HEALTH TIPS

ಪಿಎಸ್ ಎಲ್ ವಿ-ಸಿ48 ರಾಕೆಟ್ ಯಶಸ್ವಿ ಉಡಾವಣೆ; ನಭಕ್ಕೆ ಹಾರಿದ 2ನೇ 'ಗುಪ್ತಚರ ಉಪಗ್ರಹ'

           
      ಶ್ರೀಹರಿಕೋಟಾ: ಭಾರತೀಯ ಬಾಹ್ಯಾಕಾಶ ಸಂಸ್ಥೆ ಇಸ್ರೋ ನಿರ್ಮಿತ ಪಿಎಸ್ ಎಲ್ ವಿ-ಸಿ48 ರಾಕೆಟ್ ಯಶಸ್ವಿಯಾಗಿ ನಭಕ್ಕೆ ಹಾರಿದ್ದು, ತನ್ನೊಂದಿಗೆ ವಿದೇಶಿ 9 ಉಪಗ್ರಹಗಳೂ ಸೇರಿದಂತೆ ಒಟ್ಟು 10 ಉಪಗ್ರಹಗಳನ್ನು ಯಶಸ್ವಿಯಾಗಿ ಬಾಹ್ಯಾಕಾಶದತ್ತ ಕೊಂಡೊಯ್ದಿದೆ.
       ಆಂಧ್ರ ಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರದಿಂದ ಪಿಎಸ್ ಎಲ್ ವಿ ಸಿ-48 ರಾಕೆಟ್ ಅನ್ನು ಉಡಾವಣೆ ಮಾಡಲಾಗಿದ್ದು, ರಾಕೆಟ್ ಭಾರತದ 628 ಕೆ.ಜಿ. ತೂಕದ ಭೂ ಪರಿವೀಕ್ಷಣಾ ಉಪಗ್ರಹ ರಿಸ್ಯಾಟ್-2ಬಿ ಆರ್ ಐ ಸೇರಿದಂತೆ ಇತರ ವಿವಿಧ ದೇಶಗಳ 9 ವಾಣಿಜ್ಯ ಉಪಗ್ರಹಗಳನ್ನು ಕಕ್ಷೆಗೆ ಸೇರಿಸಲಿದೆ.  ಈ ಉಡಾವಣೆ ಮೂಲಕ ಶ್ರೀಹರಿಕೋಟಾ ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರ ಮತ್ತೊಂದು ಮೈಲಿಗಲ್ಲು ಸ್ಥಾಪಿಸಿದ್ದು, ಇದು ಸತೀಶ್ ಧವನ್ ಬಾಹ್ಯಾಕಾಶ ಉಡಾವಣಾ ಕೇಂದ್ರಕ್ಕೆ 50ನೇ ಯಶಸ್ವಿ ಉಡಾವಣೆಯಾಗಿದೆ.
     ಪಿಎಸ್‍ಎಲ್‍ವಿ ಸಿ-48ಯೊಂದಿಗೆ ನಭಕ್ಕೆ ಹಾರಿರುವ 10 ಉಪಗ್ರಹಗಳ ಪೈಕಿ 9 ಉಪಗ್ರಹಗಳು ವಿದೇಶದಾಗಿದ್ದು, ಇದರಲ್ಲಿ ಇಸ್ರೋ ನಿರ್ಮಿತ ' ರಾಡಾರ್ ಇಮೇಜಿಂಗ್ ಅರ್ಥ್ ಅಬ್ಸರ್ವೇಶನ್ ಸ್ಯಾಟಲೈಟ್ ರಿಸಾಟ್ -2 ಬಿಆರ್ 1 ಉಪಗ್ರಹ ಕೂಡ ನಭಕ್ಕೆ ಹಾರಿದ್ದು, ಇದನ್ನು ದೇಶದ ಎರಡನೇ 'ಗುಪ್ತಚರ ಕಣ್ಣು' ಎಂದೇ ಕರೆಯಲಾಗುತ್ತದೆ. ಇದಲ್ಲದೆ ಅಮೆರಿಕದ 6, ಇಸ್ರೇಲ್ ನ 1, ಇಟಲಿಯ 1 ಮತ್ತು ಜಪಾನ್ ನ 1 ಉಪಗ್ರಹಗಳು ಸೇರಿವೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries