ನವದೆಹಲಿ: ಅಪರೂಪ ಎಂಬಂತೆ 50 ವರ್ಷಕ್ಕೂ ಮೇಲ್ಪಟ್ಟ 32 ರೈಲ್ವೆ ಅಧಿಕಾರಿಗಳ ನೀರಸ ಸಾಮಥ್ರ್ಯ ಪ್ರದರ್ಶನದಿಂದಾಗಿ ಅವರಿಗೆ ಅವಧಿಗೂ ಮುನ್ನವೇ ನಿವೃತ್ತಿ ನೀಡಲಾಗಿದೆ.
ಆಗಾಗ ನಡೆಸುವ ಪರಿಶೀಲನೆಯಲ್ಲಿ ಅಸಮರ್ಥತತೆ, ಅಪರಿಪೂರ್ಣತೆ ಕಂಡುಬಂದ ಹಿನ್ನೆಲೆಯಲ್ಲಿ ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆಯಲ್ಲಿ 50 ವರ್ಷಕ್ಕೂ ಮೇಲ್ಪಟ್ಟ 32 ಅಧಿಕಾರಿಗಳಿಗೆ ಅಕಾಲಿಕ ನಿವೃತ್ತಿ ಘೋಷಿಸಲಾಗಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
2016-17ರಲ್ಲಿ ಮೊದಲ ಬಾರಿಗೆ ನಾಲ್ಕು ಅಧಿಕಾರಿಗಳಿಗೆ ಇದೇ ರೀತಿಯಲ್ಲಿ ಅಕಾಲಿಕ ನಿವೃತ್ತಿ ನೀಡಲಾಗಿತ್ತು. ನಿರ್ದಿಷ್ಟ ವಯಸ್ಸು ತಲುಪುವವರ ಬಗ್ಗೆ ಆಗಾಗ್ಗೆ ಪರಿಶೀಲನೆ ನಡೆಸುವುದು ಸರ್ಕಾರಿ ನೌಕರರ ಸೇವಾ ನಿಯಮಗಳ ಭಾಗವಾಗಿದೆ. ಆದರೆ ಅವರು ಅಕಾಲಿಕವಾಗಿ ನಿವೃತ್ತರಾಗುತ್ತಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.