ಕಾಸರಗೋಡು: ಮಹಾತ್ಮಾಗಾಂಧಿ ನೌಕರಿ ಖಾತರಿ ಯೋಜನೆ ಜಿಲ್ಲೆಯಲ್ಲಿ ಉದ್ಯೋಗಸೃಷ್ಟಿಯ ಮೂಲಕ ನೂತನ ಸಾಧ್ಯತೆಗಳಿಗೆ ಕದ ತೆರೆಯುತ್ತಿದೆ.
8 ತಿಂಗಳ ಅವಧಿಯಲ್ಲಿ 24 ಲಕ್ಷ ನೌಕರಿ ದಿನಗಳನ್ನು ಸೃಷ್ಟಿಸುವ ಮೂಲಕ ಜಿಲ್ಲೆಯ 1.56 ಲಕ್ಷ ಕುಟುಂಬಗಳಿಗೆ ಉದ್ಯೋಗದಾನ ನೀಡಲು ಈ ಯೋಜನೆಯ ಮೂಲಕ ಸಾಧ್ಯವಾಗಿದೆ ಎಂಬುದು ಗಮನಾರ್ಹ ವಿಚಾರ.
ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷವೊಂದಕ್ಕೆ ನೂರು ದಿನ ವೇತನ ಸಹಿತದನೌಕರಿ ಖಾತರಿ ಒದಗಿಸುವ ಉದ್ದೇಶದಿಂದ ಜಾರಿಗೊಂಡ ಯೋಜನೆ ಇದಾಗಿದೆ. ಕಳೆದ 8 ತಿಂಗಳ ಅವಧಿಯಲ್ಲಿ ಜಿಲ್ಲೆಯಲ್ಲಿ ಈ ಯೋಜನೆ ಮೂಲಕ 24,34,935 ನೌಕರಿ ದಿನಗಳು ಸೃಷ್ಟಿಯಾಗಿವೆ. ನೌಕರಿ ಖಾತರಿ ಯೋಜನೆಯಲ್ಲಿ ನೋಂದಣಿ ನಡೆಸಿರುವ 1,56,960 ಕುಟುಂಬಗಳಿಗೆ ಈ ಯೋಜನೆ ವರದಾಯಕವಾಗಿದೆ. ಈ ಕುಟುಂಬಗಳ 2,28,005 ಮಂದಿ ಯೋಜನೆಯನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಯೋಜನೆಯಲ್ಲಿ ನೋಂದಣಿ ಹೊಂದಿರುವವರಲ್ಲಿ 1,56,661 ಕುಟುಂಬಗಳಿಗೆ ಈಗಾಗಲೇ ಜಾಬ್ ಕಾರ್ಡ್ ವಿತರಣೆ ನಡೆಸಲಾಗಿದೆ. ಪರಿಶಿಷ್ಟ ಪಂಗಡದ ಜನಾಂಗಕ್ಕೆ ನೌಕರಿ ಲಭ್ಯತೆ ಒದಗಿಸುವಲ್ಲಿ ಕಾಸರಗೋಡು ಜಿಲ್ಲೆ ಇಡೀ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆದ ವರ್ಷ ಡಿ.4 ವರೆಗೆ 8438 ಕುಟುಂಬಗಳು ಈ ಯೋಜನೆ ಮೂಲಕ ನೌಕರಿ ಪಡೆದಿದ್ದುವು. ಈ ಮೂಲಕ 1077 ಹೆಚ್ಚುವರಿ ಪರಶಿಷ್ಟ ಪಂಗಡದ ಕುಟುಂಬಗಳು ಈ ವರ್ಷ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಪರಪ್ಪ ಬ್ಲಾಕ್ ನಂ.1:
ನೌಕರಿ ಖಾತರಿ ಯೋಜನೆಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲಿ ಪರಪ್ಪ ಬ್ಲಾಕ್ ಪಂಚಾಯತ್ ಅತ್ಯುತ್ತಮ ಫಲಿತಾಂಶ ಪಡೆದಿದೆ. ಅತ್ಯಧಿಕ ನೌಕರಿ ದಿನಗಳನ್ನು ಸೃಷ್ಟಿಸಿರುವ ಹೆಗ್ಗಳಿಕೆ ಈ ಬ್ಲೋಕ್ ಪಂಚಾಯತ್ ಪಡೆದುಕೊಂಡಿದೆ. 6,96,257 ನೌಕರಿ ದಿನಗಳನ್ನು ನಿರ್ಮಿಸುವಲ್ಲಿ ಈ ಬ್ಲಾಕ್ ಪಂಚಾಯತ್ ಯಶಸ್ವಿಯಾಗಿದೆ. ಅತ್ಯಧಿಕ ಪ್ರಮಾಣದಲ್ಲಿ ನೂರುದಿನಗಳನ್ನು ಪಡೆದ ಪಂಚಾಯತ್ ಕೂಡ ಇದೇ ಆಗಿದೆ. ಕಾರಡ್ಕ ಬ್ಲೋಕ್ ಪಂಚಾಯತ್ ನಲ್ಲಿ 4,18.497, ಕಾಞಂಗಾಡ್ ಬ್ಲೋಕ್ ಪಂಚಾಯತ್ ನಲ್ಲಿ 4,14,651, ಕಾಸರಗೋಡು ಬ್ಲಾಕ್ ಪಂಚಾಯತ್ ನಲ್ಲಿ 2,74,836, ಮಂಜೇಶ್ವರ ಬ್ಲೋಕ್ ಪಂಚಾಯತ್ ನಲ್ಲಿ 1,55,220 ನೌಕರಿ ದಿನಗಳನ್ನು ಸೃಷ್ಟಿಸಲಾಗಿದೆ.
ಅತಿ ಹೆಚ್ಚು ಕುಟುಂಬಗಳು ಜಾಬ್ಕಾರ್ಡ್ ಪಡೆದಿರುವ ಬ್ಲೋಕ್ ಪಂಚಾಯತ್ ಕೂಡ ಪರಪ್ಪವೇ ಆಗಿದೆ. 37.075 ಕುಟುಂಬಗಳು ಇಲ್ಲಿ ಈ ಕಾರ್ಡ್ ಪಡೆದುಕೊಂಡಿವೆ. ನೀಲೇಶ್ವರದಲ್ಲಿ 26,050, ಕಾರಡ್ಕದಲ್ಲಿ 25,822, ಕಾಞಂಗಾಡ್ ನಲ್ಲಿ 24,973, ಕಾಸರಗೋಡಿನಲ್ಲಿ 23,526, ಮಂಜೇಶ್ವರದಲ್ಲಿ 19,215 ಕುಟುಂಬಗಳಿಗೆ ಜಾಬ್ ಕಾರ್ಡ್ ಲಭಿಸಿದೆ.
ನೂರು ದಿನ ಪೂರ್ಣಗೊಳಿಸಿದವರು 1084 ಮಂದಿ:
ನೌಕರಿ ಖಾತರಿ ಯೋಜನೆ ಮೂಲಕ ಜಿಲ್ಲೆಯಲ್ಲಿ 1084 ಮಂದಿ ನೂರುದಿನ ಪೂರ್ಣಗೊಳಿಸಿದ್ದಾರೆ. ಈನಿಟ್ಟಿನಲ್ಲಿ ಅತ್ಯಧಿಕ ಫಲಿತಾಂಶ ಪರಪ್ಪ ಬ್ಲೋಕ್ ಪಂಚಾಯತ್ ಪಡೆದುಕೊಂಡಿದೆ. ಇಲ್ಲಿ 452 ಮಂದಿ ನೂರು ದಿನಗಳ ನೌಕರಿ ಪೂರ್ಣಗೊಳಿಸಿದ್ದಾರೆ. ಕಾರಡ್ಕದಲ್ಲಿ 266, ಕಾಞಂಗಾಡಿನಲ್ಲಿ 182, ಕಾಸರಗೋಡಿನಲ್ಲಿ 124, ಮಂಜೇಶ್ವರದಲ್ಲಿ 39, ನೀಲೇಶ್ವರದಲ್ಲಿ 21 ಮಂದಿ ನೂರು ನೌಕರಿ ದಿನಗಳನ್ನು ಪೂರ್ಣಗೊಳಿಸಿದ್ದಾರೆ.