ಉಪ್ಪಳ: ಕೇರಳ ರಾಜ್ಯ ಪ್ರಶಸ್ತಿ ಪುರಸ್ಕøತ ನಿವೃತ್ತ ಮುಖ್ಯೋಪಾಧ್ಯಾಯ ಸಿ.ರಾಘವ ಬಲ್ಲಾಳ್ ಅವರಿಗೆ ಜ.12 ರಂದು ಪೈವಳಿಕೆ ನಗರದ ಸರ್ಕಾರಿ ಹೈಯರ್ ಸೆಕೆಂಡರಿ ಶಾಲಾ ವಠಾರದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಜರಗಲಿದೆ.
ಬೆಳಗ್ಗೆ 9.30 ಕ್ಕೆ ಸಾಂಸ್ಕøತಿಕ ಕಾರ್ಯಕ್ರಮ, 10 ಕ್ಕೆ ಶಾಸಕ ಎಂ.ಸಿ.ಖಮರುದ್ದೀನ್ ಕಾರ್ಯಕ್ರಮ ಉದ್ಘಾಟಿಸುವರು. ಪೈವಳಿಕೆ ಗ್ರಾಮ ಪಂಚಾಯತಿ ಅಧ್ಯಕ್ಷೆ ಭಾರತಿ ಜೆ.ಶೆಟ್ಟಿ ಅಧ್ಯಕ್ಷತೆ ವಹಿಸುವರು. ಹಿರಿಯ ಸಾಹಿತಿ ಪೆÇ್ರ|ಪಿ.ಎನ್.ಮೂಡಿತ್ತಾಯ ಅಭಿನಂದನ ಗ್ರಂಥದ ಕುರಿತು ಮಾತನಾಡುವರು. ಡಾ.ಎಂ.ಎಸ್.ಮೂಡಿತ್ತಾಯ ಅಭಿನಂದನ ಗ್ರಂಥವನ್ನು ಬಿಡುಗಡೆಗೊಳಿಸುವರು. ಧರ್ಮದರ್ಶಿ ಹರಿಕೃಷ್ಣ ಪುನರೂರು ಮುಖ್ಯ ಅತಿಥಿಯಾಗಿ ಭಾಗವಹಿಸುವರು. ಅತಿಥಿಗಳಾಗಿ ಪ್ರಸಾದ್ ರೈ ಕಯ್ಯಾರು, ಸುನೀತ ವಲ್ಟಿ ಡಿ'ಸೋಜ, ಕೆ.ಜಯಲಕ್ಷ್ಮಿ ಭಟ್, ರಾಬಿಯಾ, ನಂದಿಕೇಶನ್, ದಿನೇಶ್ ಎ, ಬಿ.ಇಬ್ರಾಹಿಂ, ಡಾ.ಜಯಪ್ರಕಾಶ್ ನಾರಾಯಣ ತೊಟ್ಟೆತ್ತೋಡಿ, ಎಸ್.ನಾರಾಯಣ ಭಟ್ ಭಾಗವಹಿಸುವರು. ಕೋಚಣ್ಣ ಶೆಟ್ಟಿ ಕೆ, ಅಬ್ದುಲ್ ರೆಹಮಾನ್, ರಮೇಶ್ ಪಿ. ಉಪಸ್ಥಿತರಿರುವರು. ಮಧ್ಯಾಹ್ನ 12.30 ರಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಲಿದೆ.
ಅಪರಾಹ್ನ 3 ರಿಂದ ನಡೆಯುವ ಸಮಾರೋಪ ಸಮಾರಂಭವನ್ನು ಖ್ಯಾತ ಸಾಹಿತಿ ಡಾ.ವಸಂತ ಕುಮಾರ್ ತಾಳ್ತಜೆ ಉದ್ಘಾಟಿಸುವರು. ಡಾ.ರಮಾನಂದ ಬನಾರಿ ಅಭಿನಂದನ ಭಾಷಣ ಮಾಡುವರು. ಎಸ್.ವಿ.ಭಟ್ ಅಧ್ಯಕ್ಷತೆ ವಹಿಸುವರು. ಸಿ.ರಾಘವ ಬಲ್ಲಾಳ್ ಅವರಿಗೆ ಪೌರ ಸಮ್ಮಾನ ಮಾಡಲಾಗುವುದು. ಡಾ.ಎಂ.ರಾಮ ಸಮಾರೋಪ ಭಾಷಣ ಮಾಡುವರು. ಅತಿಥಿಗಳಾಗಿ ಸುಜಾತಾ ಬಿ.ರೈ, ಶಂಕರ ಭಟ್ ಮುಳಿಯ, ಎನ್.ಕೆ.ಮೋಹನ್‍ದಾಸ್, ಮಹಾಲಿಂಗೇಶ್ವರ್ ರಾಜ್ ಬಿ, ಕೆ.ಶ್ರೀನಿವಾಸ, ರಮೇಶ್ ಕೆ, ಕೆ.ಆರ್.ರವೀಂದ್ರನಾಥ್, ವಿಶ್ವನಾಥ ಕೆ. ಭಾಗವಹಿಸುವರು. ಗೋಪಾಲಕೃಷ್ಣ ಭಟ್ ಕುರಿಯ, ಟಿ.ಡಿ.ಸದಾಶಿವ ರಾವ್, ಸತ್ಯನಾರಾಯಣ ಭಟ್ ಕೆ. ಉಪಸ್ಥಿತರಿರುವರು. ಕೊನೆಯಲ್ಲಿ ಯಕ್ಷ ವೈಭವ ನಡೆಯಲಿದೆ.