HEALTH TIPS

ಮುಂಡಪಳ್ಳದಲ್ಲಿ ತಲೆಯೆತ್ತುತ್ತಿದೆ ಭವ್ಯ ದೇಗುಲ-ಫೆ.28 ರಿಂದ ಬ್ರಹ್ಮಕಲಶ ಸಂಭ್ರಮ


           ಕುಂಬಳೆ: ಕುಂಬಳೆಗೆ ಸಮೀಪದ ನಾಯ್ಕಾಪಿನಿಂದ ಉತ್ತರಕ್ಕೆ ಎರಡು ಕಿಲೋಮೀಟರ್ ಸಾಗಿದರೆ ಹಿಂದೆ ಲೋಕಸಭಾ ಸದಸ್ಯರಾಗಿ ಜನಮೆಚ್ಚುಗೆ ಪಡೆದ ಐ ರಾಮ ರೈ  ಅವರ ಮನೆ ಇರುವ ಇಚ್ಲಂಪಾಡಿ ಎಂಬ ಗ್ರಾಮವನ್ನು ತಲುಪಬಹುದು. ಈ ರಸ್ತೆಯ ಒಂದು ಬದಿಯಲ್ಲಿ ಯಾವುದೋ ಕಾಲದಿಂದ  ಮುಂಡಪಳ್ಳ ಎಂಬ ಹೆಸರಿನ ಕೆರೆಯೂ ಹತ್ತಿರದಲ್ಲೇ ಗುಳಿಗನ ಕಟ್ಟೆಯೂ ಇತ್ತು.  ಹತ್ತಿರದಲ್ಲೇ ಒಂದು ಕಾಡುಪೆÇದೆ ತುಂಬಿಕೊಂಡ ಸ್ಥಳವೂ ಇತ್ತು. ಇತ್ತೀಚೆಗೆ ಇಚ್ಲಂಪಾಡಿ ಗ್ರಾಮದ ಕಾರಿಂಜೆ ಮಹಾದೇವ ಶಾಸ್ತಾರ ದೇವಸ್ಥಾನದಲ್ಲಿ ಪ್ರಶ್ನಾ ಚಿಂತನೆ ನಡೆದಾಗ ಮುಂಡಪಳ್ಳದ ಸಮೀಪ ದೇವಿಯ ದಿವ್ಯ ಸನ್ನಿಧಿ ಇರುವುದು ಕಂಡುಬಂದಿತು. ಸುಮಾರು ಎಂಟನೂರು ವರ್ಷಗಳ ಹಿಂದೆ ಅಲ್ಲಿ ವಾಸವಾಗಿದ್ದ ಇಚ್ಚಿಲತ್ತಾಯರು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾ ಬಂದಿರುವ ಕ್ಷೇತ್ರವೆಂದು ತಿಳಿದುಬಂದಿತ್ತು. ಜೊತೆಗೆ ಮಾಯಿಪ್ಪಾಡಿ ಅರಸರು ಮತ್ತು ಕೊಡ್ಯಮ್ಮೆಯ ಬಲ್ಲಾಳ ಮನೆತನದವರು ಆರಾಧಿಸಿಕೊಂಡು ಬಂದಿದ್ದ ದೇವಸ್ಥಾನವೆಂದೂ ಗೋಚರವಾಯಿತು. ಅಲ್ಲೇ ಸಮೀಪದಲ್ಲಿ ದರ್ಬಾರ್ ಕಟ್ಟೆ ಎಂಬ ಸ್ಥಳವಿದೆ. ಇಚ್ಲಂಪಾಡಿ ಮನೆಯಲ್ಲಿ ಮಾಯಿಪ್ಪಾಡಿ ಅರಸರಿಗೆ ಪಟ್ಟಾಭಿಷೇಕ ಮಾಡುತ್ತಿದ್ದ ಕಾಲದಲ್ಲಿ ಅಲ್ಲಿಂದ ಮುಂಡಪಳ್ಳಕ್ಕೆ ಬಂದು ದೇವಿಯ ಆರಾಧನೆ ಮಾಡಿ ಮೊದಲ ದರ್ಬಾರು ನಡೆಸಿ ಮಾಯಿಪ್ಪಾಡಿಗೆ ಅರಸರು ತೆರಳುವ ವಾಡಿಕೆ ಇದ್ದುದರಿಂದಲೇ ಇಲ್ಲಿಗೆ ದರ್ಬಾರ್ ಕಟ್ಟೆ ಎಂಬ ಹೆಸರು ಬಂತು ಎಂಬ ವಿಚಾರವೂ ಬೆಳಕಿಗೆ ಬಂತು.
        ಇಲ್ಲಿ ಕ್ಷೇತ್ರ ನಿರ್ಮಾಣವಾಗಬೇಕೆಂಬುದು ಚಿಂತನೆಯಲ್ಲಿ ಕಂಡುಬಂದುದರಿಂದಾಗಿ ಊರವರು ಆ ಬಗ್ಗೆ ಚಿಂತನೆ ನಡೆಸುವಂತಾಯಿತು. ಈ ಮಧ್ಯೆ ಸುಮಾರು ಅರ್ಧ ಎಕರೆಯಷ್ಟು ವಿಶಾಲವಾದ ಮುಂಡಪಳ್ಳಕ್ಕೆ ಕಾಯಕಲ್ಪವಾಗುವ ಯೋಗವೂ ಬಂದೊದಗಿತು. ಇದೀಗ ವರ್ಷವಿಡೀ ನೀರುತುಂಬಿಕೊಂಡಿರುವ ಮನೋಹರವಾದ ವಿಶಾಲ ಸರೋವರವಾಗಿ ಕಂಗೊಳಿಸುತ್ತಿದೆ. ಮುಂಡಪಳ್ಳದಲ್ಲಿ ದೇವಸ್ಥಾನ ನಿರ್ಮಾಣದ ಬಗ್ಗೆ ಪ್ರಸ್ತಾವನೆ ಬಂದಾಗ ದೈವಯೋಗವೆಂಬಂತೆ ದಿ. ಕುತ್ತಿಕ್ಕಾರು ಸುಬ್ಬಣ್ಣ ಶೆಟ್ಟರ ಪುತ್ರ ಮುಂಬಯಿ ಮಹಾನಗರದಲ್ಲಿ ಉದ್ಯಮಿ ಕೆ.ಕೆ. ಶೆಟ್ಟಿ ಅವರು ತಾನು ನಿರ್ಮಿಸಿಕೊಡುವುದಾಗಿ ಭರವಸೆ ನೀಡಿದರಲ್ಲದೆ ಮೂರು ವರ್ಷಗಳ ಹಿಂದೆ ಸುಮಾರು ಏಳು ಕೋಟಿ ರೂಪಾಯಿ ವೆಚ್ಚದ ಭವ್ಯ ದೇಗುಲಕ್ಕೆ ನೀಲನಕಾಶೆಯೂ ಸಿದ್ಧವಾಯಿತು. ಬ್ರಹ್ಮಶ್ರೀ ದೇಲಂಪಾಡಿ ಬಾಲಕೃಷ್ಣ ತಂತ್ರಿವರ್ಯರ ಮಾರ್ಗದರ್ಶನದಲ್ಲಿ ಆರಂಭವಾದ ಕ್ಷೇತ್ರ ನಿರ್ಮಾಣ ಕಾರ್ಯ ಭರದಿಂದ ಸಾಗಿ ಇದೀಗ ಅತ್ಯಂತ ಕಿರು ಅವಧಿಯಲ್ಲಿ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಸಿದ್ಧವಾಗಿದೆ.
        ತುಂಬಿಕೊಂಡಿದ್ದ ಕಾಡುಪೆÇದರುಗಳನ್ನು ಬಿಡಿಸಿ ಗರ್ಭಗುಡಿ, ನಮಸ್ಕಾರ ಮಂಟಪ, ಸುತ್ತುಗೋಪುರ, ತೀರ್ಥದ ಬಾವಿ, ಚಾಮುಂಡಿ, ಗುಳಿಗ ಮೊದಲಾದ ದೈವಗಳ ಕಟ್ಟೆಗಳು ಮೊದಲಾದುವುಗಳೆಲ್ಲ ನಿರ್ಮಾಣದ ಅಂತಿಮ ಹಂತದಲ್ಲಿವೆ. ಊರಪರವೂರ ಭಜಕರ ಒಗ್ಗಟ್ಟಿನ ಕಾರ್ಯಪ್ರವೃತ್ತಿ, ಶ್ರಮದಾನ ಇತ್ಯಾದಿಗಳಿಂದಲಾಗಿ ಅಪೂರ್ವವಾದ ಪೂರ್ಣ ಕೆಂಪುಕಲ್ಲಿನ ಮನೋಹರ ದೇವಸ್ಥಾನ ತಲೆಯೆತ್ತಿ ನಿಲ್ಲುವಂತಾಗಿದೆ. ಮುಂದಿನ ವರ್ಷ ಫೆಬ್ರವರಿ ತಿಂಗಳ 28 ರಿಂದ ಮಾರ್ಚ್ 7ರ ವರೆಗೆ ವೈಭವದ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಜರಗಲಿದೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries