ಕಾಸರಗೋಡು: ಮಲಬಾರ್ ದೇವಸ್ವಂ ಬೋರ್ಡ್ ವ್ಯಾಪ್ತಿಯಲ್ಲಿ ಜಿಲ್ಲೆಯ ವಿವಿಧ ದೇವಾಲಯಗಳಲ್ಲಿ ಪರಂಪರೆಯೇತರ ಟ್ರಸ್ಟಿಗಳ ನೇಮಕಾತಿ ಸಂಬಂಧ ಅರ್ಜಿ ಆಹ್ವಾನಿಸಲಾಗಿದೆ. ಮಂಜೇಶ್ವರ ತಾಲೂಕಿನ ಮೀಂಜ ಕೊಳಪಚ್ಚ ಶಾಸ್ತಾ ದೇವಾಲಯದಲ್ಲಿ, ಕುಬಣೂರು ಶಾಸ್ತಾ ದೇವಾಲಯದಲ್ಲಿ, ಕಾಸರಗೋಡು ತಾಲೂಕಿನ ಕುಂಬ್ಡಾಜೆ ಬೆಳಿಂಜ ಪೂಮಾಣಿ ಕಿನ್ನಿಮಾಣಿ ದೇವಾಲಯ, ಹೊಸದುರ್ಗ ತಾಲೂಕಿನ ಅಂಬಲತ್ತರ ಮಡಿಕೈ ಮಾಡಂ ದೇವಾಲಯದಲ್ಲಿ ಪರಂಪರೆಯೇತರ ಟ್ರಸ್ಟಿಗಳ ನೇಮಕಾತಿ ಸಂಬಂಧ ಅರ್ಜಿ ಕೋರಲಾಗಿದೆ.
ಅರ್ಜಿಗಳು ಮಲಬಾರ್ ದೇವಸ್ವಂ ಬೋರ್ಡ್‍ನ ಕಾಸರಗೋಡು ವಿಭಾಗೀಯ ಕಚೇರಿಯಾಗಿರುವ ನೀಲೇಶ್ವರದ ಸಹಾಯಕ ಕಮೀಷನರ್ ಅವರ ಕಚೇರಿಗೆ ಡಿ.18ರ ಸಂಜೆ 5 ಗಂಟೆಗೆ ಮುಂಚಿತವಾಗಿ ಸಲ್ಲಿಸಬೇಕು. ಅರ್ಜಿಫಾರಂ ಬೋರ್ಡ್‍ನ ವೆಬ್‍ಸೈಟ್‍ನಲ್ಲಿ ಮತ್ತು ನಿಲೇಶ್ವರದ ಸಹಾಯಕ ಕಮೀಷನರ್ ಅವರ ಕಚೇರಿಯಲ್ಲಿ ಲಭ್ಯವಿದೆ.