ಬದಿಯಡ್ಕ: ಮಾನ್ಯ ಕಲ್ಲಕಟ್ಟ ಸಮೀಪವಿರುವ ಅತೀ ಪುರಾತನ,ಕಾರಣಿಕ ಪ್ರಸಿದ್ದ ಅಜ್ಜಾವರ ಮಹಿಷರ್ಮನಿ ದೇವಸ್ಥಾನದ ವರ್ಷಾವಧಿ ಉತ್ಸವವು ಮಂಗಳವಾರ ಎಡನೀರು ಮಠಾಧೀಶ ಶ್ರೀ ಕೇಶವಾನಂದ ಭಾರತೀ ಶ್ರೀಗಳ ಉಪಸ್ಥಿತಿಯಲ್ಲಿ ಉಚ್ಚಿಲ ಪದ್ಮನಾಭ ತಂತ್ರಿಗಳವರ ನೇತೃತ್ವದಲ್ಲಿ ಜರಗಿತು.
ಬೆಳಿಗ್ಗೆ ನವಕಾಭಿಷೇಕ, ಮಹಾಪೂಜೆ ಜರಗಿತು. ನಂತರ ಶ್ರೀದೇವರ ಬಲಿ ಉತ್ಸವ, ವಸಂತಕಟ್ಟೆ ಪೂಜೆ ನೆರವೇರಿತು. ದೇವಸ್ಥಾನದ ಜೀರ್ಣೋದ್ಧಾರದ ಕುರಿತು ಈ ಸಂದರ್ಭದಲ್ಲಿ ಚರ್ಚಿಸಲಾಯಿತು. ಧಾರ್ಮಿಕ ಮುಂದಾಳು, ಉದ್ಯಮಿ ವಸಂತ ಪೈ ಬದಿಯಡ್ಕ ಮಾತನಾಡಿದರು. ನೂರಾರು ಭಕ್ತಾದಿಗಳು ಪಾಲ್ಗೊಂಡು ಶ್ರೀದೇವರ ರಾಜಾಂಗಣ ಪ್ರಸಾದವನ್ನು ಸ್ವೀಕರಿಸಿದರು.