ಕಾಸರಗೋಡು: ಜಿಲ್ಲೆಯಲ್ಲಿ 2013 ರಿಂದ 2019 (ಅ.31 ವರೆಗೆ) ವರೆಗೆ 513 ಪೆÇೀಕ್ಸೋ ಕೇಸುಗಳು ದಾಖಲಾಗಿವೆ. ಮಕ್ಕಳ ವಿರುದ್ಧ ನಡೆಯುವ ದೌರ್ಜನ್ಯಕ್ಕೆ ಸಂಬಂಧ ಪಟ್ಟ ಕಾನೂನು ಕ್ರಮ ಇದಾಗಿದೆ. ಇವುಗಳಲ್ಲಿ 58 ಪ್ರಕರಣಗಳಲ್ಲಿ ಆರೋಪಿಗಳಿಗೆ ಸಜೆ ವಿಧಿಸಲಾಗಿದೆ. 142 ಪ್ರಕರಣಗಳಲ್ಲಿ ಆರೋಪಿಗಳನ್ನು ದೋಷಮುಕ್ತಗೊಳಿಸಲಾಗಿದೆ. 23 ಪ್ರಕರಣಗಳನ್ನು ರದ್ದುಗೊಳಿಸಲಾಗಿದೆ. 20 ಪ್ರಕರಣಗಳನ್ನು ಇತರ ರೂಪದಲ್ಲಿ ತೀರ್ಪುಗೊಳಿಸಲಾಗಿದೆ. ಉಳಿದ ಪ್ರಕರಣಗಳಲ್ಲಿ ಕಾನೂನು ಕ್ರಮಗಳು ಮುಂದುವರಿಯುತ್ತಿವೆ.
ಜಿಲ್ಲಾ ಕ್ರೈಂ ರೆಕಾರ್ಡ್ ಬ್ಯೂರೋದ ದಾಖಲೆಗಳಲ್ಲಿ ತಿಳಿಸಲಾದ ಮಾಹಿತಿಗಳು ಇವು. ಮಕ್ಕಳ ವಿರುದ್ಧ ನಡೆದ ದೌರ್ಜನ್ಯಕ್ಕೆ ಸಂಬಂಧಿಸಿ 2018 ರಲ್ಲಿ ಅತ್ಯಧಿಕ ಪ್ರಕರಣಗಳು ದಾಖಲಾಗಿವೆ. ಈ ವರ್ಷ ಅ.31 ವರೆಗೆ 173 ಪ್ರಕರಣಗಳನ್ನು ದಾಖಲಿಸಲಾಗಿದೆ. ಇದರಲ್ಲಿ 131 ಪೆÇೀಕ್ಸೋ ಕೇಸುಗಳಿವೆ.