ಕಾಸರಗೋಡು: ಸ್ಥಳೀಯಾಡಳಿತ ಸಂಸ್ಥೆಗಳ ಅಭಿವೃದ್ಧಿಗೆ ವಿರುದ್ಧವಾಗಿ ನಡೆದುಕೊಲ್ಳುವ ಮೂಲಕ ರಾಜ್ಯದ ಎಡರಂಗ ಸರ್ಕಾರ ರಾಜ್ಯವನ್ನು ಅಧೋಗತಿಯತ್ತ ತಳ್ಳುತ್ತಿರುವುದಾಗಿ ಡಿಸಿಸಿ ಅಧ್ಯಕ್ಷ ಹಾಕಿಂ ಕುನ್ನಿಲ್ ತಿಳಿಸಿದ್ದಾರೆ. ಅವರು ಕಲ್ಯಾಣ ಪಿಂಚಣಿ ವ್ಯವಸ್ಥೆಯನ್ನು ಬುಡಮೇಲುಗೊಳಿಸುತ್ತಿರುವ ಸರ್ಕಾರದ ಧೋರಣೆ ಖಂಡಿಸಿ ಡಿಸಿಸಿ ವತಿಯಿಂದ ಬುಧವಾರ ಜಿಲ್ಲಾಧಿಕಾರಿ ಕಚೇರಿ ಎದುರು ಜನಪ್ರತಿನಿಧಿಗಳ ಧರಣಿ ಉದ್ಘಾಟಿಸಿ ಮಾತನಾಡಿದರು.
ಡಿಸಿಸಿ ಉಪಾಧ್ಯಕ್ಷ ವಕೀಲ ರಾಜೇಂದ್ರನ್ ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಕಾರ್ಯದರ್ಶಿ ಕೆ. ನೀಲಕಂಠನ್, ಐಕ್ಯರಂಗ ಜಿಲ್ಲಾ ಸಂಚಾಲಕ ಗೋವಿಂದನ್ ನಾಯರ್, ಡಿಸಿಸಿ ಕಾರ್ಯದರ್ಶಿಗಳಾದ ಪಿ.ಜಿ ದೇವ್, ಎಂ. ಕುಞಂಬು ನಾಯರ್, ಎಂ.ಸಿ ಪ್ರಭಾಕರನ್, ಕರುಣ್ ಥಾಪ, ವಕೀಲ ಗೋವಿಂದನ್ ನಾಯರ್, ಕೆ.ಪಿ ಪ್ರಕಾಶನ್, ಸಿ.ಪಿ ಜೇಮ್ಸ್, ಪಿ.ವಿ ಸುರೇಶ್, ಹರೀಶ್ ಪಿ.ನಾಯರ್, ಟೋಮಿ ಪ್ಲಾಚೇರಿ, ಶಾಂತಮ್ಮ ಪಿಲಿಪ್, ಗಂಗಾಧರನ್, ಶಾನವಾಸ್ ಪಾದೂರು, ಹರ್ಷಾದ್ ವರ್ಕಾಡಿ, ಕೆ. ವಾರಿಜಾಕ್ಷನ್, ಕೆ. ಖಾಲಿದ್ ಮುಂತಾದವರು ಉಪಸ್ಥಿತರಿದ್ದರು. ರಾಜು ಕಟ್ಟಕಯಂ ಸವಾಗತಿಸಿದರು. ಧರಣಿಗೆ ಮೊದಲು ಜನಪ್ರತಿನಿಧಿಗಳು ಪ್ರತಿಭಟನಾ ಮೆರವಣಿಗೆ ನಡೆಸಿದರು.