ಕೊಲ್ಲಂ: ಕೋರ್ಟ್ ನಿಂದ ಜಾರಿಯಾಗುವ ಸಮನ್ಸ್ ಗಳನ್ನು ವಾಟ್ಸ್ ಆಪ್ ಮೂಲಕ ನೀಡುವ ಬಗ್ಗೆ ತಜ್ಞರ ಸಮಿತಿ ನಿರ್ಧರಿಸಿದೆ.
ಹೈಕೋರ್ಟ್, ಜಿಲ್ಲಾ ನ್ಯಾಯಾಲಯ, ಡಿಜಿಪಿ, ಮತ್ತಿತರ ಉನ್ನತಾಧಿಕಾರಿಗಳು ಸೇರಿ ಗೃಹ ಸಚಿವಾಲಯಕ್ಕೆ ಸಂಬಂಧಿಸಿದಂತೆ ಸಮನ್ಸ್ ಕಳುಹಿಸಲು ತೀರ್ಮಾನಿಸಲಾಗಿದೆ. ಸಾಮಾಜಿಕ ತಾಣಗಳ ಮೂಲಕ ಸಂಬಂಧ ಪಟ್ಟವರನ್ನು ಶೀಘ್ರವಾಗಿ ತಲುಪಬಹುದು. ಇದರಿಂದ ಸಮನ್ಸ್ ನೀಡಲು ಆತನ ವಿಳಾಸಕ್ಕಾಗಿ ಅಲೆಯುವ ಮತ್ತು ಅದಕ್ಕಾಗಿ ತಗುಲುವ ಸಮಯ ಹಾಗೂ ವೆಚ್ಚವನ್ನು ಉಳಿಸಬಹುದು. ಇದರಿಂದ ಕೋರ್ಟ್ ನ ಸಮಯವೂ ಉಳಿತಾಯವಾಗಲಿದೆ ಎಂದು ಸಮಿತಿ ಅಭಿಪ್ರಾಯ ಪಟ್ಟಿದೆ. ಜೊತೆಗೆ ಎಸ್ ಎಂ ಎಸ್ ಮತ್ತು ಇಮೇಲ್ ಮೂಲಕವೂ ಸಮನ್ಸ್ ನೀಡಲು ನಿರ್ಧರಿಸಲಾಗಿದ್ದು, ಇದಕ್ಕಾಗಿ ಸೆಕ್ಷನ್ 62 ಕಾಯ್ದೆಯನ್ನು ತಿದ್ದುಪಡಿ ಮಾಡಬೇಕಾಗಿದೆ. ಕಾಯ್ದೆ ತಿದ್ದುಪಡಿಗೆ ನ್ಯಾಯಾಲಯ ಸರ್ಕಾರದ ಮೊರೆ ಹೋಗಿದೆ. ದೂರು ಪಡೆಯುವಾಗಲೇ ಸಂಬಂಧಿತವರಿಂದ ಮೊಬೈಲ್ ನಂಬರ್ ಪಡೆಯಲಾಗುತ್ತದೆ.
ರಾಜ್ಯದಲ್ಲಿ ಹೈಕೋರ್ಟ್ ಸೇರಿ 12,77,325 ದೂರುಗಳು ವಿಚಾರಣೆಗೆ ಬಾಕಿ ಇವೆ. ಇದರಲ್ಲಿ 3,96,889 ಸಿವಿಲ್? ಮತ್ತು 8,80,436 ಕ್ರಿಮಿನಲ್ ಕೇಸುಗಳು ಎಂದು ತಿಳಿದು ಬಂದಿದೆ. ಇವುಗಳ ಶೀಘ್ರ ವಿಲೇವಾರಿಗೆ ಕ್ರಮಕೈಗೊಂಡಿದ್ದು ಜಿಲ್ಲಾಧಿಕಾರಿಗಳ ನೆರವು ಪಡೆಯಲು ನಿರ್ಧರಿಸಲಾಗಿದೆ.