ಕಾಸರಗೋಡು: ಬೀದಿ ನಾಯಿಗಳ ಸಂತಾನ ನಿಯಂತ್ರಣ ಅಂಗವಾಗಿ ಜಾರಿಗೊಳಿಸುವ 'ಎನಿಮಲ್ ಬರ್ತ್ ಕಂಟ್ರೋಲ್' (ಎ.ಬಿ.ಸಿ)ಯೋಜನೆ ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಜಾರಿಗೊಳ್ಳುತ್ತಿದ್ದು, ಯೋಜನೆಯ ಅಂಗವಾಗಿ ನವೆಂಬರ್ 30 ವರೆಗೆ 6219 ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಲಾಗಿದೆ.
ನವೆಂಬರ್ ತಿಂಗಳಲ್ಲಿ ಮಾತ್ರ 249 ಬೀದಿನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಕ್ರಿಯೆ ನಡೆಸಲಾಗಿದೆ. ಕಾಸರಗೋಡು ನಗರಸಭೆ ವ್ಯಾಪ್ತಿಯಲ್ಲಿ 707, ಬದಿಯಡ್ಕದಲ್ಲಿ 315, ಚೆಮ್ನಾಡಿನಲ್ಲಿ 93,ಚೆಂಗಳದಲ್ಲಿ 139, ಕುಂಬಳೆಯಲ್ಲಿ 337, ಮಧೂರಿನಲ್ಲಿ 253,ಮೊಗ್ರಾಲ್ ಪುತ್ತೂರಿನಲ್ಲಿ 80, ಮಂಗಲ್ಪಾಡಿಯಲ್ಲಿ 141, ಮುಳಿಯಾರಿನಲ್ಲಿ 62, ಉದುಮಾದಲ್ಲಿ 248, ಪಳ್ಳಿಕ್ಕರೆಯಲ್ಲಿ 169, ಕಾಞಂಗಾಡ್‍ನಲ್ಲಿ 580, ಪುಲ್ಲೂರು-ಪೆರಿಯದಲ್ಲಿ 525, ಮೀಂಜದಲ್ಲಿ 130, ಪುತ್ತಿಗೆಯಲ್ಲಿ 123, ಅಜಾನೂರುನಲ್ಲಿ 33,ಮಂಜೇಶ್ವರದಲ್ಲಿ 290, ಚೆರುವತ್ತೂರಿನಲ್ಲಿ 173, ನೀಲೇಶ್ವರ-ಕರಿಂದಳಂನಲ್ಲಿ 288, ತ್ರಕರಿಪುರದಲ್ಲಿ198,ಮಡಿಕೈ ಯಲ್ಲಿ 51,ಪೆರ್ಲದಲ್ಲಿ 94, ವರ್ಕಾಡಿಯಲ್ಲಿ 47, ಕುಂಬ್ಡಾಜೆಯಲ್ಲಿ 23, ಪೈವಳಿಕೆಯಲ್ಲಿ 218, ಬೇಡಡ್ಕದಲ್ಲಿ 117, ಮುಳ್ಳೇರಿಯದಲ್ಲಿ 136, ಎಣ್ಮಕಜೆಯಲ್ಲಿ 105, ಪಡನ್ನದಲ್ಲಿ 48, ಪಿಲಿಕೋಡ್‍ನಲ್ಲಿ 30, ಕಯ್ಯೂರು-ಚೀಮೇನಿಯಲ್ಲಿ 145, ದೇಲಂಪಾಡಿಯಲ್ಲಿ 57, ಕಾರಡ್ಕದಲ್ಲಿ69, ಕುತ್ತಿಕೋಲ್‍ನಲ್ಲಿ 195 ನಾಯಿಗಳ ಸಂತಾಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲಾಗಿದೆ.
ಕಾಸರಗೋಡು ಎ.ಡಿ.ಸಿ.ಪಿ.ಕಚೇರಿಯಲ್ಲಿ ಬೀನಾಯಿಗಳ ಜನನ ನಿಯಂತ್ರಣ ಸಂಬಂಧ ಮೋನಿಟರಿಂಗ್ ಸಭೆ ಜರುಗಿತು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎ.ಜಿ.ಸಿ.ಬಶೀರ್ ಅಧ್ಯಕ್ಷತೆ ವಹಿಸಿದ್ದರು. ಸಹಾಯಕ ನಿರ್ದೇಶಕ ಡಾ.ಪಿ.ನಾಗರಾಜ್, ಪಶು ವೈದ್ಯಕೀಯ ಅಧಿಕಾರಿ ಡಾ.ಬಿ.ಶಿವ ನಾಯಕ್, ಹಿರಿಯ ಪಶು ವೈದ್ಯ ಸರ್ಜನ್ ಡಾ.ಎ.ಮುರಳೀಧರ್, ಡಾ.ಶ್ರವಣ್ ಮೊದಲಾದವರು ಉಪಸ್ಥಿತರಿದ್ದರು.