ಕಾಸರಗೋಡು: ನಗರದ ಪ್ರಸಿದ್ಧ ಶ್ರೀ ಶಾರದಾಂಬಾ ಭಜನಾ ಮಂದಿರದಲ್ಲಿ 65ನೇ ವರ್ಷದ ಏಕಹಾ ಭಜನೆಯು ಡಿ.21 ಶನಿವಾರ ಸೂರ್ಯೋದಯದಿಂದ ಆರಂಭವಾಗಿ ಡಿ.22 ರವಿವಾರ ಸೂರ್ಯೋದಯದ ತನಕ ವರ್ಷಂಪ್ರತಿಯಂತೆ ವಿಜೃಂಭಣೆಯಿಂದ ಜರಗಲಿದೆ.
ಅಂದು ಬೆಳಗ್ಗೆ 5.30ಕ್ಕೆ ಗಣಪತಿ ಹೋಮ, ಸೂರ್ಯೋದಯಕ್ಕೆ ದೀಪ ಪ್ರತಿಷ್ಠೆ ಮತ್ತು ಭಜನೆ ಪ್ರಾರಂಭ, ಮಧ್ಯಾಹ್ನ 12.30ಕ್ಕೆ ಮಹಾಪೂಜೆ, 1 ಕ್ಕೆ ಅನ್ನ ಸಂತರ್ಪಣೆ, ರಾತ್ರಿ 12.30ಕ್ಕ್ಕೆ ಮಹಾಪೂಜೆ ನಡೆಯಲಿದೆ. ಏಕಹಾ ಭಜನೆಯಲ್ಲಿ ವಿವಿಧ ಭಜನಾ ಮಂಡಳಿಯವರಿಂದ ಭಜನಾ ಸಂಕೀರ್ತನೆಯು ಜರಗಲಿದೆ. ಅಲ್ಲದೆ ರಾತ್ರಿ ಸೇವಾ ಸಂಘದ ಅಧ್ಯಕ್ಷರ ಹಾಗೂ ಅಯ್ಯಪ್ಪ ಭಕ್ತವೃಂದದ ವತಿಯಿಂದ ಹುಲ್ಪೆ ಮೆರವಣಿಗೆಯು ಮಂದಿರಕ್ಕೆ ಆಗಮಿಸಲಿದೆ.
ಭಕ್ತಾಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸುವಂತೆ ಮಂದಿರದ ಪ್ರಕಟಣೆಯಲ್ಲಿ ವಿನಂತಿಸಲಾಗಿದೆ.