ಕಾಸರಗೋಡು: ಗೌಡ ಸಾರಸ್ವತ ಬ್ರಾಹ್ಮಣ ಸಮಾಜದ ಶ್ರೀ ವರದರಾಜ ವೆಂಕಟರಮಣ ದೇವಸ್ಥಾನದಲ್ಲಿ ನಡೆದ 109ನೇ ಸಂಕೀರ್ತನ ಸಪ್ತಾಹ ಸಮಾರಂಭದ ವೇಳೆ ಗೀತಾ ಜಯಂತಿಯಂದು ಸಭಾ ಕಾರ್ಯಕ್ರಮ ನಡೆಯಿತು.
ದೇಗುಲದ ಆಡಳಿತ ಮೊಕ್ತೇಸರ ಕೆ.ವಿದ್ಯಾಕರ ಮಲ್ಯ ಸಭೆಯ ಅಧ್ಯಕ್ಷತೆ ವಹಿಸಿದ್ದರು. ದಾಸ ಸಾಹಿತ್ಯ ಪ್ರಾಜೆಕ್ಟ್ ತಿರುಮಲ ಇದರ ಸಹ ಸಂಚಾಲಕಿ ಅನುಪಮಾ ರಾಮದಾಸ್ ಶೆಣೈ ಅವರು ಗೀತೆ ಕೃಷ್ಣ ಹೇಳಲು ಕಾರಣವಾದದ್ದು ಅರ್ಜನ ಕರ್ತವ್ಯದಿಂದ ವಿಚಲಿತ ಮನೋಸ್ಥಿತಿಯಾಗಿತ್ತು. ಇದು ಭಗವಂತನ ವಾಣಿ. ಇದುವೇ ಮುಂದೆ ಸರ್ವ ಸಮಸ್ಯೆ ಪರಿಹಾರದ ಪಾವನ ಗ್ರಂಥವಾಯಿತು ಎಂದು ಗೀತೆಯ ಬಗ್ಗೆ ವಿವರಣೆ ನೀಡಿದರು.
ಮೊಕ್ತೇಸರರಾದ ಎಂ.ಅಶೋಕ ಶೆಣೈ ಮತ್ತು ರವಿಶಂಕರ್ ಕಾಮತ್, ಜಿ.ಎಸ್.ಬಿ. ಸೇವಾ ಸಂಘದ ಅಧ್ಯಕ್ಷ ಕೃಷ್ಣ ಮಲ್ಯ, ಮಹಿಳಾ ಸಂಘದ ಅಧ್ಯಕ್ಷೆ ವಿಮಲಾ ಆರ್.ಕಾಮತ್ ಉಪಸ್ಥಿತರಿದ್ದರು. ಮಾಲತಿ ಮಾಧವ ಕಾಮತ್ ಮುಖ್ಯ ಅತಿಥಿಗಳ ಪರಿಚಯ ಮಾಡಿದರು.
ವರದೇಂದ್ರ ಚಾರಿಟೆಬಲ್ ಟ್ರಸ್ಟ್ ವತಿಯಿಂದ ಓರ್ವ ವಿದ್ಯಾರ್ಥಿಗೆ ನೀಡಲಾಗುವ ಪೆÇ್ರೀತ್ಸಾಹ ಬಹುಮಾನ ವನ್ನು ಕೆ.ಸಂತೋಷ ಶೆಣೈ ಅವರಿಗೆ ನೀಡಲಾಯಿತು. ಸಿ.ಮಧುಕರ ಕಾಮತ್ ಅವರು ಈ ಬಹುಮಾನ ವನ್ನು ಕೊಡಮಾಡಿದ್ದರು.
ಸಪ್ತಾಹ ಸಮಿತಿ ಅಧ್ಯಕ್ಷ ಎ.ರವೀಂದ್ರ ರಾವ್ ಸ್ವಾಗತಿಸಿ,. ಕೆ.ಪುಂಡಲೀಕ ಶೆಣೈ ವಂದಿಸಿದರು. ಪ್ರಾರಂಭ ದಲ್ಲಿ ವೈದಿಕರು ಪ್ರಾರ್ಥನೆ ಮಾಡಿದರು. ಸಪ್ತಾಹ ಸಮಾರಂಭದ ವೇಳೆ ಗೌಡ ಸಾರಸ್ವತ ಬ್ರಾಹ್ಮಣ ಸೇವಾ ಸಂಘ ಮತ್ತು ಮಹಿಳಾ ಸಂಘ ನಡೆಸಿದ ಸ್ಪರ್ಧಾ ವಿಜೇತರಿಗೆ ಈ ವೇಳೆ ಬಹುಮಾನ ವಿತರಿಸಲಾಯಿತು.