HEALTH TIPS

ಡಿ.26 : ಸಂಪೂರ್ಣ ಸೂರ್ಯಗ್ರಹಣ- ಸಾರ್ವಜನಿಕ ವೀಕ್ಷಣೆಗೆ ಜಿಲ್ಲಾಡಳಿತದಿಂದ ವ್ಯವಸ್ಥೆ


      ಕಾಸರಗೋಡು: ಈ ಬಾರಿ ನಡೆಯಲಿರುವ ಬೃಹತ್ ಸೂರ್ಯಗ್ರಹಣ ಎನ್ನುವ ಗಗನ ವಿಸ್ಮಯವನ್ನು  ವೀಕ್ಷಿಸುವ ಅಪೂರ್ವ ಅವಕಾಶವನ್ನು ಕಾಸರಗೋಡು ಜಿಲ್ಲೆಯ ಜನತೆ ಪಡೆಯಲಿದ್ದಾರೆ. ಡಿ.26ರಂದು ನಡೆಯುವ ಸೂರ್ಯಗ್ರಹಣವನ್ನು ಸ್ಪಷ್ಟವಾಗಿ ವೀಕ್ಷಿಸುವ ನಿಟ್ಟಿನಲ್ಲಿ ಜಿಲ್ಲಾಡಳಿತೆ ವ್ಯವಸ್ಥೆ ಏರ್ಪಡಿಸಲಿದೆ.
      ಅತ್ಯಂತ ಸ್ಪಷ್ಟವಾಗಿ ಈ ಗ್ರಹಣವನ್ನು ವೀಕ್ಷಿಸಬಹುದಾದ ಜಗತ್ತಿನ ಮೂರು ಪ್ರಶಸ್ತ ಜಾಗಗಳಲ್ಲಿ ಜಿಲ್ಲೆಯ ಚೆರುವತ್ತೂರು ಒಂದು. ಇಲ್ಲಿನ ಕಾಡಂಗೋಡಿನ ಸಾರ್ವಜನಿಕ ಪ್ರದೇಶದಲ್ಲಿ ವೀಕ್ಷಣೆಗಿರುವ ಸರ್ವ ಸಿದ್ಧತೆ ನಡೆಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿರುವರು.
       ಬೆಳಗ್ಗೆ 8.04 ಕ್ಕೆ ಆರಮಭಗೊಳ್ಳುವ ಭಾಗಶ: ಗ್ರಹಣ 9.25ರ ವೇಳೆಗೆ ಪೂರ್ಣ ರೂಪ ತಲಪಲಿದೆ. ಮೂರು ನಿಮಿಷ, 12 ಸೆಕಂಡ್ ವರೆಗೆ ಮುಂದುವರಿದು 11.04ರ ವೇಳೆಗೆ ಸಮಾಪ್ತಿಗೊಳ್ಳಲಿದೆ. ಮಂಗಳೂರಿನಿಂದ ಬೇಪೂರು ವರೆಗಿನ ವಲಯಗಳಲ್ಲಿ ಅರ್ಧಾಂಶವಾಗಿ ಗೋಚರಿಸಲಿದೆ. ಖತಾರ್, ಯು.ಎ.ಇ., ಒಮಾನ್ ದೇಶಗಳಲ್ಲಿ ಗ್ರಹಣ ಆರಂಭಗೊಳ್ಳಲಿದೆ. ಕಣ್ಣೂರು ವಯನಾಡ್ ಜಿಲ್ಲೆಗಳ ಮಾತಮಂಗಲಂ, ಪನ್ನಿಯೂರು, ಪೇರಾವೂರು, ಮೀನಾಂಗಾಡಿ, ಚುಳ್ಳಿಯೋಡ್ ಪ್ರದೇಶಗಳಲ್ಲಿ ಈ ದೃಶ್ಯ ಕಾಣಬಹುದಾಗಿದೆ. ತಮಿಳುನಾಡಿನ ವಿವಿಧ ಜಿಲ್ಲೆಗಳಲ್ಲೂ, ಕೋಟೆಪಟ್ಟಣಂ ಮೂಲಕ ದೇಶವನ್ನೂ ದಾಟಿ ಶ್ರೀಲಂಕಾ, ಮಲೇಷ್ಯಾ, ಸಿಂಗಾಪುರ ಸಹಿತ ದೇಶಗಳಲ್ಲೂ ಈ ದೃಶ್ಯ ವಿಸ್ಮಯ ಗೋಚರವಾಗಲಿದೆ. 
       ಭಾರತದಲ್ಲಿ ಪ್ರಥಮ ಬಾರಿಗೆ ಕಾಣಿಸಲಿರುವುದು ಜಿಲ್ಲೆಯ ಚೆರುವತ್ತೂರಿನಲ್ಲಿ ಎಂಬುದು ವಿಶೇಷ. ಈ ಪ್ರದೇಶದ ಭೌಗೋಲಿಕ ವಿಶೇಷತೆಯಿಂದಾಗಿ ಈ ದೃಶ್ಯ ಇಲ್ಲಿ ಸ್ಪಷ್ಟವಾಗಿ ಗೋಚರವಾಗಲು ಕಾರಣ ಎಂದು ತಾಂತ್ರಿಕ ಸೌಲಭ್ಯಗಳೊಂದಿಗೆ ಗ್ರಹಣ ವೀಕ್ಷಣೆಗೆ ವ್ಯವಸ್ಥೆ ಏರ್ಪಡಿಸುವ ಸ್ಪೇಸ್ ಇಂಡಿಯಾ ಸಂಸ್ಥೆಯ ಸಿ.ಎಂ.ಡಿ.ಸಚಿನ್ ಬಂಬೆ ತಿಳಿಸಿರುವರು.   
      ಜ್ಯೋತಿರ್ ವಿಜ್ಞಾನ ಕುರಿತು ಸಾರ್ವಜನಿಕ ವಲಯದಲ್ಲಿ ಹರಡಿಕೊಂಡಿರುವ ತಪ್ಪು ಕಲ್ಪನೆ ವಿರುದ್ಧ ಜಾಗೃತಿ ಮೂಡಿಸುವ ಮತ್ತು ಆಸ್ಟ್ರೋ ಟೂರಿಸಂ ಪ್ರಚಾರಕರಾಗಿ ಸಚಿನ್ ಬಂಬೆ ಚಟುವಟಿಕೆ ನಡೆಸುತ್ತಿದ್ದಾರೆ.
      ನೇರ ಕಂಗಳಿಂದ ಸೂರ್ಯಗ್ರಹಣ ನೋಡದಿರಿ : ಪುಟ್ಟ ಅವಧಿಯಲ್ಲಿ ಕಾಣಿಸುವ ಬೃಹತ್ ಸೂರ್ಯಗ್ರಹಣವನ್ನು ನೇರವಾಗಿ ನಮ್ಮ ಕಣ್ಣುಗಳಿಂದ ಈಕ್ಷಿಸಲೇಬಾರದು ಎಂದು ಸ್ಪೇಸ್ ಇಂಡಿಯಾ ಸಂಸ್ಥೆಯ ಸಿ.ಎಂ.ಡಿ.ಸಚಿನ್ ಬಂಬೆ ಮುನ್ನಚ್ಚರಿಕೆ ನೀಡಿದ್ದಾರೆ. ಪೂರ್ಣಗ್ರಹಣ ವೇಳೆ ಹಬ್ಬುವ ಕತ್ತಲ ಸಂದರ್ಭ ಸಾರ್ವಜನಿಕರು ತಮ್ಮ ತಮ್ಮ ತಾಣಗಳಿಂದ ಹೊರಗಿಳಿಯಬಾರದು ಎಂದವರು ಮಾಹಿತಿ ನೀಡಿರುವರು. ಪೂರ್ಣಗ್ರಹಣ ಕೊನೆಗೊಂಡ ವೇಳೆ ಸೂರ್ಯ ಕಿರಣಗಳು ದೊಡ್ಡ ಪ್ರಮಾಣದಲ್ಲಿ ನೇರವಾಗಿ ಕಣ್ಣಿಗೆ ತಾಕುವ ಭೀತಿಯಿದೆ. ಬೆಳಕು ಕಡಿಮೆಯಿರುವ ಸಂದರ್ಭ ಕಂಗಳ ಒಳಭಾಗ ವಿಕಸಿತಗೊಂಡಿರುವ ವೇಳೆ ದೊಡ್ಡ ಪ್ರಮಾಣದಲ್ಲಿ ರವಿಕಿರಣಗಳು ಕಂಗಳಿಗೆ ಬಿದ್ದರೆ ದೃಷ್ಟಿಗೆ ತೊಂದರೆಯುಂಟಾಗುವ ಭೀತಿಯಿದೆ ಎಂದವರು ತಿಳಿಸಿದರು.
    ಕಂಗಳಿಗೆ ರಕ್ಷಣೆ ನೀಡಬಲ್ಲ ಉಪಕರಣಗಳನ್ನು ಬಳಸಿ ಮಾತ್ರ ಸೂರ್ಯಗ್ರಹಣ ವೀಕ್ಷಣೆ ನಡೆಸುವಂತೆ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಸಾರ್ವಜನಿಕರಿಗೆ ಸಲಹೆ ಮಾಡಿದ್ದಾರೆ. ಗ್ರಹಣ ವೀಕ್ಷಣೆಗೆ ಚೆರುವತ್ತೂರಿನ ಕಾಡಂಗೋಡಿನಲ್ಲಿ ವೈಜ್ಞಾನಿಕ ರೀತಿಯ ಸೌಲಭ್ಯ ಏರ್ಪಡಿಸಿದ್ದು, ಸಾರ್ವಜನಿಕರು ಗರಿಷ್ಠ ಮಟ್ಟದಲ್ಲಿ ಸದ್ಬಳಕೆ ನಡೆಸುವಂತೆ ಅವರು ಆಗ್ರಹಿಸಿರುವರು. 

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries