ಮಂಜೇಶ್ವರ: ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ 43ನೇ ವರ್ಷದ ಶ್ರೀಅಯ್ಯಪ್ಪ ದೀಪೋತ್ಸವ ಸೋಮವಾರ ರಾತ್ರಿ ಸಂಪನ್ನಗೊಂಡಿತು.
ಸೋಮವಾರ ಬೆಳಗ್ಗೆ ಗಣಹೋಮ, ಶ್ರೀಹರಿನಾಮ ಸಂಕೀರ್ತನೆ, ನಿತ್ಯಪೂಜೆ,ಸಾರ್ವಜನಿಕ ಶ್ರೀಶನೈಶ್ಚರ ಪೂಜೆ, ಶ್ರೀಅಯ್ಯಪ್ಪ ಸ್ವಾಮಿಗೆ ತುಪ್ಪಾಭಿಷೇಕ, ಮಧ್ಯಾಹ್ನ ಮಹಾಪೂಜೆ,ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಶ್ರೀಅಯ್ಯಪ್ಪ ಸೇವಾ ಮಹಿಳಾ ಸಮಿತಿ ಮಾತೃಮಂದಿರ ಮಂಜೇಶ್ವರ ಹಾಗೂ ಓಜ ಸಾಹಿತ್ಯ ಕೂಟ ಬಂಗ್ರಮಂಜೇಶ್ವರ ತಂಡದವರಿಂದ ಭಜನೆ ನಡೆಯಿತು.
ಸಂಜೆ ವಾಮಂಜೂರು ಶ್ರೀಶಾಸ್ತಾವೇಶ್ವರ ದೇವಸ್ಥಾನದಿಂದ ಹೊರಟ ಶ್ರೀಅಯ್ಯಪ್ಪ ವೇಶಧಾರಿ ಯಾತ್ರೆಯಲ್ಲಿ ಕಟೀಲು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಚಕ್ರವರ್ತಿ ಹೊಸಂಗಡಿ ಸಂಸ್ಥೆ ವತಿಯಿಂದ ಶ್ರೀಕಟಿಲೇಶ್ವರಿ ಭ್ರಮರಾಂಬಿಕೆ ಸ್ತಬ್ದಚಿತ್ರ ಹಾಗೂ ಹೊಸಂಗಡಿ ಶ್ರೀಅಯ್ಯಪ್ಪ ಕ್ಷೇತ್ರದ ಅಯ್ಯಪ್ಪ ಪ್ರೆಂಡ್ಸ್ ಕ್ಲಬ್ ವತಿಯಿಂದ ನಾಗ ಕೊಪ್ಪರಿಗೆ ಸ್ತಬ್ದಚಿತ್ರ ಆಕರ್ಷಣೀಯವಾಗಿ ಪ್ರದರ್ಶನಗೊಂಡಿತು. ರಾತ್ರಿ ಘೋಷಯಾತ್ರೆ ಮೆರವಣಿಗೆ ಕ್ಷೇತ್ರಕ್ಕೆ ಆಗಮಿಸಿದ ಬಳಿಕ ಪಡಿಪೂಜೆ, ಶ್ರೀಅಯ್ಯಪ್ಪ ಮಹಾಪೂಜೆ, ಪ್ರಸಾದ ವಿತರಣೆ, ಅನ್ನಸಂತರ್ಪಣೆ ನಡೆಯಿತು. ಬಳಿಕ ಶಾರದಾ ಆಟ್ರ್ಸ್ ಹೊಸಂಗಡಿ ತಂಡದವರಿಂದ ಗಿರಿಗಿಟ್ ಗಿರಿಧರೆ ತುಳು ನಾಟಕ ಪ್ರದರ್ಶನ ನಡೆಯಿತು.