ಕಾಸರಗೋಡು: ಮಹಾತ್ಮಾಗಾಂಧಿ ಉದ್ಯೋಗ ಖಾತರಿ ಯೋಜನೆ ಜಿಲ್ಲೆಯಲ್ಲಿ ಉದ್ಯೋಗ ಸೃಷ್ಟಿಯ ಮೂಲಕ ನೂತನ ಸಾಧ್ಯತೆಗಳಿಗೆ ಕದ ತೆರೆಯುತ್ತಿದೆ.
8 ತಿಂಗಳ ಅವ„ಯಲ್ಲಿ 24 ಲಕ್ಷ ನೌಕರಿ ದಿನಗಳನ್ನು ಸೃಷ್ಟಿಸುವ ಮೂಲಕ ಜಿಲ್ಲೆಯ 1.56 ಲಕ್ಷ ಕುಟುಂಬಗಳಿಗೆ ಉದ್ಯೋಗದಾನ ನೀಡಲು ಈ ಯೋಜನೆಯ ಮೂಲಕ ಸಾಧ್ಯವಾಗಿದೆ ಎಂಬುದು ಗಮನಾರ್ಹ ವಿಚಾರ.
ಪ್ರತಿ ಗ್ರಾಮೀಣ ಕುಟುಂಬಕ್ಕೆ ವರ್ಷವೊಂದಕ್ಕೆ ನೂರು ದಿನ ವೇತನ ಸಹಿತದ ಉದ್ಯೋಗ ಖಾತರಿ ಒದಗಿಸುವ ಉದ್ದೇಶದಿಂದ ಜಾರಿಗೊಂಡ ಯೋಜನೆ ಇದಾಗಿದೆ. ಕಳೆದ 8 ತಿಂಗಳ ಅವ„ಯಲ್ಲಿ ಜಿಲ್ಲೆಯಲ್ಲಿ ಈ ಯೋಜನೆ ಮೂಲಕ 24,34,935 ಉದ್ಯೋಗ ದಿನಗಳು ಸೃಷ್ಟಿಯಾಗಿವೆ. ಉದ್ಯೋಗ ಖಾತರಿ ಯೋಜನೆಯಲ್ಲಿ ನೋಂದಣಿ ನಡೆಸಿರುವ 1,56,960 ಕುಟುಂಬಗಳಿಗೆ ಈ ಯೋಜನೆ ವರದಾಯಕವಾಗಿದೆ. ಈ ಕುಟುಂಬಗಳ 2,28,005 ಮಂದಿ ಯೋಜನೆಯನ್ನೇ ಆಶ್ರಯಿಸಿ ಬದುಕುತ್ತಿದ್ದಾರೆ. ಯೋಜನೆಯಲ್ಲಿ ನೋಂದಣಿ ಹೊಂದಿರುವವರಲ್ಲಿ 1,56,661 ಕುಟುಂಬಗಳಿಗೆ ಈಗಾಗಲೇ ಜಾಬ್ ಕಾರ್ಡ್ ವಿತರಣೆ ನಡೆಸಲಾಗಿದೆ. ಪರಿಶಿಷ್ಟ ಪಂಗಡದ ಜನಾಂಗಕ್ಕೆ ನೌಕರಿ ಲಭ್ಯತೆ ಒದಗಿಸುವಲ್ಲಿ ಕಾಸರಗೋಡು ಜಿಲ್ಲೆ ಇಡೀ ರಾಜ್ಯದಲ್ಲಿ ಮೊದಲ ಸ್ಥಾನ ಪಡೆದಿದೆ. ಕಳೆದ ವರ್ಷ ಡಿ.4 ವರೆಗೆ 8438 ಕುಟುಂಬಗಳು ಈ ಯೋಜನೆ ಮೂಲಕ ನೌಕರಿ ಪಡೆದಿದ್ದುವು. ಈ ಮೂಲಕ 1077 ಹೆಚ್ಚುವರಿ ಪರಶಿಷ್ಟ ಪಂಗಡದ ಕುಟುಂಬಗಳು ಈ ವರ್ಷ ಯೋಜನೆಯ ಫಲಾನುಭವಿಗಳಾಗಿದ್ದಾರೆ.
ಪರಪ್ಪ ಬ್ಲಾಕ್ ನಂ.1: ಉದ್ಯೋಗ ಖಾತರಿ ಯೋಜನೆಯ ಚಟುವಟಿಕೆಗಳಲ್ಲಿ ಜಿಲ್ಲೆಯಲ್ಲಿ ಪರಪ್ಪ ಬ್ಲಾಕ್ ಪಂಚಾಯತ್ ಅತ್ಯುತ್ತಮ ಫಲಿತಾಂಶ ಪಡೆದಿದೆ. ಅತ್ಯ„ಕ ಉದ್ಯೋಗ ದಿನಗಳನ್ನು ಸೃಷ್ಟಿಸಿರುವ ಹೆಗ್ಗಳಿಕೆ ಈ ಬ್ಲಾಕ್ ಪಂಚಾಯತ್ ಪಡೆದುಕೊಂಡಿದೆ. 6,96,257 ಉದ್ಯೋಗ ದಿನಗಳನ್ನು ನಿರ್ಮಿಸುವಲ್ಲಿ ಈ ಬ್ಲಾಕ್ ಪಂಚಾಯತ್ ಯಶಸ್ವಿಯಾಗಿದೆ. ಅತ್ಯ„ಕ ಪ್ರಮಾಣದಲ್ಲಿ ನೂರು ದಿನಗಳನ್ನು ಪಡೆದ ಪಂಚಾಯತ್ ಕೂಡ ಇದೇ ಆಗಿದೆ. ಕಾರಡ್ಕ ಬ್ಲಾಕ್ ಪಂಚಾಯತ್‍ನಲ್ಲಿ 4,18.497, ಕಾಂಞಂಗಾಡ್ ಬ್ಲಾಕ್ ಪಂಚಾಯತ್‍ನಲ್ಲಿ 4,14,651, ಕಾಸರಗೋಡು ಬ್ಲಾಕ್ ಪಂಚಾಯತ್‍ನಲ್ಲಿ 2,74,836, ಮಂಜೇಶ್ವರ ಬ್ಲಾಕ್ ಪಂಚಾಯತ್ ನಲ್ಲಿ 1,55,220 ಉದ್ಯೋಗ ದಿನಗಳನ್ನು ಸೃಷ್ಟಿಸಲಾಗಿದೆ.
ಅತಿ ಹೆಚ್ಚು ಕುಟುಂಬಗಳು ಜಾಬ್ ಕಾರ್ಡ್ ಪಡೆದಿರುವ ಬ್ಲಾಕ್ ಪಂಚಾಯತ್ ಕೂಡ ಪರಪ್ಪವೇ ಆಗಿದೆ. 37.075 ಕುಟುಂಬಗಳು ಇಲ್ಲಿ ಈ ಕಾರ್ಡ್ ಪಡೆದುಕೊಂಡಿವೆ. ನೀಲೇಶ್ವರದಲ್ಲಿ 26,050, ಕಾರಡ್ಕದಲ್ಲಿ 25,822, ಕಾಂಞಂಗಾಡ್‍ನಲ್ಲಿ 24,973, ಕಾಸರಗೋಡಿನಲ್ಲಿ 23,526, ಮಂಜೇಶ್ವರದಲ್ಲಿ 19,215 ಕುಟುಂಬಗಳಿಗೆ ಜಾಬ್ ಕಾರ್ಡ್ ಲಭಿಸಿದೆ.
ನೂರು ದಿನ ಪೂರ್ಣಗೊಳಿಸಿದವರು 1084 ಮಂದಿ : ಉದ್ಯೋಗ ಖಾತರಿ ಯೋಜನೆ ಮೂಲಕ ಜಿಲ್ಲೆಯಲ್ಲಿ 1084 ಮಂದಿ ನೂರುದಿನ ಪೂರ್ಣಗೊಳಿಸಿದ್ದಾರೆ. ಈನಿಟ್ಟಿನಲ್ಲಿ ಅತ್ಯ„ಕ ಫಲಿತಾಂಶ ಪರಪ್ಪ ಬ್ಲಾಕ್ ಪಂಚಾಯತ್ ಪಡೆದುಕೊಂಡಿದೆ. ಇಲ್ಲಿ 452 ಮಂದಿ ನೂರು ದಿನಗಳ ನೌಕರಿ ಪೂರ್ಣಗೊಳಿಸಿದ್ದಾರೆ. ಕಾರಡ್ಕದಲ್ಲಿ 266, ಕಾಂಞಂಗಾಡಿನಲ್ಲಿ 182, ಕಾಸರಗೋಡಿನಲ್ಲಿ 124, ಮಂಜೇಶ್ವರದಲ್ಲಿ 39, ನೀಲೇಶ್ವರದಲ್ಲಿ 21 ಮಂದಿ ನೂರು ನೌಕರಿ ದಿನಗಳನ್ನು ಪೂರ್ಣಗೊಳಿಸಿದ್ದಾರೆ.
ಒಂದು ಪಡಿತರ ಚೀಟಿ-ಒಂದು ಕುಟುಂಬ : ಒಂದು ಪಡಿತರ ಚೀಟಿಯಲ್ಲಿ ಸೇರಿರುವವರನ್ನು ಒಂದು ಕುಟುಂಬ ಎಂದು ಗಣನೆ ಮಾಡಲಾಗುತ್ತದೆ. ಈ ರೀತಿಯ ಒಂದು ಕುಟುಂಬಕ್ಕೆ ನೂರು ನೌಕರಿ ದಿನಗಳನ್ನು ಒದಗಿಸಲಾಗುತ್ತದೆ. ಕುಟುಂಬದ ಸದಸ್ಯರಿಗೆ ಪರಸ್ಪರ ಬದಲಿಸಿ(ಪರ್ಯಾಯ ವ್ಯವಸ್ಥೆಯಲ್ಲಿ) ನೂರು ದಿನದ ನೌಕರಿ ಪೂರ್ಣಗೊಳಿಸುವ ಅವಕಾಶಗಳಿವೆ.
ಯಾರೂ ನೌಕರಿ ಪಡೆಯಬಹುದು : ಉದ್ಯೋಗ ಖಾತರಿ ಯೋಜನೆಯಲ್ಲಿ ಉದ್ಯೋಗ ಪಡೆಯುವ ನಿಟ್ಟಿನಲ್ಲಿ ಗ್ರಾಮ ಪಂಚಾಯತ್‍ಗಳಲ್ಲಿ ನೋಂದಣಿ ನಡೆಸಬಹುದು. ಯೋಜನೆಯ ಪ್ರಕಾರ 272 ರೂ. ಒಬ್ಬ ಕಾರ್ಮಿಕನಿಗೆ ಲಭಿಸುವುದು. ಈ ರೀತಿ ನೂರು ದಿನ ದುಡಿಯುವ ಕಾರ್ಮಿನಿಗೆ ವರ್ಷಕ್ಕೆ 27,200 ರೂ. ಖಚಿತವಾಗಿ ಲಭಿಸುವುದು. ಜಾರಿಯಲ್ಲಿ ಇತರ ನೌಕರಿಯಲ್ಲಿ ತೊಡಗಿಕೊಂಡವರು ಉದ್ಯೋಗ ಖಾತರಿ ಯೋಜನೆಯಲ್ಲಿ ಚಟುವಟಿಕೆ ನಡೆಸುವ ದಿನಗಳಲ್ಲಿ ಇತರ ಉದ್ಯೋಗದ ಸೌಲಭ್ಯ ಪಡೆದುಕೊಳ್ಳುತ್ತಿಲ್ಲ ಎಂದು ಖಚಿತಪಡಿಸಬೇಕಾಗುತ್ತದೆ. ಗ್ರಾಮ ಪಂಚಾಯತ್ ಕಾರ್ಯದರ್ಶಿಗೆ ಕಾರ್ಮಿಕ ಈ ಯೋಜನೆಯ ನೌಕರಿಗಾಗಿ ಅರ್ಜಿ ಸಲ್ಲಿಸಬೇಕು. ಅರ್ಜಿ ಸ್ವೀಕಾರ ನಡೆಸಿದ 15 ದಿನಗಳ ಅವಧಿಯಲ್ಲಿ ನೌಕರಿ ಒದಗಿಸಲು ಕಾರ್ಯದರ್ಶಿ ಹೊಣೆಗಾರರಾಗಿದ್ದಾರೆ. ಈ ವಿಚಾರದಲ್ಲಿ ಯಾವ ಕಾರ್ಯದರ್ಶಿಯಾದರೂ ಲೋಪ ನಡೆಸಿದರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬಹುದಾಗಿದೆ.
ನೌಕರಿ ಲಭ್ಯತೆ ಖಚಿತಗೊಳಿಸುವ ನಿಟ್ಟಿನಲ್ಲಿ ಪಂಚಾಯತ್‍ಗಳು ಲೇಬರ್ ಬಜೆಟ್ ಸಿದ್ಧಪಡಿಸಬೇಕು. ಇದರಲ್ಲಿ ಪಂಚಾಯತ್‍ನಲ್ಲಿ ಒಂದು ವರ್ಷ ಜಾರಿಗೊಳಿಸುವ ಯೋಜನೆ, ಅದಕ್ಕೆ ಪೂರಕವಾದ ನೌಕರಿ ದಿನಗಳು ಇತ್ಯಾದಿಗಳನ್ನು ನಿಗದಿಪಡಿಸಬೇಕು. ಈ ಕ್ರಿಯಾಯೋಜನೆ ಪ್ರಕಾರ ಉದ್ಯೋಗ ಯೋಜನೆ ಜಾರಿಗೊಳ್ಳುತ್ತದೆ. ಜಿಲ್ಲೆಯಲ್ಲಿ ಈ ಆರ್ಥಿಕ ವರ್ಷ 31,00,796 ನೌಕರಿ ದಿನಗಳನ್ನು ಸೃಷ್ಟಿಸಲು ಗುರಿಯಿರಿಸಲಾಗಿದೆ. ಈಗಾಗಲೇ 24,34,935 ನೌಕರಿ ದಿನಗಳನ್ನು ಸೃಷ್ಟಿಸಲಾಗಿದ್ದು, ಶೇ.78.52 ಗುರಿ ತಲುಪಲಾಗಿದೆ.
(ಚಿತ್ರ ಮಾಹಿತಿ : ಪಿಲಿಕೋಡ್ ಗ್ರಾಮಪಂಚಾಯತ್‍ನ ವೆಳ್ಳಚ್ಚಾಲ್ ತೋಡಿಗೆ ತೆಂಗಿನ ನಾರು ಭೂಹಾಸು ಮೂಲಕ ಸಂರಕ್ಷಣೆ ನೀಡುತ್ತಿರುವ ಉದ್ಯೋಗ ಖಾತರಿ ಯೋಜನೆಯ ಕಾರ್ಮಿಕರು.)