ಬದಿಯಡ್ಕ: ಪೆರ್ಲ ನಾಲಂದ ಕಾಲೇಜು ಎನ್ನೆಸೆಸ್ ಘಟಕದ ವಿಶೇಷ ಸಪ್ತದಿನ ಶಿಬಿರವು ಅಗಲ್ಪಾಡಿ ಶ್ರೀ ಅನ್ನಪೂರ್ಣೇಶ್ವರಿ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಡಿ.21ರಂದು ಆರಂಭವಾಗಲಿದ್ದು 27ರ ತನಕ ನಡೆಯಲಿದೆ.
ಡಿ.21 ರಂದು ಸಂಜೆ 4 ಗಂಟೆಗೆ ಅಗಲ್ಪಾಡಿ ಶಾಲಾ ಸಭಾಂಗಣದಲ್ಲಿ ನಡೆಯುವ ಸಮಾರಂಭದಲ್ಲಿ ಕುಂಬ್ಡಾಜೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಫಾತಿಮತ್ ಝುಹರ ಶಿಬಿರವನ್ನು ಉದ್ಘಾಟಿಸುವರು. ಗ್ರಾ.ಪಂ.ಉಪಾಧ್ಯಕ್ಷ ಆನಂದ ಕೆ. ಮವ್ವಾರ್ ಅಧ್ಯಕ್ಷತೆ ವಹಿಸಲಿದ್ದು, ಮಲ್ಲ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಟ್ರಸ್ಟಿ, ನಾಲಂದ ಕಾಲೇಜು ಆಡಳಿತ ಮಂಡಳಿ ಅಧ್ಯಕ್ಷ ಆನೆಮಜಲು ವಿಷ್ಣು ಭಟ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.
ನಾಲಂದ ಕಾಲೇಜು ಪ್ರಾಂಶುಪಾಲ ಡಾ. ವಿಘ್ನೇಶ್ವರ ವರ್ಮುಡಿ, ಎನ್ನೆಸ್ಸೆಸ್ ಯೋಜನಾಧಿಕಾರಿ ಸುರೇಶ್ ಕೆ. ಎಂ., ಕುಂಬ್ಡಾಜೆ ಗ್ರಾಮ ಪಂಚಾಯತಿ ಅಭಿವೃದ್ಧಿ ಸ್ಥಾಯಿ ಸಮಿತಿಯ ಅಧ್ಯಕ್ಷೆ ಮಿಸಿರಿಯಾಬಿ ಎಂ., ಕ್ಷೇಮ ಸ್ಥಾಯಿ ಸಮಿತಿಯ ಅಧ್ಯಕ್ಷ ನ್ಯಾಯವಾದಿ. ಮೊಹಮ್ಮದ್ ಖಾಸಿಮ್ ಎ., ಆರೋಗ್ಯ ಹಾಗೂ ವಿದ್ಯಾಭ್ಯಾಸ ಸ್ಥಾಯಿ ಸಮಿತಿಯ ಅಧ್ಯಕ್ಷೆ ಯಶೋಧ ಎನ್., ಗ್ರಾ.ಪಂ. ಸದಸ್ಯೆ, ಶಿಬಿರದ ಸಂಘಟನಾ ಸಮಿತಿಯ ಅಧ್ಯಕ್ಷೆ ಶಾಂತ ಎಸ್. ಭಟ್, ಸದಸ್ಯ ಎಸ್. ಮೊಹಮ್ಮದ್ ಕುಂಞ, ಶಶಿಧರ ಟಿ., ಕುಂಬ್ಡಾಜೆ ಗ್ರಾಮ ಪಂಚಾಯತಿ ಕಾರ್ಯದರ್ಶಿ ಅಚ್ಚುತ ಮಣಿಯಾಣಿ ಕೆ. ಅಗಲ್ಪಾಡಿ ಶಾಲಾ ಪ್ರಬಂಧಕ ನಾರಾಯಣ ಶರ್ಮ, ಪ್ರಾಂಶುಪಾಲ ಸತೀಶ್ ವೈ., ಹೈಸ್ಕೂಲ್ ಮುಖ್ಯ ಶಿಕ್ಷಕ ಗಿರೀಶ ಎಂ., ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಸತ್ಯನಾರಾಯಣ ಭಟ್, ಶಾಲಾ ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ರವಿರಾಜ ಶರ್ಮ, ಮಾತೃಸಂಘದ ಅಧ್ಯಕ್ಷೆ ನಯನ, ಉಪ್ಪಂಗಳ ಟ್ರಸ್ಟ್ ನ ಕಾರ್ಯದರ್ಶಿ ರಂಗ ಶರ್ಮ, ಅಗಲ್ಪಾಡಿ ಶಾಲಾ ನಿವೃತ್ತ ಶಿಕ್ಷಕ ರಾಮಚಂದ್ರ ಭಟ್, ನಾಲಂದ ಕಾಲೇಜಿನ ನೌಕರ ಸಂಘದ ಕಾರ್ಯದರ್ಶಿ ಕೇಶವ ಶರ್ಮ, ರಕ್ಷಕ ಶಿಕ್ಷಕ ಸಂಘದ ಅಧ್ಯಕ್ಷ ವಿಷ್ಣುಮೂರ್ತಿ ಎಚ್. ವಿ., ಕುಂಬ್ಡಾಜೆ ಪಂಚಾಯತಿ ಸಿಡಿಎಸ್ ಅಧ್ಯಕ್ಷೆ ಮೀನಾಕ್ಷಿ, ನಾಲಂದ ಕಾಲೇಜು ಯೂನಿಯನ್ ಅಧ್ಯಕ್ಷೆ ರಶ್ಮಿ ಕೆ., ಮಾಜಿ ಎನ್ನೆಸ್ಸೆಸ್ ಕಾರ್ಯದರ್ಶಿಗಳಾದ ರೂಪ ಕೆ., ಸುದೀಶ್, ಭವ್ಯ ಮತ್ತಿತರರು ಉಪಸ್ಥಿತರಿರುವರು.
ವಿಶೇಷ ಸಪ್ತ ದಿನ ಶಿಬಿರದ ಭಾಗವಾಗಿ ಅಗಲ್ಪಾಡಿ ಶಾಲೆಯಿಂದ ಮಾರ್ಪನಡ್ಕ, ಅಗಲ್ಪಾಡಿ ಶಾಲೆಯಿಂದ ನಾರಂಪಾಡಿ, ಜಯನಗರ ಎಸ್ ಸಿ ಕಾಲನಿಯ ರಸ್ತೆ ಬದಿ ಶುಚೀಕರಣ ಹಾಗೂ ಚರಂಡಿಗಳ ನಿರ್ಮಾಣ, ನಾರಂಪಾಡಿ ಪೇಟೆ ಹಾಗೂ ಶಾಲಾ ಪರಿಸರ ಶುಚೀಕರಣ, ಶೈಕ್ಷಣಿಕ, ವ್ಯಕ್ತಿತ್ವ ವಿಕಸನ ತರಗತಿಗಳು, ಸಾಂಸ್ಕøತಿಕ ಕಾರ್ಯಕ್ರಮಗಳು ನಡೆಯಲಿದೆ.