HEALTH TIPS

ಧರ್ಮವು ಸಾಮಾಜಿಕ ವ್ಯವಸ್ಥೆಗೆ ಆಧಾರ ಸ್ಥಂಭ : ಪ್ರಶಾಂತ್ ಉಬ್ರಂಗಳ- ನೀರ್ಚಾಲು ಕುಮಾರಸ್ವಾಮಿ ಭಜನ ಸಂಘದ 45ನೇ ವಾರ್ಷಿಕೋತ್ಸವ ಸಂಪನ್ನ


      ಬದಿಯಡ್ಕ: ಧರ್ಮದ ಜೊತೆ ಭಕ್ತಿ ಮಾರ್ಗದ ಮೂಲಕ ವ್ಯಕ್ತಿ ಮತ್ತು ಸಮಾಜವನ್ನು ಸಮನ್ವಯಗೊಳಿಸುವ ಕೇಂದ್ರಗಳೇ ಭಜನಾ ಮಂದಿರಗಳಾಗಿವೆ. ಧರ್ಮವು ಸಾಮಾಜಿಕ ವ್ಯವಸ್ಥೆಗೆ ಆಧಾರ ಸ್ಥಂಭ ಎಂದು ವಿಜ್ಞಾನ ಭಾರತಿ ಜಿಲ್ಲಾ ಸಂಯೋಜಕ ಪ್ರಶಾಂತ್ ಉಬ್ರಂಗಳ ಧಾರ್ಮಿಕ ಉಪನ್ಯಾಸದಲ್ಲಿ ತಿಳಿಸಿದರು.
       ಬುಧವಾರ ನೀರ್ಚಾಲು ಕುಮಾರ ಸ್ವಾಮಿ ಭಜನ ಸಂಘದ 45ನೇ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಡೆದ ಧಾರ್ಮಿಕ ಸಭೆಯಲ್ಲಿ ಅವರು ಮಾತನಾಡಿದರು.
   ಯುವ ಜನತೆ ಧರ್ಮವನ್ನು ಅಧ್ಯಯನ ಮಾಡುವತ್ತ ಮನಮಾಡಬೇಕು. ಪೌರಾಣಿಕ ಹಿನ್ನೆಲೆಯಿರುವ ನಮ್ಮ ಆಚರಣೆಗಳು, ಉತ್ಸವಗಳ ಮಹತ್ವವನ್ನು ಕುಟುಂಬ ವ್ಯವಸ್ಥೆಯ ನಡುವೆ ಮುಂದಿನ ಪೀಳಿಗೆಗೆ ತಿಳಿಸುವಂತಾಗಬೇಕು. ಭಕ್ತಿ ಮತ್ತು ಧಾರ್ಮಿಕ ಶ್ರದ್ಧೆಗಳನ್ನು ಜೀವನದಲ್ಲಿ ಬೆಳೆಸಿಕೊಳ್ಳಬೇಕು. ಶ್ರವಣ, ಸ್ಮರಣೆ, ಕೀರ್ತನೆ ಮೂರು ವಿಧದ ಭಕ್ತಿಯ ಸಂಗಮವೇ ಭಜನೆ. ಪುರಾಣದಲ್ಲಿ ನವವಿಧ ಭಕ್ತಿಯನ್ನು ಪ್ರಕಟಪಡಿಸಿದ ಅನೇಕ ಉದಾಹರಣೆಗಳು ನಮಗೆ ಪ್ರೇರಣಾದಾಯಿಯಾಗಿದೆ ಎಂದು ಅವರು ತಿಳಿಸಿದರು.
         ಶ್ರೀಕುಮಾರಸ್ವಾಮಿ ಭಜನ ಮಂದಿರದ ಅಧ್ಯಕ್ಷ ಪಿ.ನಾರಾಯಣ ಶೆಟ್ಟಿ ಅಧ್ಯಕ್ಷತೆಯನ್ನು ವಹಿಸಿದ್ದರು. ವೇದಮೂರ್ತಿ ಕಿಳಿಂಗಾರು ಶಂಕರನಾರಾಯಣ ಭಟ್, ತಿಮ್ಮಪ್ಪು ಗುರುಸ್ವಾಮಿ, ಚೇತನ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಂದಿರದ ಗುರುಸ್ವಾಮಿ ಸುಬ್ರಹ್ಮಣ್ಯ ಆಚಾರ್ಯರಿಗೆ ಗೌರವಾರ್ಪಣೆ ನಡೆಯಿತು. ಕುಮಾರಸ್ವಾಮಿ ಭಜನಾ ಸಂಘದ ಕಾರ್ಯದರ್ಶಿ ಗಣೇಶ ಕೆ. ನೀರ್ಚಾಲು ವರದಿ ವಾಚಿಸಿದರು. ಕುಮಾರಸ್ವಾಮಿ ಭಜನಾ ಸಂಘದ ಜೊತೆಕಾರ್ಯದರ್ಶಿ ಬಾಲಕೃಷ್ಣ ನಾಯ್ಕ ಸ್ವಾಗತಿಸಿ, ಸಮಿತಿಯ ಸದಸ್ಯ ಕೃಷ್ಣ ನಾಯ್ಕ ಮಲ್ಲಡ್ಕ ವಂದಿಸಿದರು. ರವೀಂದ್ರ ಮಾಸ್ಟರ್ ನೀರ್ಚಾಲು ನಿರೂಪಿಸಿದರು.
   ಬೆಳಗ್ಗೆ ಗಣಪತಿ ಹವನ, ಆಶ್ಲೇಷ ಪೂಜೆ, ಭಜನಾ ಸತ್ಸಂಗ ನಡೆಯಿತು. ಮಧ್ಯಾಹ್ನ ಮಹಾಪೂಜೆ, ಪ್ರಸಾದ ಭೋಜನದಲ್ಲಿ ಊರಪರವೂರ ಭಕ್ತಾದಿಗಳು ಪಾಲ್ಗೊಂಡಿದ್ದರು. ಭಕ್ತಿಗೀತೆ, ವಿದ್ಯಾಪಲ್ಲವಿ ಸುಗಮ ಸಂಗೀತ ಶಾಲೆ ನೀರ್ಚಾಲು ಇವರಿಂದ ನಟರಾಜ ಶರ್ಮ ನಿರ್ದೇಶನದಲ್ಲಿ ಸುಗಮ ಸಂಗೀತ ಮತ್ತು ಕೀಬೋರ್ಡ್ ವಾದನ ನಡೆಯಿತು. ರಾತ್ರಿ ಕಿಶೋರ್ ಡಿ.ಶೆಟ್ಟಿ ನಿರ್ದೇಶನದ ಲಕುಮಿ ಕಲಾತಂಡದವರಿಂದ ಗುಟ್ಟು ಗೊತ್ತಾಂಡ್ ತುಳು ಹಾಸ್ಯ ನಾಟಕ ಪ್ರದರ್ಶನಗೊಂಡಿತು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries