್ಯೋ ಅಧ್ಯಕ್ಷ-ಕಾಂಞಂಗಾಡ್ ಕೃಷಿ ಸಹಾಯಕ ನಿರ್ದೇಶಕ ಜಿ.ಬಾಬುರಾಜನ್, ಅಧ್ಯಕ್ಷ-ಕೆ.ರವೀಂದ್ರನ್, ಸಂಚಾಲಕ-ಅಬ್ದುಲ್ ಖಾದರ್ ಪೂಚ್ಚಕ್ಕಾಡ್.
ಹಣಕಾಸು ಸಮಿತಿ: ಎಕ್ಸ್ ಆಪೀಷ್ಯೋ ಅಧ್ಯಕ್ಷ-ಕೃಷಿ ಸಹಾಯಕ ನಿರ್ದೇಶಕ ಉಮೇಶ್ ಪುತ್ತನ್ ವೀಟಿಲ್, ಅಧ್ಯಕ್ಷ ರವಿವರ್ಮ, ಸಂಚಾಲಕ-ಪಿ.ಕೆ.ಕುಂಞಬ್ದುಲ್ಲ.
ಸ್ವಯಂಸೇವಾ ಸಮಿತಿ: ಎಕ್ಸ್ ಅಫೀಷ್ಯೋ ಅಧ್ಯಕ್ಷ ಬೇಕಲ ಸಿ.ಎ.ನಾರಾಯಣನ್ ಪುತ್ತಲತ್, ಅಧ್ಯಕ್ಷ-ಷೌಕತ್ ಪೂಚ್ಚಕಾಡ್, ಸಂಚಾಲಕ-ಖಯ್ಯೂಬ್.