ಮುಳ್ಳೇರಿಯ: ಬೆಳ್ಳೂರು ಗೋಳಿಕಟ್ಟೆಯ ಓಂ ಶ್ರೀ ಕಲಾಕ್ಷೇತ್ರದ ವಿದ್ಯಾರ್ಥಿಗಳ ರಂಗ ಪ್ರವೇಶ ಡಿ.22 ರಂದು ಬೆಳ್ಳೂರು ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ನಡೆಯಲಿದೆ.
ಪೂರ್ವಾಹ್ನ 10 ರಿಂದ ಸಭಾ ಕಾರ್ಯಕ್ರಮ ಜರಗಲಿದೆ. ಸಾಹಿತಿ ಗೋವಿಂದಕೃಷ್ಣ ಭಟ್ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ಉಳಿಯತ್ತಾಯ ವಿಷ್ಣು ಆಸ್ರ ಉದ್ಘಾಟಿಸುವರು. ಹಿಮ್ಮೇಳ ಗುರುಗಳಾದ ರಾಘವ ಬಲ್ಲಾಳ್ ಕಾರಡ್ಕ ಅವರಿಗೆ ಗುರುವಂದನಾ ಕಾರ್ಯಕ್ರಮ ಹಾಗು ಯಕ್ಷರತ್ನ ಪ್ರಶಸ್ತಿ ಪ್ರದಾನ ನಡೆಯಲಿದೆ. ಯತೀಶ್ ಕುಮಾರ್ ರೈ ಕೆ. ಅವರು ಅಭಿನಂದನಾ ಭಾಷಣ ಮಾಡುವರು.
ವಾರ್ಡ್ ಸದಸ್ಯ ಬಾಬು ಅನೆಕ್ಕಳ, ಉದಯ ಕುಮಾರ್ ಕುಂಜತ್ತಾಯ, ರಾಮ ಭಟ್ ಸಬ್ಬಣಕೋಡಿ, ಕೆ.ಶಿವರಾಮ ಬಲ್ಲಾಳ್, ನಾರಾಯಣ ಬಲ್ಲಾಳ್, ದಾಮೋದರ ಬಲ್ಲಾಳ್, ಎ.ಬಿ.ಬಾಲಕೃಷ್ಣ ಬಲ್ಲಾಳ್, ಕೆ.ರಂಗಯ್ಯ ಬಲ್ಲಾಳ್, ಎ.ಬಿ.ಗಂಗಾಧರ ಬಲ್ಲಾಳ್, ಡಾ.ಎಸ್.ಎನ್.ಭಟ್ ಪೆರ್ಲ, ಡಾ.ಮೋಹನ್‍ದಾಸ್ ರೈ ಕೆ, ರಾಮಚಂದ್ರ ಭಟ್ ಕುಂಬ್ರ, ಎಂ.ನಾ.ಚಂಬಲ್ತಿಮಾರ್ ಶುಭಹಾರೈಸುವರು. ಇದೇ ಸಂದರ್ಭದಲ್ಲಿ ಸೂರ್ತಿ ಕಲ್ಲೂರಾಯ ಮಧೂರು, ನಿರಂಜನ್ ಬಲ್ಲಾಳ್ ಕಾರಡ್ಕ, ರವಿತೇಜ ಬಲ್ಲಾಳ್ ಕೆ.ಎಲ್.ಅಡ್ವಳ, ಶರಣ್ಯ ಸಿ.ಡಿ, ಚೈತ್ರಿಕ, ಸಾಕ್ಷಿ ಸದಾನಂದ ಕೆ. ಅವರಿಗೆ ಪ್ರತಿಭಾ ಪುರಸ್ಕಾರ ನಡೆಯಲಿದೆ. 11 ಗಂಟೆಗೆ ಪೂರ್ವರಂಗ, ಮಧ್ಯಾಹ್ನ 2 ರಿಂದ ಯಕ್ಷಗಾನ ಪ್ರದರ್ಶನ ಜರಗಲಿದೆ.