ಪೆರ್ಲ: ಶೇಣಿ ಮಣಿಯಂಪಾರೆ ಶ್ರೀ ಅಯ್ಯಪ್ಪ ಸ್ವಾಮಿ ಭಜನ ಮಂದಿರದ 23ನೇ ವಾರ್ಷಿಕೋತ್ಸವ ವಿವಿಧ ಕಾರ್ಯಕ್ರಮಗಳೊಂದಿಗೆ ಇತ್ತೀಚೆಗೆ ಜರಗಿತು.
ಕಾರ್ಯಕ್ರಮದ ಅಂಗವಾಗಿ ಗಣಪತಿ ಹೋಮ,ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ,ಅನ್ನದಾನ ಜರಗಿತು.ರಾತ್ರಿ ಮಣಿಯಂಪಾರೆ ಶ್ರೀ ದುರ್ಗಾಪರಮೇಶ್ವರಿ ಭಜನ ಮಂದಿರದಿಂದ ನಡೆದ ಉಲ್ಪೆ ಮೆರವಣಿಗೆಯಲ್ಲಿ ನೂರಾರು ಮಂದಿ ಅಯ್ಯಪ್ಪ ಸ್ವಾಮಿಗಳು,ಭಕ್ತಾದಿಗಳು ಪಾಲ್ಗೊಂಡರು.