HEALTH TIPS

ಏರ್ಯದ ಆಳ್ವರು ಮಾಸದ ನೆನಪು-ಗಿಳಿವಿಂಡಲ್ಲಿ 21 ರಂದು

   
     ಮಂಜೇಶ್ವರ: ರಾಷ್ಟ್ರಕವಿ ಗೋವಿಂದ ಪೈ ಸ್ಮಾರಕ ಟ್ರಸ್ಟ್ ಮಂಜೇಶ್ವರ ಹಾಗೂ ಏರ್ಯ ಲಕ್ಷ್ಮೀನಾರಾಯಣ ಆಳ್ವ ಪ್ರತಿಷ್ಠಠಾನ ಇವುಗಳ ಜಂಟಿ ಆಶ್ರಯದಲ್ಲಿ ಏರ್ಯದ ಆಳ್ವರು-ಮಾಸದ ನೆನಪು ವಿಶೇಷ ಕಾರ್ಯಕ್ರಮವು ಡಿ.21 ರಂದು ಭಾನುವಾರ ಮಂಜೇಶ್ವರ ಗಿಳಿವಿಂಡು ಆವರಣದಲ್ಲಿ ಅಪರಾಹ್ನ 3 ರಿಂದ ನಡೆಯಲಿದೆ.
      ಟ್ರಸ್ಟ್ ಸದಸ್ಯ, ಖ್ಯಾತ ಸಾಹಿತಿ, ವೈದ್ಯ ಡಾ.ರಮಾನಂದ ಬನಾರಿ ಅವರ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರಂಭದಲ್ಲಿ ಕರ್ನಾಟಕ ಜಾನಪದ ವಿವಿಯ ನಿವೃತ್ತ ಉಪಕುಲಪತಿ ಡಾ.ಕೆ.ಚಿನ್ನಪ್ಪ ಗೌಡ ಅವರು ಜಾನಪದ-ದಾಖಲಾತಿಯ ಮಹತ್ವ ಎಂಬ ವಿಷಯದ ಬಗ್ಗೆ ವಿಶೇಷ ಉಪನ್ಯಾಸ ನೀಡುವರು. ಏರ್ಯ ಆಳ್ವ ಪ್ರತಿಷ್ಠಾನದ ಪ್ರಧಾನ ಕಾರ್ಯದರ್ಶಿ ಪ್ರೊ.ಎಂ.ರಾಮಚಂದ್ರ, ಕಸಾಪ ಕೇರಳ ಗಡಿನಾಡ ಘಟಕಾಧ್ಯಕ್ಷ ಎಸ್.ವಿ.ಭಟ್, ಟ್ರಸ್ಟ್ ಸದಸ್ಯ ಜಯಂತ ಕಿಣಿ, ಸ್ಮಾರಕ ಸಮಿತಿ ಕಾರ್ಯದರ್ಶಿ ಕೆ.ಆರ್.ಜಯಾನಂದ ಉಪಸ್ಥಿತರಿರುವರು. ಈ ಸಂದರ್ಭ ಟ್ರಸ್ಟ್ ಸದಸ್ಯ ಸುಭಾಶ್ಚಂದ್ರ ಕಣ್ವತೀರ್ಥ ಅವರಿಂದ ಕಾವ್ಯ ವಾಚನ ಹಾಗೂ ಶಿಲ್ಪಾ, ಸ್ನೇಹ, ಜಲಧಿ ಎಸ್.ರಾವ್, ಪ್ರಣಮ್ಯ, ಪ್ರಜಿನಾ ಅವರಿಂದ ಕಾವ್ಯ ಗಾಯನ ನಡೆಯಲಿದೆ ಎಂದು ಸ್ಮಾರಕ ಸಮಿತಿಯ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries