ಕಾಸರಗೋಡು: ಅಡ್ಕತ್ತಬೈಲಿನ ಶ್ರೀ ಸುಬ್ರಹ್ಮಣ್ಯ ಭಜನಾ ಮಂದಿರದಲ್ಲಿ 64 ನೇ ಷಷ್ಠಿ ಮಹೋತ್ಸವ ನ.30 ರಂದು ಆರಂಭಗೊಂಡಿದ್ದು ಡಿ.2 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ನ.30 ರಂದು ಬೆಳಗ್ಗೆ ಗುರು ಪೂಜೆ, ಮಹಾಗಣಪತಿ ಹೋಮ, ಬೆಳಗ್ಗಿನ ಪೂಜೆ, ಸಾಮೂಹಿಕ ಪ್ರಾರ್ಥನೆ, ಶ್ರೀ ಸತ್ಯನಾರಾಯಣ ಪೂಜೆ, ಮಧ್ಯಾಹ್ನ ಪೂಜೆ, ಅನ್ನದಾನ, ರಾತ್ರಿ ದೀಪಾರಾಧನೆ, ಭಜನೆ ಮಹಾಪೂಜೆ, ಗೀತಾ ಸಾಹಿತ್ಯ ಸಂಭ್ರಮ ನಡೆಯಿತು.
ಡಿ.1 ರಂದು ಬೆಳಗ್ಗೆ 6 ಕ್ಕೆ ಗುರುಪೂಜೆ, 6.30 ಕ್ಕೆ ಮಹಾಗಣಪತಿ ಹೋಮ, 8 ಕ್ಕೆ ಪೂಜೆ, 10.30 ಕ್ಕೆ ನಾಗತಂಬಿಲ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, 1 ಕ್ಕೆ ಅನ್ನದಾನ, ಸಂಜೆ 6 ಕ್ಕೆ ಭಗವತಿ ಸೇವೆ, ರಾತ್ರಿ 7 ಕ್ಕೆ ದೀಪಾರಾಧನೆ, ಭಜನೆ, 9.15 ಕ್ಕೆ ಮಹಾಪೂಜೆ, 9.30 ಕ್ಕೆ ನೃತ್ಯ ಕಾರ್ಯಕ್ರಮಗಳು ನೆರವೇರಿತು.
ಇಂದು ಬೆಳಗ್ಗೆ 4.30 ಕ್ಕೆ ಗುರುಪೂಜೆ, 5 ಕ್ಕೆ ಮಹಾಗಣಪತಿ ಹೋಮ, 8 ಕ್ಕೆ ಬೆಳಗ್ಗಿನ ಪೂಜೆ, 10 ಕ್ಕೆ ಕಲಶ ಪೂಜೆ, 10.30 ಕ್ಕೆ ಹುಲ್ಪೆ ಮೆರವಣಿಗೆ, 11.15 ಕ್ಕೆ ಕಲಶಾಭಿಷೇಕ, ದ್ರವ್ಯಾಭಿಷೇಕ, ಮಧ್ಯಾಹ್ನ 12 ಕ್ಕೆ ಭಜನೆ, 12.30 ಕ್ಕೆ ಮಹಾಪೂಜೆ, ಬಲಿವಾಡು, ಅನ್ನದಾನ, ಪ್ರಸಾದ ವಿತರಣೆ, ಸಂಜೆ 5 ಕ್ಕೆ ತಾಯಂಬಕ, 6 ರಿಂದ ವಿವಿಧ ಭಜನಾ ಸಂಘದವರಿಂದ ಭಜನೆ, ರಾತ್ರಿ 7 ಕ್ಕೆ ದೀಪಾರಾಧನೆ, 10 ಕ್ಕೆ ಹುಲ್ಪೆ ಮೆರವಣಿಗೆ, 11.50 ಕ್ಕೆ ಮಹಾಪೂಜೆ, ಪ್ರಸಾದ ವಿತರಣೆ ನಡೆಯಲಿದೆ.