ಕಾಸರಗೋಡು: ಕಾಸರಗೋಡು ನಗರಸಭಾ ಮಿನಿ ಸಭಾಂಗಣದಲ್ಲಿ ಶನಿವಾರ ನಡೆದ ಕೇರಳ ಜರ್ನಲಿಸ್ಟ್ ಯೂನಿಯನ್(ಕೆಜೆಯು)ನ ಕಾಸರಗೋಡು ಜಿಲ್ಲಾ ಸಮ್ಮೇಳನದಲ್ಲಿ ನೂತನ ಜಿಲ್ಲಾ ಸಮಿತಿಗೆ ರೂಪು ನೀಡಲಾಯಿತು.
ಇಂಡಿಯನ್ ಜರ್ನಲಿಸ್ಟ್ ಯೂನಿಯನ್(ಐಜೆಯು) ಅಖಿಲ ಭಾರತ ಪ್ರಧಾನ ಕಾರ್ಯದರ್ಶಿ ಜಿ.ಪ್ರಭಾಕರನ್ ಅವರ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಕೆಜೆಯು ರಾಜ್ಯ ಕಾರ್ಯದರ್ಶಿ ಕೆ.ಸಿ.ಸ್ಮಿಜನ್, ಪ್ರಕಾಶನ್ ಪಯ್ಯನ್ನೂರ್, ರಾಜ್ಯ ಸಮಿತಿ ಸದಸ್ಯ ನಾಸರ್ ಸಿ.ಕೆ., ಕಣ್ಣೂರು ಜಿಲ್ಲಾ ಕಾರ್ಯದರ್ಶಿ ಶ್ರೀನಿ ಆಲಕ್ಕೋಡ್, ಅಶೋಕ ನೀರ್ಚಾಲು ಉಪಸ್ಥಿತರಿದ್ದರು. ನೂತನ ಜಿಲ್ಲಾ ಸಮಿತಿಗೆ ಟಿ.ವಿ.ರಾಘವನ್(ರಕ್ಷಾಧಿಕಾರಿ), ವಿ.ಅಬ್ದುಲ್ ಲತೀಫ್ (ಅಧ್ಯಕ್ಷ), ಗಂಗಾಧರ ಪಳ್ಳತ್ತಡ್ಕ, ಶರೀಫ್ ಏರೋಲ್(ಉಪಾಧ್ಯಕ್ಷರು), ಪ್ರಮೋದ್ ರಾಜಪುರಂ(ಪ್ರಧಾನ ಕಾರ್ಯದರ್ಶಿ), ಪುರುಷೋತ್ತಮ ಭಟ್ ಕೆ, ಅಬ್ದುಲ್ ಲತೀಫ್ ಉಳುವಾರ್(ಜೊತೆ ಕಾರ್ಯದರ್ಶಿಗಳು), ವಿದ್ಯಾ ಗಣೇಶ್ ಅಣಂಗೂರ್(ಖಜಾಂಜಿ) ಅವರನ್ನು ಆರಿಸಲಾಯಿತು. ನಿಕಟಪೂರ್ವ ಜಿಲ್ಲಾಧ್ಯಕ್ಷ ಅಬ್ದುಲ್ಲ ಕುಂಬಳೆ ಅವರು ವಿ.ಅಬ್ದುಲ್ ಲತೀಫ್ ಅವರಿಗೆ ನಿರ್ಣಯ ಪುಸ್ತಕವನ್ನು ಕೊಡಮಾಡಿ ಅಧಿಕಾರ ಹಸ್ತಾಂತರಿಸಿದರು.