ಕಾಸರಗೋಡು: ತಪ್ಪು ಮಾಹಿತಿಗಳ ಹಿನ್ನೆಲೆಯಲ್ಲಿತಮ್ಮ ಮಕ್ಕಳಿಗೆ ರೋಗ ಪ್ರತಿರೋಧ ಚುಚ್ಚುಮದ್ದು ಹಾಕಿಸದೇ ಇರುವ ಹೆತ್ತವರಿಗೆಸಮಗ್ರ ಮಾಹಿತಿ ನೀಡಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮಕ್ಕಳಿಗೆಚುಚ್ಚುಮದ್ದುಹಾಕಿಸುವಂತೆಮಾಡುವ ನಿಟ್ಟಿನಲ್ಲಿ 'ಮಿಷನ್ ಆಫಿಯತ್'ಎಂಬ ವಿನೂತನ ಯೋಜನೆ ಆರಂಭಿಸಲಾಗಿದೆ.
ಮೊಗ್ರಾಲ್‍ಪುತ್ತುರು,ಚೆಂಗಳ ಗ್ರಾಮಪಂಚಾಯಿತಿ ವ್ಯಾಪ್ತಿಯಲ್ಲಿ ಈ ಯೋಜನೆ ಆರಂಭಗೊಂಡಿದೆ. ಗ್ರಾಮಪಂಚಾಯಿತಿಗಳ ಸಹಕಾರದೊಂದಿಗೆ ಪ್ರಾಥಮಿಕ ಆರೋಗ್ಯ ಕೇಂದ್ರಗಳು ಈ ಯೋಜನೆ ಜಾರಿಗೊಳಿಸುತ್ತಿವೆ. ಮಕ್ಕಳಿಗೆನೀಡಲಾಗುವ ರೋಗ ಪ್ರತಿರೋಧ ಚುಚ್ಚುಮದ್ದಿನಿಂದ ತಪ್ಪು ಕಲ್ಪನೆಗಳ ಹಿನ್ನೆಲೆಯಲ್ಲಿಮಾರುದೂರ ಉಳಿಯುವ ಹೆತ್ತವರ ಸಂಖ್ಯೆ ಜಿಲ್ಲೆಯ ಕೆಲವು ಪ್ರದೇಶಗಳಲ್ಲಿ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಯೋಜನೆಜಾರಿಗೊಳಿಸಲಾಗುತ್ತಿದೆ. ಚೆಂಗಳ ಗ್ರಾಮಪಂಚಾಯತ್ ವ್ಯಾಪ್ತಿಯಲ್ಲಿ ಈ ವರೆಗೆ ಒಂದೇ ಒಂದು ರೋಗ ಪ್ರತಿರೋಧ ಚುಚ್ಚುಮದ್ದುಪಡೆಯದೇ ಇರುವ 12 ಮಕ್ಕಳು, ಅರ್ಧಾಂಶವಷ್ಟೇ ಪಡೆದಿರುವ 250 ಮಂದಿ ಮಕ್ಕಳು, ಮೊಗ್ರಾಲ್ ಪುತ್ತೂರಿನಲ್ಲಿ ಈ ವರೆಗೆಚುಚ್ಚುಮದ್ದು ಪಡೆಯದೇ ಇರುವ 105 ಮಂದಿ ಮಕ್ಕಳು ಇದ್ದಾರೆ ಎಂದು ಆರೋಗ್ಯ ಇಲಾಖೆ ಲೆಕ್ಕಾಚಾರ ತಿಳಿಸಿವೆ.ಇವರಿಗೆಚುಚ್ಚುಮದ್ದು ಕೊಡಿಸಿ ಈ ವಲಯದಲ್ಲಿ ಸೇ 100 ಫಲಿತಾಂಶ ಪಡೆಯುವ ಗುರಿ ಸಾಧಿಸುವ ಉದ್ದೇಶದಿಂದ ಯೋಜನೆ ಜಾರಿಗೊಳಿಸಲಾಗಿದೆ.
ಏನಿದು ಮಿಷನ್ ಆಫಿಯತ್?
ಆಫಿಯತ್ ಎಂದರೆ ಅರೆಬಿಕ್ ಭಾಷೆಯಲ್ಲಿ ಆರೋಗ್ಯ, ಸೌಖ್ಯ ಎಂದರ್ಥ. ಬಂದ್ಯೋಡು ಕೊಕ್ಕೆಚ್ಚಾಲ್, ಕುಂಬಳೆ ಇಮಾಂ ಷಾಫಿ ಅಕಾಡೆಮಿ ಕಾಲೇಜುಗಳ 40 ವಿದ್ಯಾರ್ಥಿಗಳು ಈ ನಿಟ್ಟಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಪಠ್ಯಪದ್ಧತಿಯ ಪ್ರಕಾರ ಇವರಿಗೆ 190 ತಾಸುಗಳ ಸಮಾಜ ಸೇವೆ ಕಡ್ಡಾಯ. ಮಿಷನ್ ಆಫಿಯತ್‍ಗಾಗಿಇವರು ಈ ಅವಕಾಶ ಬಳಸಿಕೊಳ್ಳುತ್ತಿದ್ದಾರೆ. ಈ ಬಗ್ಗೆ ವಿಶೇಷ ತರಬೇತಿ ನೀಡಲಾಗಿದ್ದು, ಚೆಂಗಳ ವೈದ್ಯಧಿಕಾರಿ ಡಾ.ಷಮೀಮಾ, ಮೊಗ್ರಾಲ್ ಪುತ್ತೂರು ವೈದ್ಯಾಧಿಕಾರಿ ಡಾ.ನಾಸ್ಮಿನ್ ಜೆ. ನಝೀರ್, ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್, ಅಕ್ಕರ ಫೌಂಡೇಶನ್ ಯೋಜನೆ ಪ್ರಬಂಧಕ ಯಾಸರ್ ವಾಫಿ ತರಬೇತಿಗೆ ನೇತೃತ್ವ ವಹಿಸಿದ್ದರು.
ಚಟುವಟಿಕೆ ಹೇಗೆ ?
ಈ ಗ್ರಾಮ ಪಂಚಾಯತ್ ಗಳನ್ನು ಕೇಂದ್ರೀಕರಿಸಿ ಫೀಲ್ಡ್ ವರ್ಕ್ ಗಾಗಿ ಗುಂಪು ರಚಿಸಿ ಚುಚ್ಚುಮದ್ದಿನ ಬಗ್ಗೆ ವಿರೋಧ ತೋರುವ ಹೆತ್ತವರನ್ನು ಮನೆಗಳಿಗೆ ಸಂದರ್ಶನ ನೀಡುವ ಈ ವಿವಿದ್ಯಾರ್ಥಿಗಳು ಅವರಲ್ಲಿರುವ ತಪ್ಪುಕಲ್ಪನೆ ದೂರೀಕರಿಸುವರು. ಜನಪ್ರತಿನಿಧಿಗಳು, ಜೆ.ಪಿ.ಎಚ್.ಎನ್.ಜೆ. ಎಚ್.ಐ., ಆಶಾ ಕಾರ್ಯಕರ್ತೆಯರು, ಇವರ ಜತೆಗಿರುವರು. ಚೆಂಗಳದಲ್ಲಿ 6ಉಪಕೇಂದ್ರಗಳಿಗಾಗಿ 10ತಂಡ, ಮೊಗ್ರಾಲ್ ಪುತ್ತೂರಿನಲ್ಲಿ 6ತಂಡಗಳು ಕಾರ್ಯಾಚರಿಸುತ್ತಿದೆ. ಈ ಮೂಲಕ ಮನವರಿಕೆಮಾಡಿಕೊಂಡ ಹೆತ್ತವರು ತಕ್ಷಣ ತಮ್ಮಮ್ಕಕಳ ಸಹಿತ ಸಮೀಪದ ಅಂUನವಾಡಿಗಳಿಗೆತೆರಳಿ ವ್ಯಾಕ್ಸೀನ್ ಹಾಕಿಸಿಕೊಳ್ಳುವ ವ್ಯವಸ್ಥೆಮಾಡಲಾಗಿದೆ.
ಕೈ ಹೊತ್ತಗೆ ಸಿದ್ಧ:
ಈ ಯೋಜನೆ ಸಂಬಂಧ ಮಾಹಿತಿಯಿರುವ ಕೈ ಹೊತ್ತಗೆ ಗ್ರಾಮಪಂಚಾಯತ್ ನ ಸಹಾಯದೊಂದಿಗೆಮುದ್ರಿಸಲಾಗಿದೆ. ಜನಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಪಂಚಾಯತ್ ಮಟ್ಟದ ಮಹಲ್ ¸ಮಿತಿಅಧ್ಯಕ್ಷ, ಕಾರ್ಯದರ್ಶಿ, ಮದ್ರಸಾಶಿಕ್ಷಕರು, ಧಾರ್ಮಿಕ ನೇತಾರರು ಈ ನಿಟ್ಟಿನಲ್ಲಿ ಸಭೆಗಳನ್ನೂ ನಡೆಸುವರು. ವಿಚಾರಸಂಕಿರಣ, ಕಾರ್ಯಾಗಾರ, ತರಗತಿಗಳೂ ಈ ನಿಟ್ಟಿನಲ್ಲಿ ಜರುಗಲಿದೆ. ಕುಟುಂಬಸಭೆಗಳು, ಜನಪರ ಕೂಟಗಳು, ಮನೆ ಮನೆ ಸಂದರ್ಶನ, ನೋಟೀಸು ವಿತರಣೆ, ಫ್ಲಾಷ್ ಮೊಬ್,ಸಾಕ್ಷ್ಯಚಿತ್ರ ಪ್ರದರ್ಶನ, ಮೆರವಣಿಗೆ, ಬೀದಿನಾಟಕ ಇತ್ಯಾದಿಸುಮಾರು50ಕಾರ್ಯಕ್ರಮಗಳೂ ಈ ನಿಟ್ಟಿನಲ್ಲಿ ನಡೆಯಲಿವೆ.
ಯೋಜನಾ ವರದಿ ಹಸ್ತಾಂತರ:
ಚೆಂಗಳ, ಮೊಗ್ರಾಲ್ ಪುತ್ತೂರು ಗ್ರಾಮಪಂಚಾಯತ್ ಮಟ್ಟದ ಮಕ್ಕಳಿಗೆ ರೋಗ ಪ್ರತಿರೋಧ ಚುಚ್ಚುಮದ್ದುನೀಡಿಕೆಯಲ್ಲಿ ಶೇ ನೂರು ಗುರಿ ತಲಪುವ ನಿಟ್ಟಿನಲ್ಲಿ ಜಾರಿಗೊಳಿಸಿದ ಮಿಷನ್ ಅಫೀಯತ್ ನ ಯೋಜನೆವರದಿಯನ್ನು ಜಿಲ್ಲಾವೈದ್ಯಾಧಿಕಾರಿ ಡಾ.ಎ.ಪಿ.ದಿನೇಶ್ ಕುಮಾರ್ ಅವರಿಗೆ ಹಸ್ತಾಂತರಿಸಲಾಯಿತು. ವೈದ್ಯಧಿಕಾರಿ ಡಾ. ನಾಸ್ಮಿನ್ ಜೆ.ನಝೀರ್,ಆರೋಗ್ಯ ಇನ್ಸ್ ಪೆಕ್ಟರ್ ಬಿ.ಅಶ್ರಫ್, ಸಹಾಯಕ ಜಿಲ್ಲಾ ವೈದ್ಯಾದಿಕಾರಿಗಳಾದಡಾ.ರಾಮದಾಸ್, ಡಾ.ಷಾಂಟಿ, ಆರ್.ಸಿ.ಎಚ್.ಅಧಿಕಾರಿ ಡಾ.ಮುರಳೀಧರ ನಲ್ಲೂರಾಯ, ತಾಲೂಕು ಆಸ್ಪತ್ರೆ ವರಿಷ್ಠಾಧಿಕಾರಿ ಡಾ.ರಾಜಾರಾಂ, ಡಾ.ಜಮಾಲ್ ಅಹಮ್ಮದ್, ಕಿರಿಯಆರೋಗ್ಯ ಇನ್ಸ್‍ಪೆಕ್ಟರ್‍ರಾಜೇಶ್ ಮೊದಲಾದವರು ಉಪಸ್ಥಿತರಿದ್ದರು.