ನವದೆಹಲಿ: ಪ್ರಮುಖ ನೀತಿ ದರದಲ್ಲಿ ಯಾವುದೇ ಬದಲಾವಣೆ ಮಾಡದೆ ಶೇಕಡಾ 5.15ರಷ್ಟು ಮುಂದುವರಿಸಿರುವ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಆರ್ಥಿಕತೆಯನ್ನು ಬೆಂಬಲಿಸುವ ತನ್ನ ನಿಲುವನ್ನು ಮುಂದುವರಿಸಲು ನಿರ್ಧರಿಸಿದೆ.
2019-20ನೇ ಸಾಲಿನಲ್ಲಿ ಜಿಡಿಪಿ ಅಭಿವೃದ್ಧಿ ದರವನ್ನು ಪರಿಷ್ಕøತಗೊಳಿಸಿರುವ ಆರ್ ಬಿಐ ಕಳೆದ ಅಕ್ಟೋಬರ್ ನಲ್ಲಿ ಇದ್ದ ಶೇಕಡಾ 6.1ರಿಂದ ಶೇಕಡಾ 5ಕ್ಕೆ ಇಳಿಕೆ ಮಾಡಿದೆ.
ಭವಿಷ್ಯದ ಯೋಜನೆಗಳಿಗೆ ವಿತ್ತೀಯ ನೀತಿಯನ್ನು ಗುರುತಿಸಿರುವ ವಿತ್ತೀಯ ನೀತಿ ಸಮಿತಿ(ಎಂಪಿಸಿ) ಹಣದುಬ್ಬರವನ್ನು ಆರ್ಥಿಕ ವರ್ಷ 2020-21ಕ್ಕೆ 5.1-4.7ರಿಂದ 4-3.8ಕ್ಕೆ ಪರಿಷ್ಕೃತಗೊಳಿಸಿದೆ. ಕಳೆದ ಫೆಬ್ರವರಿಯಿಂದ ಅಕ್ಟೋಬರ್ ನಡುವೆ ಆರ್ ಬಿಐ ರೆಪೆÇ ದರವನ್ನು 135 ಬೇಸಿಸ್ ಪಾಯಿಂಟ್ ಗೆ ಇಳಿಕೆ ಮಾಡಿದೆ.