ಕಾಸರಗೋಡು: ಒಂದೇ ವರುಷದ ಅವಧಿಯಲ್ಲಿಜಿಲ್ಲೆಯ 244 ಶಾಲೆಗಳು ಹೈಟೆಕ್ ಆಗಿ ಮಾರ್ಪಟ್ಟಿವೆ. ಇವುಗಳಲ್ಲಿ 182 ಶಿಕ್ಷಣಾಲಯಗಳು ಸರ್ಕಾರಿ ವಿದ್ಯಾಲಯಗಳಾಗಿವೆ.
8ರಿಂದ 12 ವರೆಗಿನ ತರಗತಿಗಳಿರುವ ಶಾಲೆಗಳು ಈ ರೀತಿ ಹೈಟೆಕ್ ಆಗಿವೆ. ಸಾರ್ವಜನಿಕ ಶಿಕ್ಷಣ ಸಂರಕ್ಷಣೆ ಯಜ್ಞ ಯೋಜನೆ ಅಂಗವಾಗಿ ಕೈಟ್ (ಕೇರಳ ಇನ್ಫ್ರಾ ಸ್ಟ್ರಕ್ಚರ್ ಆಂಡ್ ಟೆಕ್ನಾಲಜಿ ಫಾರ್ ಎಜ್ಯುಕೇಶನ್) ವತಿಯಿಂದ ಹೈಟೆಕ್ ಲ್ಯಾಬ್-ಹೈಟೆಕ್ ಸ್ಕೂಲ್ ಯೋಜನೆ ಜಾರಿಗೊಳಿಸಲಾಗುತ್ತಿದೆ. 2019 ಜುಲೈಯಲ್ಲಿ ಆರಂಭಗೊಂಡ ಒಂದನೇ ತರಗತಿಯಿಂದ 7 ನೇ ತರಗತಿ ವರೆಗಿನ ಕ್ಲಾಸ್ ಗಳಲ್ಲಿ ಹೈಟೆಕ್ ಲ್ಯಾಬ್ ಸ್ಥಾಪಸಿಉವ ಯೋಜನೆ ಅಂಗವಾಗಿ ಜಿಲ್ಲೆಯ 478 ಶಾಲೆಗಳಿಗೆ ಉಪಕರಣಗಳ ವಿತರಣೆ ಪೂರ್ಣಗೊಂಡಿದೆ.
5533 ಲ್ಯಾಪ್ ವಿತರಣೆ:
ಹೈಟೆಕ್ ಲ್ಯಾಬ್-ಹೈಟೆಕ್ ಸ್ಕೂಲ್ ಯೋಜನೆ ಅಂಗವಾಗಿ ಜಿಲ್ಲೆಯ ಒಂದರಿಂದ 12ನೇ ತರಗತಿ ವರೆಗಿನ ಕ್ಲಾಸ್ ಗಳಿರುವ ಸರಕಾರಿ, ಅನುದಾನಿತ ಶಾಲೆಗಳಿಗೆ 5533 ಲ್ಯಾಪ್ ಟಾಪ್ ಗಳು, 4707 ಯು.ಎಸ್.ಬಿ. ಸ್ಪೀಕರ್ ಗಳು, 3294 ಪ್ರಾಜೆಕ್ಟರ್ ಗಳು, 2016 ಮೌಂಡಿಂಗ್ ಕಿಟ್ ಗಳು, 1069 ಸ್ಕ್ರೀನ್ ಗಳನ್ನು ಈಗಾಗಲೇ ವಿತರಣೆ ನಡೆಸಲಾಗಿದೆ. ಇದಕ್ಕಾಗಿ ಕಿಫ್ ಬಿ ಯಿಂದ ಕೊಡಮಾಡಿರುವ 27.94 ಕೋಟಿ ರೂ. ವೆಚ್ಚಮಾಡಲಾಗಿದೆ.
ಕುಂಡಂಕುಳಿ ಸರ್ಕಾರಿ ಹೈಯರ್ ಸೆಕೆಂಡರಿ ಶಾಲೆ, ನಾಯನ್ಮಾರುಮೂಲೆ ತನ್ ಬೀಹುಲ್ ಹೈಯರ್ ಸೆಕೆಂಡರಿ ಶಾಲೆ, ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಚಟ್ಟಂಚಾಲ್ ಸಿ.ಹೈಯರ್ ಸೆಕೆಂಡರಿ ಶಾಲೆ, ಕುಂಬಳೆ ಸರಕಾರಿ ಹೈಯರ್ ಸೆಕೆಂಡರಿ ಶಾಲೆ, ಚಾಯೋತ್ ಸರಕಾರಿ ಹೈಯರ್ ಸೆಕೆಂಡರಿ ಶಾಲೆಗಳಿಗೆ ಅತ್ಯಧಿಕ ಪ್ರಮಾಣದ ಉಪಕರಣಗಳ ವಿತರಣೆ ನಡೆದಿದೆ. ಹೈಟೆಕ್ ಉಪಕರಣಗಳನ್ನು ಪಡೆದಿರುವ ಶಾಲೆಗಳ ಸಮಗ್ರ ಮಾಹಿತಿ "ಸಮೇತಂ" ಪೆÇೀರ್ಟಲ್ ನಲ್ಲಿ ಲಭ್ಯವಿದೆ.
ಹೈಟೆಕ್ ಯೋಜನೆಯ ಅಂಗವಾಗಿ ಎಲ್ಲ ಶಿಕ್ಷಕರಿಗೆ ವಿಶೇಷ ಮಾಹಿತಿ ತಂತ್ರಜ್ಞಾನದ ತರಬೇತಿ ನೀಡಲಾಗಿದೆ. ಪಠ್ಯದ ಭಾಗಗಳನ್ನು ತರಗತಿ ಕೊಠಡಿಗಳಲ್ಲಿ ಡಿಜಿಟಲ್ ಸೌಲಭ್ಯಗಳೊಂದಿಗೆ ಪರಿಣಾಮಕಾರಿಯಾಗಿ ವಿನಿಮಯ ನಡೆಸುವ ನಿಟ್ಟಿನಲ್ಲಿ "ಸಮಗ್ರ" ಪೆÇೀರ್ಟಲ್ ಸಜ್ಜುಗೊಂಡಿದೆ.
ದೇಶದ ಅತಿದೊಡ್ಡ ಮಾಹಿತಿ ತಂತ್ರಜ್ಞಾನ ಒಕ್ಕೂಟವಾಗಿರುವ "ಲಿಟಲ್ ಕೈಟ್ಸ್" ಘಟಕಗಳ ಮೂಲಕ ಜಿಲ್ಲೆಯಲ್ಲಿ 119 ಶಾಲೆಗಳಲ್ಲಿ ಹೈಟೆಕ್ ಚಟುವಟಿಕೆಗಳು ಸಕ್ರಿಯವಾಗಿವೆ. ವಿಭಾಗವೊಂದಕ್ಕೆ 7 ಮಕ್ಕಳಿಗಿಂತ ಕಡಿಮೆಯಿದ್ದ ಜಿಲ್ಲೆಯ 11 ಶಾಲೆಗಳಿಗೆ ಉಪಕರಣಗಳನ್ನು ವಿತರಿಸಲು ಸರಕಾರದ ಆಡಳಿತಾನುಮತಿ ನೀಡಲಾಗಿದೆ ಎಂದು ಸಾರ್ವಜನಿಕ ಶಿಕ್ಷಣ ಸಚಿವ ಪೆÇ್ರ.ಸಿ.ರವೀಂದ್ರನಾಥ್ ತಿಳಿಸಿದರು.