ಬೆಂಗಳೂರು: ಶ್ರೀ ಅಖಿಲ ಹವ್ಯಕ ಮಹಾಸಭೆಯ ಅಧ್ಯಕ್ಷರಾಗಿ 5ನೇ ಬಾರಿಗೆ ಸರ್ವಾನುಮತದಿಂದ ಡಾ. ಗಿರಿಧರ ಕಜೆ ಆಯ್ಕೆಯಾಗಿದ್ದಾರೆ.
ಶ್ರೀ ಅಖಿಲ ಹವ್ಯಕ ಮಹಾಸಭೆಯ 76ನೇ ವರ್ಷದ ಸರ್ವಸದಸ್ಯರ ಸಭೆ ಭಾನುವಾರ ಮಲ್ಲೇಶ್ವರದ ಹವ್ಯಕ ಭವನದಲ್ಲಿ ನಡೆಯಿತು. ಉತ್ತರಕನ್ನಡ, ಬೆಂಗಳೂರು, ಶಿವಮೊಗ್ಗ, ಕೊಡಗು, ಕಾಸರಗೋಡು ವ್ಯಾಪ್ತಿಯ 15 ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಿಗದಿಯಾಗಿತ್ತು. ಎಲ್ಲ 15 ಸ್ಥಾನಗಳಿಗೂ ನಿರ್ದೇಶಕರು ಅವಿರೋಧವಾಗಿ ಆಯ್ಕೆಯಾಗುವ ಮೂಲಕ ಹವ್ಯಕ ಸಮಾಜದ ಸಂಘಟನೆಯ ಒಗ್ಗಟ್ಟು ಪ್ರದರ್ಶಿತವಾಯಿತು. ಚುನಾವಣಾಧಿಕಾರಿ ರಾಮಭಟ್ ಅವಿರೋಧ ಆಯ್ಕೆಯನ್ನು ಹಾಗೂ ನೂತನ ನಿರ್ದೇಶಕರನ್ನು ಘೋಷಿಸಿದರು.ಸರ್ವಸದಸ್ಯರ ಮಹಾಸಭೆಯ ಅಧ್ಯಕ್ಷತೆ ವಹಿಸಿದ್ದ ಡಾ. ಗಿರಿಧರ ಕಜೆ, ಮಹಾಸಭೆಯ ಕಾರ್ಯಕ್ರಮಗಳಿಗೆ ಸಮಾಜದಿಂದ ಅಭೂತಪೂರ್ವ ಸ್ಪಂದನೆ ವ್ಯಕ್ತವಾಗುತ್ತಿದೆ. ಕಳೆದ ವರ್ಷಗಳಲ್ಲಿ ಅನೇಕಾನೇಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಮಾಜದಲ್ಲಿ ಜಾಗೃತಿ ಮೂಡಿಸಿದೆ. ಇಂತಹ ಕಾರ್ಯಕ್ರಮಗಳಿಗೆ ಇನ್ನೂ ಹೆಚ್ಚಿನ ಬಲ ತುಂಬಲು 25 ವಿವಿಧ ಹವ್ಯಕ ವೇದಿಕೆಗಳಿಗೆ ಚಾಲನೆ ನೀಡಲಾಗಿದ್ದು, ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದರು.
ಈ ಬಾರಿ ಚುನಾವಣೆಯ ಬದಲು, ನಿರ್ದೇಶಕ ಸ್ಥಾನಗಳಿಗೆ ಅವಿರೋಧವಾಗಿ ಆಯ್ಕೆಯಾಗುವಂತಾಗಿರುವುದು ಸಮಾಜದಲ್ಲಿ ಸಂಘಟನೆಯ ಶಕ್ತಿಯನ್ನು ಹಾಗೂ ಒಗ್ಗಟ್ಟನ್ನು ತಿಳಿಸುತ್ತದೆ. ಸಮಾಜವನ್ನು ಒಡೆಯುವ ಪ್ರಯತ್ನಗಳ ಶಕ್ತಿಕುಂದಿದ್ದು, ಅಂತಹ ಹೀನಮನಸ್ಕರ ಧ್ವನಿ ಕುಂದಿದೆ. ಅಂತಹ ಪ್ರಯತ್ನಗಳನ್ನು ಸಮಾಜ ಮೆಟ್ಟಿ ನಿಂತಿರುವುದಕ್ಕೆ ಈ ಅವಿರೋಧ ಆಯ್ಕೆಯೇ ಸ್ಪಷ್ಟನಿದರ್ಶನ ಎಂದರು.
ಗಾಯತ್ರೀ ಮಹೋತ್ಸವಕ್ಕೆ ನಿರ್ಧಾರ:
ಹವ್ಯಕ ಮಹಾಸಭೆಯಿಂದ ಗಾಯತ್ರೀ ಮಂತ್ರದ ಮಹತ್ವವನ್ನು ತಿಳಿಸುವ ಸಲುವಾಗಿ ಈ ವರ್ಷ ಗಾಯತ್ರಿ ಮಹೋತ್ಸವ ಆಚರಿಸಲು ನಿರ್ಧರಿಸಲಾಗಿದೆ ಎಂದು ಡಾ. ಕಜೆ ತಿಳಿಸಿದರು. ಪ್ರಧಾನ ಕಾರ್ಯದರ್ಶಿ ಸಿ.ಎ. ವೇಣುವಿಘ್ನೇಶ್ ಸಂಪ ಕಾರ್ಯಕ್ರಮ ನಡೆಸಿಕೊಟ್ಟು, ಸದಸ್ಯರ ಪ್ರಶ್ನೆಗಳಿಗೆ ಉತ್ತರಿಸಿದರು. ಕೋಶಾಧಿಕಾರಿ ಕೃಷ್ಣಮೂರ್ತಿ ಭಟ್ ಯಲಹಂಕ ಲೆಕ್ಕಪತ್ರಗಳನ್ನು ಸರ್ವಸದಸ್ಯರ ಸಭೆಯಲ್ಲಿ ಮಂಡಿಸಿದರು.
ನೂತನ ಪದಾಧಿಕಾರಿಗಳ ಆಯ್ಕೆ:
ಅಧ್ಯಕ್ಷರಾಗಿ ಡಾ. ಗಿರಿಧರ ಕಜೆ 5ನೇ ಬಾರಿಗೆ ಸರ್ವಾನುಮತದಿಂದ ಪುನರಾಯ್ಕೆಯಾದರು. ಉಪಾಧ್ಯಕ್ಷರಾಗಿ ಶ್ರೀಧರ ಜೆ ಭಟ್, ಕೆಕ್ಕಾರು ಹಾಗೂ ಆರ್.ಎಂ. ಹೆಗಡೆ ಬಾಳೇಸರ. ಪ್ರಧಾನ ಕಾರ್ಯದರ್ಶಿಯಾಗಿ ಸಿ.ಎ. ವೇಣುವಿಘ್ನೇಶ ಸಂಪ, ಕಾರ್ಯದರ್ಶಿಗಳಾಗಿ ಪ್ರಶಾಂತಕುಮಾರ ಭಟ್ ಯಲ್ಲಾಪುರ ಹಾಗೂ ಶ್ರೀಧರ ಭಟ್ ಸಾಲೇಕೊಪ್ಪ, ಕೋಶಾಧಿಕಾರಿಯಾಗಿ ಕೃಷ್ಣಮೂರ್ತಿ ಎಸ್. ಭಟ್ ಆಯ್ಕೆಯಾದರು.
ಉಪಾಧ್ಯಕ್ಷರಾದ ಕೆಕ್ಕಾರು ಶ್ರೀಧರ ಭಟ್, ಎಂ.ಆರ್. ಹೆಗಡೆ ಬಾಳೆಸರ, ಕಾರ್ಯದರ್ಶಿಗಳಾದ ಪ್ರಶಾಂತ ಭಟ್, ಸಾಲೆಕೊಪ್ಪ ಶ್ರೀಧರ ಭಟ್ ಹಾಗೂ ಚುನಾವಣಾಧಿಕಾರಿ ರಾಮಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಮಹಾಸಭೆಯ ಮಾಜಿ ಅಧ್ಯಕ್ಷರಾದ ಎಸ್.ಜಿ. ಹೆಗಡೆ, ಕಲಸಿ ಶ್ರೀಧರ ಭಟ್ ಸೇರಿ ಹಿರಿಯ ಮಾಜಿ ಪದಾಧಿಕಾರಿಗಳು ಹಾಗೂ ಉತ್ತರ ಕನ್ನಡ, ಶಿವಮೊಗ್ಗ, ದಕ್ಷಿಣ ಕನ್ನಡ, ಕಾಸರಗೋಡು ಹಾಗೂ ಬೆಂಗಳೂರಿನ ನೂರಾರು ಸದಸ್ಯರು ವಾರ್ಷಿಕ ಮಹಾಸಭೆಯಲ್ಲಿ ಪಾಲ್ಗೊಂಡರು.
ನೂತನವಾಗಿ ಆಯ್ಕೆಯಾದ 15 ನಿರ್ದೇಶಕರು:
ಉತ್ತರ ಕನ್ನಡ: ರಾಮಚಂದ್ರ ಗಣೇಶ ಹೆಗಡೆ, ರಾಮಚಂದ್ರ ಎಂ. ಹೆಗಡೆ, ಹಂಡ್ರಮನೆ ಗೋಪಾಲಕೃಷ್ಣ ಭಟ್
ಬೆಂಗಳೂರು: ಶ್ರೀಧರ ಭಟ್ ಕೆಕ್ಕಾರು, ಡಾ ಗಿರಿಧರ ಕಜೆ, ಯು.ಎಸ್. ಜಿ. ಭಟ್, ಮೋಹನ ಭಾಸ್ಕರ ಹೆಗಡೆ ನಾರಾಯಣ ಭಟ್ ಹುಳೇಗಾರು, ರಮಾನಾಥ ಹೆಗಡೆ
ಶಿವಮೊಗ್ಗ: ಬಾಲಸುಬ್ರಮಣ್ಯ ಕೆ, ಅಶೋಕ ಎಚ್ .ಬಿ., ರಾಜಲಕ್ಷ್ಮೀ ದೇವಪ್ಪ
ಕೊಡಗು: ಪುರುಷೋತ್ತಮ ಡಿ.ಐ, ಕಾಸರಗೋಡು: ಗೋವಿಂದ ಭಟ್
ಹೊರರಾಜ್ಯ: ರಮಣ ಎಸ್. ಭಟ್.