HEALTH TIPS

ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕಾರ ಸಭೆ-ತಮ್ಮ ವರದಿ ಭಾಷಾ ಅಲ್ಪಸಂಖ್ಯಾತರಿಗೆ ಪೂರಕವಾಗಿಯೇ ಸಲ್ಲಿಕೆಯಾಗಲಿದೆ : ನಡುವಟ್ಟಂ ಗೋಪಾಲಕೃಷ್ಣನ್


     ಕಾಸರಗೋಡು: ಭಾಷಾ ಅಲ್ಪಸಂಖ್ಯಾತರ ಅಹವಾಲು ಸ್ವೀಕರಿಸುವ ನಿಟ್ಟಿನಲ್ಲಿ ರಾಜ್ಯ ಮಟ್ಟದ ವಿಶೇಷ ಅ„ಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರು 2 ದಿನಗಳ ಕಾಲ ನಡೆಸಿದ ಸಭೆ ಯಶಸ್ವಿಯಾಗಿದೆ.
     ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಉಭಯ ದಿನಗಳ ಸಭೆಯಲ್ಲಿ ನೂರಕ್ಕೂ ಅಧಿಕ ಕನ್ನಡ ಪರ ಸಹಿತ ಭಾಷಾ ಅಲ್ಪಸಂಖ್ಯಾತ ಸಂಘಟನೆಗಳ ಪ್ರತಿನಿ„ಗಳು ಹಾಜರಾಗಿ ತಮ್ಮ ಅಹವಾಲು ಸಲ್ಲಿಸುವುದರ ಜೊತೆಗೆ ವಿಶೇಷ ಅಧಿಕಾರಿಗಳಿಗೆ ಕಾಸರಗೋಡು ಜಿಲ್ಲೆಯ ಕನ್ನಡ ಪ್ರದೇಶಗಳ ಜನತೆ ಎದುರಿಸುತ್ತಿರುವ ಆಡಳಿತಾತ್ಮಕ, ಸಾಮಾಜಿಕ ವಲಯಗಳ ಸಮಸ್ಯೆಗಳನ್ನು ಮನದಟ್ಟು ಮಾಡಿಕೊಟ್ಟಿದ್ದಾರೆ. ಜೊತೆಗೆ ಅಧಿಕಾರಿ ನಡುವಟ್ಟಂ ಗೋಪಾಲಕೃಷ್ಣನ್ ಅವರು ಎರಡೂ ದಿನಗಳಲ್ಲಿ ಸಭೆಗಳ ನಂತರ ಜಿಲ್ಲೆಯ ಭಾಷಾ ಅಲ್ಪಸಂಖ್ಯಾತರಿರುವ ಪ್ರದೇಶಗಳ ಆಯ್ದ ಸ್ಥಳೀಯಾಡಳಿತ ಸಂಸ್ಥೆಗಳಿಗೆ ಭೇಟಿ ನೀಡಿ ಮಾಹಿತಿ ಸಂಗ್ರಹಿಸಿದ್ದಾರೆ.
      ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅಹವಾಲು ಸ್ವೀಕಾರ ಸಭೆಯ ಅಂತಿಮ ಭಾಗದಲ್ಲಿ ಮಾತನಾಡಿದ ನಡುವಟ್ಟಂ ಗೋಪಾಲಕೃಷ್ಣನ್ ಅವರು ಸಲ್ಲಿಕೆಯಾದ ಎಲ್ಲ ಅಹವಾಲುಗಳನ್ನು ಆಳವಾಗಿ ಅಧ್ಯಯನ ನಡೆಸಿದ ನಂತರ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸುವೆ. ಕನ್ನಡಿಗರ ಸಹಿತ ಭಾಷಾ ಅಲ್ಪಸಂಖ್ಯಾತರ ಹಕ್ಕು ಪೂರ್ಣರೂಪದಲ್ಲಿ ಪಾಲನೆಯಾಗುತ್ತಿಲ್ಲ ಎಂಬುದು ತಮಗೆ ಮನದಟ್ಟಾಗಿದೆ ಎಂದ ಅವರು ತಮ್ಮ ವರದಿ ಸ್ಥಳೀಯ ನಿವಾಸಿಗಳಿಗೆ ಪೂರಕವಾಗಿಯೇ ಸಲ್ಲಿಕೆಯಾಗಲಿದೆ ಎಂದು ಭರವಸೆ ನೀಡಿದ್ದಾರೆ.
       ಸಲ್ಲಿಕೆಗೊಂಡ ಅಹವಾಲುಗಳಲ್ಲಿ ಬಹುಪಾಲು ಇಲ್ಲಿನ ಮೂಲಸಮಸ್ಯೆಗಳಿಗೆ ಸಂಬಂ„ಸಿದವೇ ಆಗಿದ್ದು, (ಕನ್ನಡ ಪ್ರದೇಶಗಳಲ್ಲಿ ಮಲೆಯಾಳಂನಲ್ಲಿ ಅರ್ಜಿಫಾರಂಗಳು, ಶುಲ್ಕ ರಶೀದಿ ಇತ್ಯಾದಿ ಸಿಗುವುದು, ಕನ್ನಡ ಶಾಲೆಗಳಿಗೆ ಕನ್ನಡ ತಿಳಿಯದೇ ಇರುವ ಶಿಕ್ಷಕರ ನೇಮಕ, ಕನ್ನಡಿಗರ ಸರಕಾರಿ ಹುದ್ದೆಗಳಲ್ಲಿ `ಕನ್ನಡ ಬಲ್ಲ' ಎಂಬ ತಪ್ಪು ಮಾಹಿತಿ ನೀಡಿ ಅನರ್ಹರು ನೇಮಕಗೊಳ್ಳುವುದು ಇತ್ಯಾದಿ)ಶುಕ್ರವಾರವೂ ಬಹುಪಾಲು ವಿಚಾರಗಳು ಪುನರಾವರ್ತನೆಗೊಂಡಿದ್ದುವು. ಬದಿಯಡ್ಕದಲ್ಲಿ ಸರ್ಕಾರಿ ಉಪಖಜಾನೆ ಸ್ಥಾಪನೆ ಮಾಡಬೇಕು ಎಂಬ ಬೇಡಿಕೆ ಸಲ್ಲಿಕೆಯಾದ ಬಗ್ಗೆ ಮಾತನಾಡಿದ ಅವರು ಇದು ತಮ್ಮ ವ್ಯಾಪ್ತಿಗೆ ಬರುವ ವಿಚಾರವಲ್ಲ ಎಂದರು. ಉಳಿದಂತೆ ಅರ್ಜಿ ಫಾರಂಗಳು, ರಶೀದಿ ಇತ್ಯಾದಿಗಳು ಕನ್ನಡದಲ್ಲೇ ಸಿಗಬೇಕು, ಕನ್ನಡ ಪ್ರದೇಶಗಳಲ್ಲಿ ಸರಕಾರಿ ನೇಮಕಾತಿ ಪಡೆಯುವವರು ಕನಿಷ್ಠ ಒಂದನೇ ತರಗತಿಯಿಂದ ಹತ್ತನೇ ತರಗತಿ ವರೆಗೆ ಕಡ್ಡಾಯವಾಗಿ ಕನ್ನಡದಲ್ಲೇ ಕಲಿತಿರಬೇಕು, ಕಾಸರಗೋಡು ಮತ್ತು ಮಂಜೇಶ್ವರ ತಾಲೂಕುಗಳಲ್ಲಿ ಐ.ಸಿ.ಡಿ.ಎಸ್. ಮೇಲ್ವಿಚಾರಕರ 20 ಹುದ್ದೆಗಳನ್ನು ಕನ್ನಡಿಗರಿಗೇ ಮೀಸಲಿರಿಸಬೇಕು, ಜಿಲ್ಲಾಧಿಕಾರಿ ಕಚೇರಿಯ ಭಾಷಾಂತರ ಘಟಕದಲ್ಲಿ ಶಾಶ್ವತ ನೇಮಕಾತಿ ನಡೆಸಬೇಕು, ಜಿಲ್ಲಾ ವಾರ್ತಾ ಇಲಾಖೆಯಲ್ಲಿ ಮೂರು ಕನ್ನಡ ಪದವಿಗಳಿಗೆ ಶಾಶ್ವತ ನೇಮಕಾತಿ ನಡೆಸಬೇಕು, ಜಿಲ್ಲೆಯ ಕನ್ನಡ ಪ್ರದೇಶಗಳ ಕಂಪ್ಯೂಟರ್ ವಲಯಗಳಲ್ಲಿ ಕನ್ನಡದಲ್ಲೂ ಸಾಫ್ಟ್‍ವೇರ್ ಬಳಸಿ, ಕನ್ನಡದಲ್ಲೇ ಸೇವೆ ಒದಗಿಸಬೇಕು, ಐ.ಎ.ಎಸ್.ಗೆ ಸಮಾನವಾದ ರಾಜ್ಯದ ಕೆ.ಎ.ಎಸ್. ಪರೀಕ್ಷೆ ನಡೆಸುವ ವೇಳೆ ಕನ್ನಡದಲ್ಲೂ ನಡೆಸುವ ಅವಕಾಶ ನೀಡಬೇಕು ಇತ್ಯಾದಿ ಬೇಡಿಕೆಗಳು ಸಲ್ಲಿಕೆಗೊಂಡವು.
     ಕುಂಬಳೆ ಗ್ರಾಮ ಪಂಚಾಯತ್ ಅಧ್ಯಕ್ಷ ಪುಂಡರೀಕಾಕ್ಷ ಕೆ.ಎಲ್. ಅವರು ಅಹವಾಲು ಸಲ್ಲಿಸಿ ಮಾತನಾಡಿದರು. ಕೆಟೆಟ್ ಪರೀಕ್ಷೆಯನ್ನು(ಎಲ್.ಪಿ.ಎಸ್.ಎ.) ಕನ್ನಡದಲ್ಲಿ ನಡೆಸಬೇಕು, ಎಲ್ಲ ಸರಕಾರಿ ಕಚೇರಿಗಳಲ್ಲಿ ಕನ್ನಡ ಬಲ್ಲ ಸಿಬ್ಬಂದಿಯನ್ನು ನೇಮಿಸಬೇಕು, ಜಿಲ್ಲೆಯಲ್ಲಿ ಕನ್ನಡ ಅಭ್ಯರ್ಥಿಗಳಿಗಾಗಿಯೇ ಲೋಕ ಸೇವಾ ಆಯೋಗದ ಸ್ಪೆಷ್ಯಲ್ ರಿಕ್ರೂಟ್ ಮೆಂಟ್ ನಡೆಸಬೇಕು, ಜೊತೆಗೆ ಒಂದರಿಂದ ಹತ್ತನೇ ತರಗತಿ ವರೆಗೆ ಕನ್ನಡದಲ್ಲಿ ಕಲಿತ ಅಭ್ಯರ್ಥಿಗಳಿಗೆ ಮಾತ್ರ ಇಲ್ಲಿ ಅವಕಾಶ ನೀಡಬೇಕು, ಕನ್ನಡ ಎಲ್.ಪಿ.ಎಸ್.ಎ., ಯು.ಪಿ.ಎಸ್.ಎ. ಶಿಕ್ಷಕರ ನೇಮಕಾತಿ ತ್ವರಿತವಾಗಿ ನಡೆಸಬೇಕು ಇತ್ಯಾದಿ ಪ್ರಧಾನ ಬೇಡಿಕೆಗಳನ್ನು ಅವರು ಸಲ್ಲಿಸಿದ್ದಾರೆ.
     ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್ ಎಂ.ಸಾಲ್ಯಾನ್ ಅವರು ಮಾತನಾಡಿ ಭಾಷಾ ಅಲ್ಪಸಂಖ್ಯಾತರ ಸಮಸ್ಯೆಗಳನ್ನು ಶೀಘ್ರದಲ್ಲೇ ರಾಜ್ಯ ಸರಕಾರ ಬಗೆಹರಿಸಬೇಕು ಎಂದು ಆಗ್ರಹಿಸಿದರು. ಕೆಲವು ಪರಿಹಾರ ನಮ್ಮ ಬಳಿಯೇ ಇದೆ ಎಂದ ಅವರು ರಾಜ್ಯ ಸರ್ಕಾರ ಜಾರಿಗೊಳಿಸುವ ಅನೇಕ ಯೋಜನೆಗಳು ಅನುಷ್ಠಾನಗೊಳ್ಳದೇ ಇದ್ದು, ಸಿಬ್ಬಂದಿ ಮತ್ತು ಸರ್ಕಾರಿ ಶಿಕ್ಷಕರು ಈ ಬಗ್ಗೆ ಗಂಭೀರ ಚಿಂತನೆ ನಡೆಸಬೇಕು ಎಂದು ತಿಳಿಸಿದರು. ಕೇರಳ ಪಾರ್ತಿಸುಬ್ಬ ಯಕ್ಷಗಾನ ಕಲಾಕ್ಷೇತ್ರವನ್ನು ಶೀಘ್ರವೇ ಪುನರ್ ರಚನೆ ಮಾಡಬೇಕು. ಈ ಸಂಸ್ಥೆಗೆ ಸರಕಾರ ದೊಡ್ಡ ಮಟ್ಟದ ವಾರ್ಷಿಕ ನಿಧಿ ಒದಗಿಸುತ್ತಿದೆ. ಈ ಮೊಬಲಗಿನಲ್ಲಿ ಕೆಲವು ಪಾಲು ವಿಂಗಡಿಸಿ ಕಾಸರಗೋಡು ಸರ್ಕಾರಿ ಕಾಲೇಜಿನ ಯಕ್ಷಗಾನ ಸಂಶೋಧನೆ ಕೇಂದ್ರಕ್ಕೆ, ಕೇರಳ ತುಳು ಅಕಾಡೆಮಿಗೆ ಇತ್ಯಾದಿ ಸಂಘಟನೆಗಳ ಸಾಹಿತ್ಯ-ಸಾಂಸ್ಕøತಿಕ- ಕಲಾ ಕ್ಷೇತ್ರಗಳ ಚಟುವಟಿಕೆಗಳಿಗಾಗಿ ನೀಡಬೇಕು ಎಂದು ಬಯಸಿದರು.
     ಜಿಲ್ಲಾ ಪ್ರವಾಸೋದ್ಯಮ ಇಲಾಖೆಯ ಸಹಭಾಗಿತ್ವದಲ್ಲಿ ಯಕ್ಷಗಾನ ಸಂಶೋಧನೆ ಕೇಂದ್ರದ ಚಟುವಟಿಕೆ ನಡೆಸುವ ಯತ್ನ ನಡೆಸುವಂತೆ ನಡುವಟ್ಟಂ ಗೋಪಾಲಕೃಷ್ಣನ್ ಸಲಹೆ ಮಾಡಿದರು.
      ಕಾಸರಗೋಡು ಸರಕಾರಿ ಕಾಲೇಜಿನ ಕನ್ನಡ ವಿಭಾಗ ಉಪನ್ಯಾಸಕ ಡಾ.ರತ್ನಾಕರ ಮಲ್ಲಮೂಲೆ ಅವರು ಮಾತನಾಡಿ ಶಿಕ್ಷಣ ವಲಯದ ಬಹುತೇಕ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳದೇ ಇರಲು ಕೆಲವು ಶಿಕ್ಷಕರ ಭೀತಿಯೂ ಕಾರಣ ಎಂದರು. ಕನ್ನಡದ ಪರವಾಗಿ ಧ್ವನಿ ಎತ್ತಿದರೆ ಅದು ಸರಕಾರದ ವಿರುದ್ಧ ಎತ್ತುವ ಧ್ವನಿಯಾದೀತು ಎಂಬ ತಪ್ಪು ಕಲ್ಪನೆ ಕೆಲವು ಅಧ್ಯಾಪಕರಲ್ಲಿ ನೆಲೆಸಿಕೊಂಡಿದೆ. ಇಂಥಾ ಕಾರಣಗಳಿಂದ ಸುಶಿಕ್ಷಿತರೂ ಅಶಿಕ್ಷಿತರಾಗಬೇಕಾಗಿ ಬರುವ ದುರಂತ ಜಿಲ್ಲೆಯಲ್ಲಿದೆ ಎಂದರು.
     ವಿವಿಧ ಕನ್ನಡಪರ ಸಂಘಟನೆಗಳ, ವಿದ್ಯಾರ್ಥಿ ಸಂಘಟನೆಗಳ, ಅಧ್ಯಾಪಕರ ಸಂಘಟನೆಗಳ, ಮಹಿಳಾ ಸಂಘಟನೆಗಳ, ಸಾಂಸ್ಕøತಿಕ ಸಂಘಟನೆಗಳ, ಸಾಹಿತ್ಯಿಕ ಸಂಘಟನೆಗಳ ಪ್ರತಿನಿಧಿಗಳು ಅಹವಾಲು ಸಲ್ಲಿಸಿ, ಮಾತನಾಡಿದರು. ಜಿಲ್ಲಾ ಮಹಿಳಾ ಕಲ್ಯಾಣ ಅಧಿಕಾರಿ ಲಲಿತಾ ಎಂ., ಎ.ಡಿ.ಸಿ. ಹಿರಿಯ ವರಿಷ್ಠಾಧಿಕಾರಿ ಆಯೂಬ್ ಖಾನ್, ಇಲ್ಲಾ„ಕಾರಿ ಕಚೇರಿಯ ಕಂದಾಯ ಇಲಾಖೆ ಸಿಬ್ಬಂದಿ ಸುರೇಶ್ ಮಣಿಯಾಣಿ ಉಪಸ್ಥಿತರಿದ್ದರು. ಹುಸೂರ್ ಶಿರಸ್ತೇದಾರ್ ಕೆ.ನಾರಾಯಣನ್ ವಂದಿಸಿದರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries