ಮುಳ್ಳೇರಿಯ: ಕುಂಟಾರು ಶ್ರೀರಾಮನಗರ ಶ್ರೀ ಅಯ್ಯಪ್ಪ ಭಜನಾ ಮಂದಿರದ 9ನೇ ಪ್ರತಿಷ್ಠಾ ವಾರ್ಷಿಕೋತ್ಸವ ಮತ್ತು ಅಯ್ಯಪ್ಪ ದೀಪೋತ್ಸವ ಕಾರ್ಯಕ್ರಮಗಳು ಡಿ.14 ಮತ್ತು 15ರಂದು ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಅವರ ಮಾರ್ಗದರ್ಶನದಲ್ಲಿ ಬ್ರಹ್ಮಶ್ರೀ ರವೀಶ ತಂತ್ರಿಗಳವರ ನೇತೃತ್ವದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಡಿ.14ರಂದು ಸಂಜೆ 6ರಿಂದ ಶ್ರೀ ಅಯ್ಯಪ್ಪ ಭಜನಾ ಸಂಘ ಕುಂಟಾರು ಮತ್ತು ಶ್ರೀ ಕರಿಚಾಮುಂಡಿ ಭಜನಾ ಸಂಘ ಮಾಯಿಲಂಕೋಟೆ ಇವರಿಂದ ಭಜನೆ, ಡಿ.15ರಂದು ಬೆಳಿಗ್ಗೆ 8ಕ್ಕೆ ಗಣಪತಿ ಹೋಮ, 9 ರಿಂದ ಶ್ರೀ ಮೂಕಾಂಬಿಕಾ ಭಜನಾ ಸಂಘ ಉಯಿತ್ತಡ್ಕ, 10ರಿಂದ ಶ್ರೀ ಶಾರದಾ ಮಹಿಳಾ ಭಜನಾ ಸಂಘ ಕುಂಟಾರು ಇವರಿಂದ ಭಜನೆ, 11ಕ್ಕೆ ಸಭಾ ಕಾರ್ಯಕ್ರಮ, ಮಂದಿರ ಸಮಿತಿ ಅಧ್ಯಕ್ಷ ಸುಧೀಶ್.ಕೆ ಅಧ್ಯಕ್ಷತೆ ವಹಿಸುವರು. ಬ್ರಹ್ಮಶ್ರೀ ವಾಸುದೇವ ತಂತ್ರಿ ಕುಂಟಾರು ಆಶೀರ್ವಚನ ನೀಡುವರು. ಭಜರಂಗದಳ ಪ್ರಾಂತ ಸಹ ಸಂಚಾಲಕ ಮುರಳಿ ಕೃಷ್ಣ ಹಸಂತಡ್ಕ ಧಾರ್ಮಿಕ ಭಾಷಣ ಮಾಡುವರು. ಮಂದಿರದ ಯಾದವ ಗುರುಸ್ವಾಮಿ ಭಾಗವಹಿಸುವರು. ಮಧ್ಯಾಹ್ನ 12.30ಕ್ಕೆ ಮಹಾಪೂಜೆ, ಅನ್ನದಾನ, 2ಕ್ಕೆ ಶ್ರೀ ಶಾರದಾಂಬಾ ಭಜನಾ ಸಂಘ ಕೈತ್ತೋಡು, 3ಕ್ಕೆ ಶ್ರೀ ಗಣೇಶ ಮಹಿಳಾ ಭಜನಾ ಸಂಘ ಮಣಿಯೂರು ಇವರಿಂದ ಭಜನೆ, ಸಂಜೆ 4ಕ್ಕೆ ಶ್ರೀಕೃಷ್ಣ ಬಾಲಕುಣಿತ ಭಜನಾ ಸಂಘ ಕುಂಟಾರು ಇವರಿಂದ ಕುಣಿತ ಭಜನೆ, 5ಕ್ಕೆ ಮನೀಶ್ ಪಣಿಕ್ಕರ್ ಮತ್ತು ಬಳಗದವರಿಂದ ತಾಯಂಬಕ, 6.30ಕ್ಕೆ ಧರ್ಮಶಾಸ್ತಾ ಭಜನಾ ಸಂಘ ಅಡೂರು ಇವರಿಂದ ಭಜನೆ, 7ಕ್ಕೆ ಕುಂಟಾರು ಶ್ರೀ ಮಹಾವಿಷ್ಣುಮೂರ್ತಿ ಕ್ಷೇತ್ರದಿಂದ ಉಲ್ಪೆ ಮೆರವಣಿಗೆ, ರಾತ್ರಿ 8ಕ್ಕೆ ಮುಖ್ಯಪ್ರಾಣ ಭಜನಾ ಸಂಘ ಆದೂರು ಗ್ರಾಮ ಇವರಿಂದ ಭಜನಾಮೃತ, ರಾತ್ರಿ 9.30ಕ್ಕೆ ಶರಣಂ ಘೋಷ, ಮಹಾಪೂಜೆ, ಅನ್ನದಾನ ನಡೆಯಲಿದೆ.