ಕಾಸರಗೋಡು: ಜಿಲ್ಲೆಯ 7 ಸಿ.ಎಚ್.ಸಿ.ಗಳಲ್ಲಿ ಡಯಾಲಿಸಿಸ್ ಸೆಂಟರ್‍ಗಳನ್ನು ಆರಂಭಿಸಲು ಜಿಲ್ಲಾ ಅಭಿವೃದ್ಧಿ ಸಮಿತಿ ತೀರ್ಮಾನಿಸಿದೆ.
ಮೂರು ಸಿ.ಎಚ್.ಸಿ.ಗಳಲ್ಲಿ ಇದಕ್ಕಿರುವ ಭೌತಿಕ ಸೌಲಭ್ಯಗಳು ಇವೆ. ಇತರೆಡೆಗಳಲ್ಲಿ ಶೀಘ್ರದಲ್ಲೇ ವ್ಯವಸ್ಥೆ ಏರ್ಪಡಿಸಲಾಗುವುದು ಎಂದು ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ತಿಳಿಸಿದರು.
ಬೇಕಲಕೋಟೆಯಲ್ಲಿ ಅಭಿವೃದ್ಧಿ ಚಟುವಟಿಕೆಗಳ ಜೊತೆಯಲ್ಲೇ ವಿದೇಶಿ ಪ್ರವಾಸಿಗರನ್ನು ಸೆಳೆಯುವ ಉದ್ದೇಶದಿಂದ ಡಿ.24ರಿಂದ ಜ.1 ವರೆಗೆ ಪುಷ್ಪ ಮೇಳ ಏರ್ಪಡಿಸಲಾಗುವುದು. ಜಿಲ್ಲಾಡಳಿತದ ನೇತೃತ್ವದಲ್ಲಿ ಈ ಬಾರಿಯೂ `ಒಪ್ಪರಂ 2020' ಹೆಸರಲ್ಲಿ ಹೊಸ ವರ್ಷಾಚರಣೆ ನಡೆಯಲಿದೆ. ಈ ತಿಂಗಳ ಕೊನೆಯ ವಾರ ನಡೆಯುವ ಭೂಹಕ್ಕು ಪತ್ರ ಮೇಳದಲ್ಲಿ 2 ಸಾವಿರ ಪತ್ರಗಳನ್ನು ವಿತರಿಸಲಾಗುವುದು ರಾಜ್ಯದಲ್ಲೇ ಪ್ರಥಮ ಬಾರಿಗೆ ವೆಳ್ಳರಿಕುಂಡ್‍ನಲ್ಲಿ ಡಿಜಿಟಲ್ ಲ್ಯಾಂಡ್ ಸೆಟಲ್ ಮೆಂಟ್ ಸರ್ವೇ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಿಲ್ಲೆಯ ಜಲಕ್ಷಾಮಕ್ಕೆ ಪರಿಹಾರವಾಗಿ ಜನವರಿ ಮೊದಲ ವಾರದಲ್ಲಿ ತಡೆಗೋಡೆ ಉತ್ಸವ ನಡೆಸಲಾಗುವುದು. ಇದರ ಅಂಗವಾಗಿ ಸ್ಥಳೀಯಾಡಳಿತ ಸಂಸ್ಥೆಗಳ ನೇತೃತ್ವದಲ್ಲಿ ಕಿರು ತಡೆಗೋಡೆಗಳನ್ನು ನಿರ್ಮಿಸಲಾಗುವುದು. ಜಿಲ್ಲೆಯ 1348 ಅಂಗನವಾಡಿಗಳನ್ನು ಹೈಟೆಕ್ ನಡೆಸುವ ಅಂಗವಗಿ ಮಾಹಿತಿ ಸಂಗ್ರಹ ಕಾಯಕ ಐ.ಸಿ.ಡಿ.ಎಸ್. ಮುಖಾಂತರ ಆರಂಭಿಸಲಾಗಿದೆ ಎಂದವರು ಹೇಳಿದರು. ಕಾಸರಗೋಡು ಜಿಲ್ಲೆಯನ್ನು ತ್ಯಾಜ್ಯಮುಕ್ತವಾಗಿಸುವ ಯೋಜನೆ ಸಬಾಕಾ(ಝೀರೋ ವೇಸ್ಟ್ ಕಾಸರಗೋಡು) ಶೀಘ್ರದಲ್ಲೇ ಆರಂಭಗೊಳ್ಳಲಿದೆ. ಸರಕಾರಿ ಕಚೇರಿಗಳ ತಾತ್ಕಾಲಿಕ ಹುದ್ದೆಗಳನ್ನು ಎಂಪ್ಲಾಯ್‍ಮೆಂಟ್ ಯ ಕುಟುಂಬಶ್ರೀ ಮೂಲಕ, ಕೆಕ್‍ನಾನ್ ಮೂಲಕ ಮಾತ್ರ ನೇಮಕಾತಿ ನಡೆಸುವಂತೆ ಜಿಲ್ಲಾ„ಕಾರಿ ಆಯಾ ಇಲಾಖೆಗಳ ಮುಖ್ಯಸ್ಥರಿಗೆ ಆದೇಶ ನೀಡಿದ್ದಾರೆ. ಇಲಾಖೆಗಳ ಮುಖ್ಯಸ್ಥರ ಅನುಮತಿ ಇಲ್ಲದೆ ರಜೆ ಮಾಡುವ, ನೌಕರಿಯಿಂದ ದೂರವಿರುವ ನೌಕರರ ವಿರುದ್ಧ ಕ್ರಮ ಕೈಗೊಳ್ಳುವಂತೆ ಅವರು ಆದೇಶ ನೀಡಿದರು.
ಗೂಂಡಾಗಿರಿ ಹಾವಳಿ ಅ„ಕವಾಗಿರುವ ಮಂಜೇಶ್ವರ ವಿಧಾನಸಭೆ ಕ್ಷೇತ್ರದ ಉಪ್ಪಳದಲ್ಲಿ ಪೆÇಲೀಸ್ ಠಾಣೆ ಆರಂಭಿಸುವಂತೆ, ಮಂಜೇಶ್ವರ ತಾಲೂಕು ಕಚೇರಿಗೆ ಸ್ವಂತ ಕಟ್ಟಡ ನಿರ್ಮಿಸುವಂತೆ, ಕಾಸರಗೋಡು ಮೆಡಿಕಲ್ ಕಾಲೇಜು ಶೀಘ್ರದಲ್ಲೇ ಚಟುವಟಿಕೆ ಆರಂಭಿಸುವಂತೆ ಕ್ರಮಕೈಗೊಳ್ಳಲು ಮಂಜೇಶ್ವರ ಶಾಸಕ ಎಂ.ಸಿ.ಕಮರುದ್ದಿನ್ ಆಗ್ರಹಿಸಿದರು.
ಶಾಸಕ ಕೆ.ಕುಂಞÂರಾಮನ್, ಗೋವಿಂದನ್ ಪಳ್ಳಿಕ್ಕಾಪಿಲ್, ಗೋವಿಂದನ್ ನಾಯರ್, ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಶಾಂತಮ್ಮ ಫಿಲಿಪ್, ನೀಲೇಶ್ವರ ನಗರಸಭೆ ಅಧ್ಯಕ್ಷ ಪೆÇ್ರ.ಕೆ.ಪಿ.ಜಯರಾಜನ್, ಜಿಲ್ಲಾ ಯೋಜನೆ ಅಧಿಕಾರಿ ಎಸ್.ಸತ್ಯಪ್ರಕಶ್, ವಿವಿಧ ಇಲಾಖೆ ಮುಖ್ಯಸ್ಥರು ಮೊದಲಾದವರು ಉಪಸ್ಥಿತರಿದ್ದರು.