ಕಾಸರಗೋಡು: ಡಿಸೆಂಬರ್ 26 ರಂದು ಗುರುವಾರ ಅಮವಾಸ್ಯೆಯಂದು ಮೂಲ ನಕ್ಷತ್ರ ಧನುರಾಶಿಯಲ್ಲಿ ಸೂರ್ಯನಿಗೆ ಕೇತುಗ್ರಹಣ ಸಂಭವಿಸಲಿದೆ. ಗ್ರಹಣದ ನಿಮಿತ್ತ ವೃಷಭ ರಾಶಿಯ ಕೃತಿಕ, ರೋಹಿಣಿ, ಮೃಗಶಿರ ಮೊದಲ 2 ಪಾದ, ಕರ್ಕಟಕ ರಾಶಿಯ ಪುನರ್ವಸ್ಸು ಅಂತ್ಯ 1 ಪಾದ, ಪುಷ್ಯಾ, ಅಶ್ಲೇಷ, ಧನುರಾಶಿಯ ಮೂಲ, ಪೂರ್ವಾಷಾಡ, ಉತ್ತರಾಷಾಡ ಮಕರ ರಾಶಿಯ ಉತ್ತರಾಷಾಡ, ಶ್ರವಣ, ಧನಿಷ್ಟೆ ಇತ್ಯಾದಿ ಕೆಲವು ರಾಶಿ ಹಾಗು ನಕ್ಷತ್ರಗಳ ಮೇಲೆ ಕೆಟ್ಟ ಪರಿಣಾಮ ಬೀಳಲಿದೆ. ಈ ನಕ್ಷತ್ರ ರಾಶಿಯಲ್ಲಿ ಜನಿಸಿದವರ ಶ್ರೇಯಸ್ಸಿಗೊಸ್ಕರ ಮತ್ತು ಲೋಕ ಕಲ್ಯಾಣಾರ್ಥ ಕೂಡ್ಲಿನ ಬಾದಾರದ ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನದಲ್ಲಿ ಡಿ.26 ಗುರುವಾರದಂದು ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿಗಳ ಆಶೀರ್ವಾದದೊಂದಿಗೆ ಕುಂಬಳೆ ವಾಸುದೇವ ಅಡಿಗರ ನೇತೃತ್ವದಲ್ಲಿ ಕ್ಷೇತ್ರದ ಅರ್ಚಕ ಸುಬ್ರಾಯ ಕಾರಂತರ ಸಹಾಯದೊಂದಿಗೆ ಸಾಮೂಹಿಕ ಸೂರ್ಯಗ್ರಹಣ ಶಾಂತಿ ಹವನ ನಡೆಯಲಿದೆ.
ಅಂದು ಬೆಳಗ್ಗೆ 8 ಗಂಟೆಗೆ ಆರಂಭಗೊಳ್ಳವ ಹವನ 11.05 ಗಂಟೆಗೆ ಪೂರ್ಣಾಹುತಿಯಾಗಲಿದೆ. ಈ ಹವನದಲ್ಲಿ ಪಾಲ್ಗೊಳ್ಳಲಿಚ್ಛಿಸುವ ಭಕ್ತರು 50ಗ್ರಾಂ ಎಳ್ಳು ಮತ್ತು ಭಕ್ತಿಯಾನುಸಾರ ಎಳ್ಳೆಣ್ಣೆ ಹಾಗು 200 ರೂ. ಸೇವಾಕಾಣಿಕೆಯೊಂದಿಗೆ ಅಂದು ಬೆಳಗ್ಗೆ 8 ಗಂಟೆಗೆ ಶ್ರೀ ಕ್ಷೇತ್ರ ತಲುಪತಕ್ಕದ್ದು. ಸೇವಾರ್ಥಿಗಳು ಅಂದು ಅಕ್ಕಿಯಿಂದ ಮಾಡಿದ ಆಹಾರ ಸೇವಿಸಬಾರದು.