ಕಾಸರಗೋಡು: ಮುದಿಯಕ್ಕಾಲು ಶ್ರೀ ಕಾಲಭೈರವ ಮತ್ತು ಶ್ರೀ ಮಹಾಗಣಪತಿ ದೇವಸ್ಥಾನದಲ್ಲಿ ಡಿ.10 ರಿಂದ 12 ರ ವರೆಗೆ ವಿವಿಧ ಕಾರ್ಯಕ್ರಮಗಳೊಂದಿಗೆ ಪುನ:ಪ್ರತಿಷ್ಠಾ ಅಷ್ಟಬಂಧ ಬ್ರಹ್ಮಕಲಶೋತ್ಸವ ನಡೆಯಲಿದೆ.
ಡಿ.10 ರಂದು ಅಪರಾಹ್ನ 3 ಕ್ಕೆ ಉಗ್ರಾಣ ತುಂಬುವುದು, ಹಸಿರುವಾಣಿ ಹೊರೆಕಾಣಿಕೆ ಮೆರವಣಿಗೆ, ಸಂಜೆ 6 ಕ್ಕೆ ತಂತ್ರಿವರ್ಯರಿಗೆ ಪೂರ್ಣಕುಂಭ ಸ್ವಾಗತ, ರಾತ್ರಿ 7 ಕ್ಕೆ ಸಾಮೂಹಿಕ ಪ್ರಾರ್ಥನೆ, ಪುಣ್ಯಾಹ, ಪ್ರಾಸಾದ ಶುದ್ಧಿ, ವಾಸ್ತು - ರಕ್ಷೋಘ್ನ ಹೋಮ, ವಾಸ್ತುಬಲಿ, 7.30 ಕ್ಕೆ ಮಕ್ಕಳಿಂದ ನೃತ್ಯ ಕಲರವ, 9 ಕ್ಕೆ ಅನ್ನಸಂತರ್ಪಣೆ ನಡೆಯುವುದು.
ಡಿ.11 ರಂದು ಬೆಳಗ್ಗೆ 6 ಕ್ಕೆ ಗಣಪತಿ ಹೋಮ, ಬಿಂಬ ಶುದ್ಧಿ, ಪೆÇ್ರೀಕ್ತ ಹೋಮ, ಪ್ರಾಯಶ್ಚಿತ ಹೋಮ, ಶಾಂತಿ ಹೋಮ, ಅನುಜ್ಞಾಕಲಶ ಪೂಜೆ, ಜೀವಕಲಶ ಪೂಜೆ, ಜೀವ ಕಲಶ, ಶಯ್ಯಾಗಮನ, ಶಯನ, ಮಧ್ಯಾಹ್ನ 1 ಕ್ಕೆ ಅನ್ನಸಂತರ್ಪಣೆ, ಸಂಜೆ 7 ರಿಂದ ಅ„ವಾಸ ಹೋಮ, ಕುಂಭೇಶ ಕರ್ಕರಿ, ಕಲಶ ಪೂಜೆ, ಬ್ರಹ್ಮಕಲಶ ಪೂಜೆ, ಪರಿಕಲಶ ಪೂಜೆ, ಕಲಶಾ„ವಾಸ, ಪೂರ್ವಾಹ್ನ 11.30 ರಿಂದ 12.30 ರ ವರೆಗೆ ಭಜನೆ, ಸಂಜೆ 4.30 ರಿಂದ ಸಭಾ ಕಾರ್ಯಕ್ರಮ, ರಾತ್ರಿ 7.30 ರಿಂದ ನೃತ್ಯಾವಳಿ, 9.30 ಕ್ಕೆ ಅನ್ನಸಂತರ್ಪಣೆ ಜರಗಲಿದೆ. ಡಿ.12 ರಂದು ಬೆಳಗ್ಗೆ 6 ಕ್ಕೆ ಗಣಪತಿ ಹೋಮ, ತತ್ತ್ವ ಹೋಮ, 7.20 ರಿಂದ ಸಾನ್ನಿಧ್ಯ ಪ್ರತಿಷ್ಠೆ, ಜೀವಕಲಶಾಭಿಷೇಕ, ತತ್ತ್ವ ಕಲಶಾಭಿಷೇಕ, ಪರಿಕಲಶಾಭಿಷೇಕ, 10.30 ಕ್ಕೆ ನಾಗ ಸನ್ನಿ„ಯಲ್ಲಿ ತಂಬಿಲ, 11.06 ರಿಂದ ಬ್ರಹ್ಮಕಲಶಾಭಿಷೇಕ, ಮಧ್ಯಾಹ್ನ 12.30 ಕ್ಕೆ ಮಹಾಪೂಜೆ, ಪ್ರತಿಷ್ಠಾ ಬಲಿ, ಪ್ರಸಾದ ವಿತರಣೆ, ಮಂತ್ರಾಕ್ಷತೆ, 1.30 ರಿಂದ ಅನ್ನಸಂತರ್ಪಣೆ ಜರಗಲಿದೆ.