ಕಾಸರಗೋಡು: ರಾಜ್ಯ ಹೋಮಿಯೋಪತಿ ಇಲಾಖೆ ಈ ಬಾರಿ ಪ್ರಕಟಿಸಿರುವ ನೂತನ ವರ್ಷದ ಕ್ಯಾಲೆಂಡರ್ ಆಕರ್ಷಣೆ ಹೊಂದಿದೆ.
ಬೇರೆ ಬೇರೆ ಮಜಲುಗಳಲ್ಲಿ ಈ ದಿನಚರಿ ಪಟ್ಟಿ ಮಾಹಿತಿ ಒದಗಿಸುವ ಮೂಲಕ ಪ್ರಯೋಜನಕಾರಿಯಾಗಿದೆ. ದಿನಗಳ ಪರಿಚಯದೊಂದಿಗೆ, ಹೋಮಿಯೋಪತಿ ಇಲಾಖೆಯ ಸೇವೆಗಳು, ಜನಜಾಗೃತಿ ಸಂದೇಶಗಳು, ಮದ್ಯಪಾನ-ಮಾದಕ ಪದಾರ್ಥಗಳ ವಿರುದ್ಧ ಎಚ್ಚರಿಕೆ, ಚಿಕಿತ್ಸೆ ಮತ್ತು ಕೌನ್ಸಿಲಿಂಗ್, ಬಂಜೆತನ ನಿವಾರಣೆ ಯೋಜನೆಯಾಗಿರುವ ಜನನಿ, ಮಕ್ಕಳು ಕಲಿಕೆಯಲ್ಲಿ ಹಿಂದುಳಿಯುವ ವೈಕಲ್ಯ ನಿವಾರಣೆ ಯೋಜನೆ ಸದ್ಗಮಯ, ಮಹಿಳೆಯರ ಮಾನಸಿಕ ಸಂಘರ್ಷ ನಿವಾರಣೆ ಯೋಜನೆ ಸೀತಾಲಯಂ, ಜೀವನಶೈಲಿ ರೋಗ ನಿವಾರಣೆ ಯೋಜನೆ ಆಯುಷ್ಮಾನ್ ಭವ, ಹಾಸುಗೆ ಹಿಡಿದಿರುವ ರೋಗಿಗಳ ಸಮಗ್ರ ಶುಶ್ರೂಷೆ ಯೋಜನೆ ಚೇತನಾ, ಹೊರರೋಗಿ ವಿಭಾಗದ ಸೇವೆಗಳು, ಹಿರಿಯ ಪ್ರಜೆಗಳ ಪರಿಪೆÇೀಷಣೆ ಕೇಂದ್ರ, ಅಂಟುರೋಗ ನಿಯಂತ್ರಣ ಯೋಜನೆ ಭದ್ರ, ಕ್ರಿಯಾ ಸೇನೆ ರೀಚ್ ಸಹಿತ ಹೋಮಿಯೋಪತಿ ಸೇವೆಗಳಿಗೆ ಸಂಬಂ„ಸಿದ ಎಲ್ಲ ಮಾಹಿತಿಗಳನ್ನೂ ಈ ಕ್ಯಾಲೆಂಡರ್‍ನಲ್ಲಿ ನೀಡಲಾಗಿದೆ.
ಈ ಕ್ಯಾಲೆಂಡರ್ ಜಿಲ್ಲೆಯ ಎಲ್ಲ ಸರಕಾರಿ ಕಚೇರಿಗಳಿಗೂ ವಿತರಣೆ ನಡೆಸಲಾಗುವುದು ಎಂದು ಸಂಬಂಧಪಟ್ಟವರು ತಿಳಿಸಿದರು. ಇದರಿಂದ ಎಲ್ಲ ಸಾರ್ವಜನಿಕ ಕೇಂದ್ರಗಳಲ್ಲೂ ಈ ಕ್ಯಾಲೆಂಡರ್ ವೀಕ್ಷಣೆಗೆ ಅವಕಾಶಗಳಿವೆ. ಜಿಲ್ಲಾ ಪ್ರಭಾರ ವೈದ್ಯಾ„ಕಾರಿ ರಾಮ ಸುಬ್ರಹ್ಮಣ್ಯನ್ ಅವರ ನೇತೃತ್ವದಲ್ಲಿ ಈ ಕ್ಯಾಲೆಂಡರ್ ತಯಾರಾಗಿದೆ. ಜಿಲ್ಲೆಯ ವಿವಿಧ ಸರಕಾರಿ ಹೋಮಿಯೋ ಡಿಸ್ಪೆನ್ಸರಿಗಳ ದೂರವಾಣಿ ಸಂಖ್ಯೆಯೂ ಈ ಕ್ಯಾಲೆಂಡರ್ ನಲ್ಲಿದೆ. `ಪ್ರಾಥಮಿಕ ಶುಶ್ರೂಷೆ ಹೋಮಿಯೋ ಚಿಕಿತ್ಸೆ ಮೂಲಕ' ಎಂಬ ಸಂದೇಶ ಎಲ್ಲ ಪುಟಗಳಲ್ಲೂ ಮುದ್ರಣಗೊಂಡಿದೆ.
ಈ ಕ್ಯಾಲೆಂಡರ್ ಬಿಡುಗಡೆ ಜಿಲ್ಲಾ ಅಭಿವೃದ್ಧಿ ಸಮಿತಿ ಸಭೆಯಲ್ಲಿ ಜರುಗಿತು. ಶಾಸಕ ಕೆ.ಕುಂಞÂರಾಮನ್ ಅವರು ಶಾಸಕ ಎಂ.ಸಿ.ಕಮರುದ್ದೀನ್ ಅವರಿಗೆ ಹಸ್ತಾಂತರಿಸುವ ಮೂಲಕ ಕ್ಯಾಲೆಂಡರ್ ಬಿಡುಗಡೆಗೊಳಿಸಿದರು.