ಮಂಜೇಶ್ವರ: ವರ್ಕಾಡಿ ಗ್ರಾಮಪಂಚಾಯತ್ ವತಿಯಿಂದ ವರ್ಕಾಡಿ ಗ್ರಾಮೋತ್ಸವ ಡಿ.27,28 ರಂದು ಜರುಗಲಿದೆ. ಪಂಚಾಯತ್ ನ ಸಾಮಾಜಿಕ-ಸಾಂಸ್ಕøತಿಕ-ರಾಜಕೀಯ ಸಂಘಟನೆಗಳ ಸಹಕಾರದಿಂದ ಈ ಗ್ರಾಮೋತ್ಸವ ನಡೆಯುತ್ತಿದೆ. ಎರಡು ದಿನಗಳ ಕಾಲ ನಡೆಯುವ ಮಹೋತ್ಸವದಲ್ಲಿ ವಿವಿಧ ಕಲಾ-ಸಾಂಸ್ಕೃತಿಕ ಕಾರ್ಯಕ್ರಮಗಳು, ಆನಿವಾಸಿ ಜನತೆಯ ಸಂಗಮ, ವೈದ್ಯಕೀಯ ಶಿಬಿರ, ಮೆರವಣಿಗೆ, ಉದ್ಯೋಗ ಮೇಳ, ಕೃಷಿ ಮೇಳ ಇತ್ಯಾದಿ ವೈವಿಧ್ಯಮಯ ಕಾರ್ಯಕ್ರಮಗಳು ನಡೆಯಲಿವೆ. ಗ್ರಾಮಪಂಚಾಯತ್ ನ ಅಭಿವೃದ್ಧಿ ಮಾಸ್ಟರ್ ಪ್ಲಾನ್ ಸಲ್ಲಿಕೆ, ವಿವಿಧ ಯೋಜನೆಗಳ ಉದ್ಘಾಟನೆ ಇತ್ಯಾದಿಗಳೂ ಈ ವೇಳೆ ಜರಗಲಿವೆ.
ಡಿ. 27ರಂದು ನಡೆಯುವ ಸಮಾರಂಭದಲ್ಲಿ ಕಂದಾಯ ಸಚಿವ ಇ.ಚಂದ್ರಶೇಖರನ್ ಗ್ರಾಮೋತ್ಸವವನ್ನು ಉದ್ಘಾಟಿಸುವರು. ಶಾಸಕ ಎಂ.ಸಿ.ಕಮರುದ್ದೀನ್ ಅಧ್ಯಕ್ಷತೆ ವಹಿಸುವರು. 28ರಂದು ಜರುಗುವ ಸಾಂಸ್ಕೃತಿ ಸಂಜೆ ಕಾರ್ಯಕ್ರಮವನ್ನು ಕೇಂದ್ರ ವಿದೇಶ ಸಚಿವ ವಿ.ಮುರಳೀಧರನ್ ಉದ್ಘಾಟಿಸುವರು. ಸಂಸದ ರಾಜ್ ಮೋಹನ್ ಉಣ್ಣಿತ್ತಾನ್ ಅಧ್ಯಕ್ಷತೆ ವಹಿಸುವರು.