ಬದಿಯಡ್ಕ: ನೀರ್ಚಾಲು ಶ್ರೀಕುಮಾರಸ್ವಾಮಿ ಭಜನ ಸಂಘದ 45ನೇ ವಾರ್ಷಿಕೋತ್ಸವ ಇಂದು(ಬುಧವಾರ) ವಿವಿಧ ಧಾರ್ಮಿಕ, ಸಾಂಸ್ಕøತಿಕ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಬೆಳಿಗ್ಗೆ 6.30ಕ್ಕೆ ಗಣಪತಿ ಹವನ, ಧ್ವಜಾರೋಹಣ, ಆಶ್ಲೇಷ ಪೂಜಾರಂಭ, 9 ರಿಂದ ಆರ್ಟ್ ಆಫ್ ಲಿವಿಂಗ್ ನೀರ್ಚಾಲು ಘಟಕದವರಿಂದ ಹಾಗೂ 10.30 ರಿಂದ ಶ್ರೀಕುಮಾರಸ್ವಾಮಿ ಭಜನಾ ಸಂಘ ನೀರ್ಚಾಲು ತಂಡದವರಿಂದ ಭಜನಾ ಸತ್ಸಂಗ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ಬಳಿಕ 2 ರಿಂದ ಭಕ್ತಿಗೀತೆ, 3.30 ರಿಂದ ವಿದ್ಯಾಪಲ್ಲವಿ ಸುಗಮ ಸಂಗೀತ ಶಾಲೆ ನೀರ್ಚಾಲು ಇವರಿಂದ ನಟರಾಜ ಶರ್ಮ ನಿರ್ದೇಶನದಲ್ಲಿ ಸುಗಮ ಸಂಗೀತ ಮತ್ತು ಕೀಬೋರ್ಡ್ ವಾದನ ನಡೆಯಲಿದೆ.
ಸಂಜೆ 5ಕ್ಕೆ ಶ್ರೀಕುಮಾರಸ್ವಾಮಿ ಭಜನ ಮಂದಿರದ ಅಧ್ಯಕ್ಷ ಪಿ.ನಾರಾಯಣ ಶೆಟ್ಟಿ ಅವರ ಅಧ್ಯಕ್ಷತೆಯಲಲಿ ನಡೆಯಲಿರುವ ಧಾರ್ಮಿಕ ಸಭೆಯಲ್ಲಿ ವಿಜ್ಞಾನ ಭಾರತಿ ಜಿಲ್ಲಾ ಸಂಯೋಜಕ ಪ್ರಶಾಂತ್ ಉಬ್ರಂಗಳ ಧಾರ್ಮಿಕ ಉಪನ್ಯಾಸ ನೀಡುವರು. ವಿದ್ಯುತ್ ಇಲಾಖೆಯ ಅಭಿಯಂತರ ರಾಜಗೋಪಾಲ ನಾಯ್ಕ ಎ.ಕೆ.ಮುಖ್ಯ ಅತಿಥಿಗಳಾಗಿ ಉಪಸ್ಥಿತರಿರುವರು. ವೇದಮೂರ್ತಿ ಕಿಳಿಂಗಾರು ಶಂಕರನಾರಾಯಣ ಭಟ್, ತಿಮ್ಮಪ್ಪು ಗುರುಸ್ವಾಮಿ, ಚೇತನ್ ಕುಮಾರ್ ಉಪಸ್ಥಿತರಿರುವರು. ಈ ಸಂದರ್ಭ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯರಿಗೆ ಗೌರವಾರ್ಪಣೆ ನಡೆಯಲಿದೆ. ಕುಮಾರಸ್ವಾಮಿ ಭಜನಾ ಸಂಘದ ಕಾರ್ಯದರ್ಶಿ ಗಣೇಶ ಕೆ.ನೀರ್ಚಾಲು ವರದಿ ವಾಚಿಸುವರು. ಸಂಜೆ 6ರ ಬಳಿಕ ದೀಪ ಪ್ರತಿಷ್ಠೆ, ಭಜನೆ, ರಾತ್ರಿ 9.30ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ, ಪ್ರಸಾದ ಭೋಜನ ನಡೆಯಲಿದೆ. ರಾತ್ರಿ 9.30 ರಿಂದ ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ಲಕುಮಿ ಕಲಾತಂಡದವರಿಂದ ಗುಟ್ಟು ಗೊತ್ತಾಂಡ್ ತುಳು ಹಾಸ್ಯ ನಾಟಕ ಪ್ರದರ್ಶನ ನಡೆಯಲಿದೆ.