ಕಾಸರಗೋಡು: ಕೇರಳ ಸರ್ಕಾರದ ಕಾಲೇಜು ಶಿಕ್ಷಣ ಇಲಾಖೆಯ ಪ್ರಾಯೋಜಕತ್ವದಲ್ಲಿ ಕಾಸರಗೋಡು ಸರ್ಕಾರಿ ಕಾಲೇಜಿನ ಕನ್ನಡ ಸ್ನಾತಕೋತ್ತರ ಅಧ್ಯಯನ ಮತ್ತು ಸಂಶೋಧನ ವಿಭಾಗದ ನೇತೃತ್ವದಲ್ಲಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಸಹಕಾರದೊಂದಿಗೆ ದಶಂಬರ 9 ಮತ್ತು10 ರಂದು ಕಾಸರಗೋಡು ಸರ್ಕಾರಿ ಕಾಲೇಜಿನ ಸೆಮಿನಾರ್ ಹಾಲ್ ನಲ್ಲಿ 'ದ್ರಾವಿಡ ಜಾನಪದ ಸಂಶೋಧನ ವಿಧಾನ ತಾತ್ವಿಕ : ಪ್ರಾಯೋಗಿಕ ಅನುಸಂಧಾನ ಎಂಬ ವಿಷಯದ ಬಗ್ಗೆ ಎರಡು ದಿನಗಳ ರಾಷ್ಟ್ರೀಯ ವಿಚಾರಸಂಕಿರಣವು ನಡೆಯಲಿದೆ.
ಕರ್ನಾಟಕ ಜಾನಪದ ವಿಶ್ವವಿದ್ಯಾನಿಲಯದ ನಿಕಟಪೂರ್ವ ಉಪಕುಲಪತಿಗಳಾದ ಪೆÇ್ರ.ಕೆ ಚಿನ್ನಪ್ಪ ಗೌಡ ವಿಚಾರಗೋಷ್ಟಿಯನ್ನು ಉದ್ಘಾಟಿಸಲಿದ್ದಾರೆ. ಕಾಲೇಜು ಪ್ರಾಂಶುಪಾಲ ಡಾ ಎ.ಎಲ್ ಅನಂತಪದ್ಮನಾಭ ಅಧ್ಯಕ್ಷತೆ ವಹಿಸುವರು. ಮುಖ್ಯ ಅತಿಥಿಗಳಾಗಿ ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಅಧ್ಯಕ್ಷ ದಯಾನಂದ ಕತ್ತಲ್‍ಸಾರ್ ಮತ್ತು ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಉಮೇಶ ಎಂ ಸಾಲಿಯಾನ್ ಭಾಗವಹಿಸುವರು. ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥೆ ಸುಜಾತ ಎಸ್ ಮತ್ತು ವಿಚಾರಗೋಷ್ಟಿಯ ಸಂಯೋಜಕಿ ಡಾ.ಆಶಾಲತಾ ಸಿಕೆ ಉಪಸ್ಥಿತರಿರುವರು.
ಅನಂತರ ವಿವಿಧ ವಿಷಯಗಳಲ್ಲಿ ವಿಚಾರಮಂಡನೆ ನಡೆಯಲಿದೆ. 'ಜಾನಪದ ಮಹಾಕಾವ್ಯ ಪರಂಪರೆ - ತಾತ್ವಿಕ ಅನುಸಂಧಾನ' ಎಂಬ ವಿಷಯದಲ್ಲಿ ಪೆÇ್ರ. ಕೆ. ಚಿನ್ನಪ್ಪ ಗೌಡ ಮಾತನಾಡುವರು. . ಅಪರಾಹ್ನ 2ರಿಂದ ' ತುಳು ಗೆಯ್ಮೆಯ ಹಾಡು -ತಾತ್ವಿಕ ಆಯಾಮ' ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಯಕ್ಷಗಾನ ಅಧ್ಯಯನ ಕೇಂದ್ರದ ಸಂಶೋಧನಾಧಿಕಾರಿ ಡಾ. ರಾಜಶ್ರೀ ಮಾತನಾಡುವರು. ಬಳಿಕ 'ಜನಪದ ಕಥನ ಅನುಸಂಧಾನದ ನೆಲೆ' ಎಂಬ ವಿಷಯದಲ್ಲಿ ಒಳಾಡಳಿತ ಇಲಾಖೆಯ ಅಧಿಕಾರಿ ಡಾ. ಶ್ರೀನಿವಾಸ ಗಿಳಿಯಾರು ಮಾತನಾಡುವರು. ದಶಂಬರ ಹತ್ತರಂದು ಬೆಳಗ್ಗೆ 9.30ರಿಂದ 'ಜನಪದ ರಂಗಭೂಮಿ - ತಾತ್ವಿಕ ಗ್ರಹಿಕೆಯ ಹಿನ್ನೆಲೆ' ಎಂಬ ವಿಷಯದಲ್ಲಿ ಹಂಪಿ, ಕನ್ನಡ ವಿಶ್ವವಿದ್ಯಾನಿಲಯದ ದ್ರಾವಿಡ ಅಧ್ಯಯನ ವಿಭಾಗದ ಪೆÇ್ರ. ಮಾಧವ ಪೆರಾಜೆ ಮಾತನಾಡುವರು. ಬಳಿಕ ಮಲೆಯಾಳ ತೋಟ್ಟಂ ಹಾಗೂ ವಡಕ್ಕನ್ ಪಾಟ್ಟುಗಳ ತಾತ್ವಿಕ ಗ್ರಹೀತಗಳು ಎಂಬ ವಿಷಯದಲ್ಲಿ ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ ಸ್ಮಾರಕ, ಗಿಳಿವಿಂಡು' ಇದರ ಆಡಳಿತಾಧಿಕಾರಿ ಡಾ. ಕೆ. ಕಮಲಾಕ್ಷ ಮಾತನಾಡಲಿದ್ದಾರೆ. ಅಪರಾಹ್ನ ಬಳಿಕ 'ಜನಪದ ಕುಣಿತಗಳು ತಾತ್ವಿಕತೆ ಮತ್ತು ಆನ್ವಯಿಕತೆ' ಎಂಬ ವಿಷಯದಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದ ಎಸ್. ವಿ. ಪಿ ಕನ್ನಡ ಅಧ್ಯಯನ ಸಂಸ್ಥೆಯ ಪ್ರಾಧ್ಯಾಪಕ ಪೆÇ್ರ. ಅಭಯ ಕುಮಾರ್ ಕೆ. ಮಾತನಾಡುವರು.
ಸಂಜೆ 3.30 ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ಪೆÇ್ರ. ಅಭಯ್ ಕುಮಾರ ಸಮಾರೋಪ ಭಾಷಣ ಮಾಡುವರು. ಪ್ರಬಂಧ ಮಂಡನೆಗೆ ಪೂರಕವಾಗಿ ಪಾಡ್ದನ ಗಾಯನ, ಕಬಿತ ಗಾಯನ, ಯಕ್ಷಗಾನ ಭಾಗವತಿಕೆ ಮತ್ತು ಜನಪದ ದುಡಿಕಣಿತ ಇತ್ಯಾದಿಗಳು ನಡೆಯಲಿವೆ.. ಲಕ್ಷ್ಮೀ ಕುಂಬ್ಡಾಜೆ, ಸತೀಶ ಪುಣಿಂಚತ್ತಾಯ, ಕುಮಾರ ಬೆಳ್ಳೂರು ಈ ಮುಂತಾದವರುಬ ಭಾಗವಹಿಸುವರು.
ಕಾರ್ಯಕ್ರಮದಲ್ಲಿ ಕನ್ನಡಿಗರು, ಸಂಶೋಧನಾಸಕ್ತರು ಭಾಗವಹಿಸಬೇಕೆಂದು ಸಂಬಂಧಪಟ್ಟವರು ತಿಳಿಸಿದ್ದಾರೆ. ವಿಚಾರ ಸಂಕಿರಣದಲ್ಲಿ ಭಾಗವಹಿಸಲು ಬಯಸುವ ವಿಶ್ವವಿದ್ಯಾನಿಲಯ ಅಥವಾ ಕಾಲೇಜುಗಳ ವಿದ್ಯಾರ್ಥಿಗಳು 9895544701 (ಡಾ. ಆಶಾಲತಾ ಸಿ. ಕೆ) ಅಥವಾ 9446095543 (ಡಾ.ರತ್ನಾಕರ ಮಲ್ಲಮೂಲೆ) ಇವರನ್ನು ಸಂಪರ್ಕಿಸಬಹುದು.