ಕಾಸರಗೋಡು: ದ್ರಾವಿಡ ಭಾಷೆಗಳಲ್ಲಿ ಒಂದಾಗಿರುವ ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲು ಕೇಂದ್ರ ಸರಕಾರ ಶೀಘ್ರ ಕ್ರಮ ಕೈಗೊಳ್ಳಬೇಕೆಂದು ಕಾಸರಗೋಡು ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರು ಆಗ್ರಹಿಸಿದರು.
ತುಳು ಭಾಷೆ ಮತ್ತು ಸಂಸ್ಕøತಿಯ ಪುನಶ್ಚೇತನ ಉದ್ದೇಶದಿಂದ ಕೇರಳ ತುಳು ಅಕಾಡೆಮಿ ವತಿಯಿಂದ ನಗರದ ನೆಲ್ಲಿಕುಂಜೆ ಲಲಿತ ಕಲಾಸದನದಲ್ಲಿ ಆಯೋಜಿಸಿದ ಎರಡು ದಿನಗಳ ರಾಷ್ಟ್ರೀಯ ಮಟ್ಟದ ತುಳು ವಿಚಾರಸಂಕಿರಣವನ್ನು ತುಳು ತಾಡವಾಲೆಯನ್ನು ಬಿಡಿಸುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಈಗಾಗಲೇ ಸಂಸತ್ತಿನಲ್ಲಿ ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕೆಂದು ಕೇಳಿಕೊಂಡಿದ್ದು, ಈ ನಿಟ್ಟಿನಲ್ಲಿ ಶ್ರಮಿಸುವುದಾಗಿ ಅವರು ಹೇಳಿದರು. 20 ಲಕ್ಷಕ್ಕೂ ಹೆಚ್ಚು ಮಂದಿ ತುಳು ಭಾಷೆಯನ್ನಾಡುವವರಿದ್ದಾರೆ. ಇದಕ್ಕಿಂತ ಕಡಿಮೆ ಜನರು ಅವಲಂಬಿಸಿರುವ ಮಣಿಪುರಿ, ಸಂಸ್ಕøತ ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಲಾಗಿದೆ. ಈ ಹಿನ್ನೆಲೆಯಲ್ಲಿ ತುಳು ಭಾಷೆಯೂ ಕೂಡ 8 ನೇ ಪರಿಚ್ಛೇದದಲ್ಲಿ ಸ್ಥಾನ ಪಡೆಯಲು ಅರ್ಹ ಭಾಷೆಯಾಗಿದೆ. ತುಳು ಭಾಷೆ ಸೇರ್ಪಡೆಯಿಂದಾಗಿ ಕೇಂದ್ರ ಸಾಹಿತ್ಯ ಅಕಾಡೆಮಿಯಿಂದ ಅಂಗೀಕಾರ ಲಭಿಸಲಿದೆ ಅಲ್ಲದೆ ಸಂಪೂರ್ಣ ಸಹಾಯ ಲಭಿಸಲಿದೆ. ತುಳು ಭಾಷೆಯಲ್ಲಿರುವ ಗ್ರಂಥಗಳು ಇತರ ಭಾಷೆಗಳಿಗೆ ಭಾಷಾಂತರಗೊಳ್ಳುವ ಮೂಲಕ ತುಳು ಭಾಷೆ, ಸಂಸ್ಕøತಿ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಳಲಿದೆ ಎಂದು ಅವರು ಹೇಳಿದರು.
ಅರ್ಹತೆಯುಳ್ಳ ಎಲ್ಲಾ ಭಾಷೆಗಳನ್ನು 8 ನೇ ಪರಿಚ್ಛೇದದಲ್ಲಿ ಸೇರಿಸಬೇಕಾದುದು ಇಂದಿನ ಅವಶ್ಯವಾಗಿದೆ ಎಂದ ಅವರು ಎಲ್ಲಾ ಭಾಷೆಗಳನ್ನು ಉಳಿಸಿ ಬೆಳೆಸಲು ಇದು ಅನಿವಾರ್ಯ ಕೂಡ ಹೌದು ಎಂದರು. 8 ನೇ ಪರಿಚ್ಛೇದದಲ್ಲಿ ಸೇರ್ಪಡೆಯಾದಲ್ಲಿ ಸಂಸತ್ತಿನಲ್ಲೂ, ವಿಧಾನಸಭೆಯಲ್ಲೂ ತುಳುವಿನಲ್ಲಿ ಮಾತನಾಡಬಹುದಾಗಿದೆ. ಈ ಹಿನ್ನೆಲೆಯಲ್ಲಿ ಕೇರಳ ಸರಕಾರವು ತುಳು ಭಾಷೆಗೆ ಅಂಗೀಕಾರ ನೀಡಿದ್ದಲ್ಲಿ ಕೇಂದ್ರ ಸರಕಾರಕ್ಕೆ ಹೆಚ್ಚಿನ ಒತ್ತಡ ಹಾಕಲು ಸಾಧ್ಯವಾಗುತ್ತದೆ ಎಂದರು. ತುಳು ಭಾಷೆಯನ್ನು 8 ನೇ ಪರಿಚ್ಛೇದಕ್ಕೆ ಸೇರ್ಪಡೆಯ ಬಗ್ಗೆ ಕರ್ನಾಟಕದ ಸಂಸದರೊಂದಿಗೆ ಈಗಾಗಲೇ ಆಶಯ ವಿನಿಮಯ ಮಾಡಿದ್ದೇನೆ. ಕಾಸರಗೋಡಿನ ಸಂಸದನೆಂಬ ನೆಲೆಯಲ್ಲಿ ತುಳು ಭಾಷೆಯನ್ನು ತನ್ನ ಮಾತೃ ಭಾಷೆಯಲ್ಲಿ ಒಂದಾಗಿ ಸೇರಿಸಿಕೊಂಡಿದ್ದೇನೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದರು. ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ಅಕಾಡೆಮಿಯ ತ್ರೈಮಾಸಿಕ ಪತ್ರಿಕೆ `ತೆಂಬೆರೆ'ಯ ವಿಶೇಷ ಸಂಚಿಕೆ ಬಿಡುಗಡೆಗೊಳಿಸಿ ಜನವರಿ ತಿಂಗಳಲ್ಲಿ ಮಂಜೇಶ್ವರದಲ್ಲಿ ನಿರ್ಮಾಣಗೊಳ್ಳುತ್ತಿರುವ ತುಳು ಭವನದ ಉದ್ಘಾಟನೆ ನಡೆಯಲಿದೆ ಎಂದರು. ಹಾವೇರಿ ಜನಪದ ವಿವಿಯ ನಿಕಟಪೂರ್ವ ಉಪಕುಲಪತಿ ಡಾ.ಚಿನ್ನಪ್ಪ ಗೌಡ ದಿಕ್ಸೂಚಿ ಭಾಷಣ ಮಾಡಿದರು. ಶಾಸಕ ಕೆ.ಕುಂಞÂರಾಮನ್, ಮಂಜೇಶ್ವರ ಬ್ಲಾಕ್ ಪಂಚಾಯತ್ ಸದಸ್ಯ ಕೆ.ಆರ್.ಜಯಾನಂದ, ನಗರಸಭೆ ಸದಸ್ಯ ಅರುಣ್ ಕುಮಾರ್ ಶೆಟ್ಟಿ, ರಾಷ್ಟ್ರೀಯ ತುಳು ವಿಚಾರಸಂಕಿರಣ ಸಮಿತಿ ಅಧ್ಯಕ್ಷ ಕೆ.ವಿ.ಕುಮಾರನ್ ಮಾಸ್ಟರ್, ಲೇಖಕಿ ರಾಜಶ್ರೀ ಟಿ.ರೈ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮ ಉದ್ಘಾಟನೆಗೆ ಮುನ್ನ ಗೋಳಿಯಡ್ಕ ಕನ್ಯಪ್ಪಾಡಿ ಚೋಮ ನಲಿಕೆ ಅವರಿಂದ ಆಟಿ ಕಳೆಂಜ ಪ್ರದರ್ಶನ ನಡೆಯಿತು.
ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಸ್ವಾಗತಿಸಿದರು. ತುಳು ಅಕಾಡೆಮಿ ಸದಸ್ಯ ರಾಧಾಕೃಷ್ಣ ಕೆ.ಉಳಿಯತ್ತಡ್ಕ ಕಾರ್ಯಕ್ರಮ ನಿರೂಪಿಸಿದರು.
ಇಂದು ಮಧ್ಯಾಹ್ನ 2 ಗಂಟೆಗೆ ನಡೆಯುವ ಸಮಾರೋಪ ಸಮಾರಂಭದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ದಯಾನಂದ ಕತ್ತಲ್ಸಾರ್ ಮುಖ್ಯ ಅತಿಥಿಯಾಗಿರುವರು. ಮಾಜಿ ಶಾಸಕ ಸಿ.ಎಚ್.ಕುಂಞಂಬು ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಿಸುವರು. ಹಿರಿಯ ವಿದ್ವಾಂಸ ಮಲಾರ್ ಜಯರಾಮ ರೈ ಸಮಾರೋಪ ಭಾಷಣ ಮಾಡುವರು. ಎಣ್ಮಕಜೆ ಗ್ರಾಮ ಪಂಚಾಯತ್ ಸ್ಥಾಯೀ ಸಮಿತಿ ಅಧ್ಯಕ್ಷೆ ಆಯಿಷಾ ಎ.ಎ.ಪೆರ್ಲ, ಜಿಲ್ಲಾ ವಾರ್ತಾ ಇಲಾಖೆ ಅ„ಕಾರಿ ಮಧುಸೂದನನ್ ಎಂ., ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರ ಮಾಜಿ ಅಧ್ಯಕ್ಷ ಎಂ.ಶಂಕರ ರೈ ಮಾಸ್ಟರ್, ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಯೋಗೀಶ್ ರಾವ್ ಚಿಗುರುಪಾದೆ, ತಾಲೂಕು ಗ್ರಂಥಾಲಯ ಮಂಡಳಿ ಕಾರ್ಯದರ್ಶಿ ಪಿ.ದಾಮೋದರನ್ ಉಪಸ್ಥಿತರಿರುವರು.