HEALTH TIPS

ಪೆರಡಾಲ ಹೊಳೆಯಲ್ಲಿ ಶುಚೀಕರಣ ಯಜ್ಞ-ಹಸಿರು ಕೇರಳ ಯೋಜನೆಯ ಕಾರ್ಯಕ್ರಮಕ್ಕೆ ಕೇಂದ್ರೀಯ ವಿದ್ಯಾಲಯದ ವಿದ್ಯಾರ್ಥಿಗಳ ಪಾಲ್ಗೊಳ್ಳುವಿಕೆ

 
        ಬದಿಯಡ್ಕ: ಹಸಿರು ಕೇರಳ ಯೋಜನೆಯ ಅಂಗವಾಗಿ ಬದಿಯಡ್ಕ ಗ್ರಾಮಪಂಚಾಯಿತಿ ವತಿಯಿಂದ ಪೆರಡಾಲ ಹೊಳೆಯಲ್ಲಿ ಶುಚೀಕರಣ ಯಜ್ಞವನ್ನು ಹಮ್ಮಿಕೊಳ್ಳಲಾಯಿತು. ಮಂಗಳವಾರ ಗ್ರಾಮಪಂಚಾಯಿತಿ ಅಧ್ಯಕ್ಷ ಕೆ.ಎನ್.ಕೃಷ್ಣ ಭಟ್ ಶುಚೀಕರಣ ಯಜ್ಞಕ್ಕೆ ಚಾಲನೆಯನ್ನು ನೀಡಿ ಮಾತನಾಡಿ ಪೆರಡಾಲ ಹೊಳೆಯು ಊರಿನ ಪ್ರಧಾನ ಜೀವನದಿಯಾಗಿದೆ. ಅತಿಯಾದ ಪ್ಲಾಸ್ಟಿಕ್ ಮುಂತಾದ ತ್ಯಾಜ್ಯಗಳು ಜಿಲ್ಲೆಯ ಅಂತರ್ಜಲ ಮಟ್ಟವನ್ನೇ ಕುಸಿಯುವಂತೆ ಮಾಡಿದೆ. ಮಾಲಿನ್ಯಗಳನ್ನು ಜಲಸಂಪನ್ಮೂಲಗಳಿಗೆ ಎಸೆಯುವುದನ್ನು ನಿಲ್ಲಿಸಬೇಕು. ಮುಂದಿನ ತಲೆಮಾರಿಗೆ ನೀರು ಲಭಿಸಬೇಕಾದರೆ ನಾವು ಎಚ್ಚೆತ್ತುಕೊಳ್ಳಲೇ ಬೇಕು ಎಂದು ಸಂದೇಶವು ಜನರಿಗೆ ತಲುಪಬೇಕಾಗಿದೆ ಎಂದ ಅವರು ಜಲಸಂರಕ್ಷಣೆಯ ನಿಟ್ಟಿನಲ್ಲಿ ಇಲ್ಲಿನ ಮಡಿಪ್ಪು ಕಟ್ಟವು ಪ್ರಧಾನವಾಗಿದೆ. ಇಲ್ಲಿನ ಕಿರುಅಣೆಕಟ್ಟಿನಿಂದ ಊರಿನ ಸುಮಾರು 8 ಕಿಲೋಮೀಟರ್ ತನಕದ ಪ್ರದೇಶಗಳ ಅಂತರ್ಜಲಮಟ್ಟ ವೃದ್ಧಿಯಾಗುತ್ತದೆ. ಈ ನಿಟ್ಟಿನಲ್ಲಿ ಇಲ್ಲಿನ ಕಿರು ಅಣೆಕಟ್ಟಿನ ದುರಸ್ತಿಗೆ ಮುಂದಿನ ಯೋಜನೆಯಲ್ಲಿ 2ರಿಂದ 3 ಲಕ್ಷದಷ್ಟು ಹಣವನ್ನು ಮೀಸಲಿಡಲು ಅಗತ್ಯಕ್ರಮ ಕೈಗೊಳ್ಳಲಾಗುವುದು ಎಂದರು.
        ಗ್ರಾಮಪಂಚಾಯಿತಿ ಉಪಾಧ್ಯಕ್ಷೆ ಸೈಬುನ್ನೀಸ ಅಧ್ಯಕ್ಷತೆಯನ್ನು ವಹಿಸಿದ್ದರು. ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಶ್ಯಾಮಪ್ರಸಾದ ಮಾನ್ಯ, ಶಬಾನ, ಸದಸ್ಯರುಗಳಾದ ಶಂಕರ ಡಿ., ಬಾಲಕೃಷ್ಣ ಶೆಟ್ಟಿ ಕಡಾರು, ವಿಶ್ವನಾಥ ಪ್ರಭು ಕರಿಂಬಿಲ, ಶಾಂತಾ ಬಾರಡ್ಕ, ಜಯಂತಿ, ಪ್ರಸನ್ನ, ವ್ಯಾಪಾರಿ ವ್ಯವಸಾಯಿ ಏಕೋಪನ ಸಮಿತಿಯ ಕುಂಜಾರು ಮುಹಮ್ಮದ್ ಹಾಜಿ, ನರೇಂದ್ರ ಬದಿಯಡ್ಕ, ಮಾಜಿ ಗ್ರಾಪಂ. ಅಧ್ಯಕ್ಷೆ ಸುಧಾ ಜಯರಾಂ, ಎನ್.ಆರ್.ಜಿ. ಸದಸ್ಯರು, ಹಸಿರು ಕರ್ಮಸೇನೆಯ ಸದಸ್ಯರು ಪಾಲ್ಗೊಂಡಿದ್ದರು. ಪೆರಿಯ ಕೇಂದ್ರೀಯ ವಿದ್ಯಾಲಯದ 50ಕ್ಕೂ ಹೆಚ್ಚು ಮಂದಿ ವಿದ್ಯಾರ್ಥಿಗಳು ಶುಚೀಕರಣಕ್ಕೆ ಸಹಕರಿಸಿದರು. ಗ್ರಾಮಪಂಚಾಯಿತಿ ಕಾರ್ಯದರ್ಶಿ ಪ್ರದೀಪ್ ಸ್ವಾಗತಿಸಿದರು.
          ಅಭಿಮತ-1):
     ಪೆರಡಾಲ ಹೊಳೆಯ ಮಡಿಪ್ಪು ಪ್ರದೇಶದಲ್ಲಿ ಪರಂಪರಾಗತವಾಗಿ ಕಟ್ಟ ಕಟ್ಟಲಾಗುತ್ತಿತ್ತು. ಒಂದೆರಡು ವರ್ಷ ಗ್ರಾಮಪಂಚಾಯಿತಿಯು ಧನಸಹಾಯವನ್ನು ನೀಡುತ್ತಿತ್ತು, ಆದರೆ ಇತ್ತೀಚೆಗೆ ಕೆಲವು ವರ್ಷಗಳ ಕಳೆದ ಕೆಲವು ವರ್ಷಗಳಿಂದ ಸರಕಾರದ ಅನುದಾನವು ಲಭಿಸದೆ ಕಟ್ಟ ಕಟ್ಟುವುದೇ ನಿಂತುಹೋಗಿದೆ. ಇಲ್ಲಿನ ಕಿರುಅಣೆಕಟ್ಟು ಊರಿಗೇ ಪ್ರಯೋಜನಪ್ರದವಾಗಿದ್ದು, ಕೃಷಿಗೆ ತುಂಬಾ ಅನುಕೂಲವಾಗಿತ್ತು. ಅಣೆಕಟ್ಟಿನ ಅಡಿಭಾಗ ಸಂಪೂರ್ಣ ಕಿತ್ತುಹೋಗಿ ಕಟ್ಟಕಟ್ಟಿದರೂ ನೀರು ನಿಲ್ಲದ ಪರಿಸ್ಥಿತಿ ನಿರ್ಮಾಣವಾಗಿದೆ. ಇದನ್ನು ಸರಿಪಡಿಸಿ ಕಟ್ಟಗಳು, ಅಣೆಕಟ್ಟುಗಳ ನಿರ್ಮಾಣಕ್ಕೆ ಆದ್ಯತೆಯನ್ನು ನೀಡಿದರೆ ಊರಿನ ಜಲಕ್ಷಾಮಕ್ಕೆ ಪರಿಹಾರವನ್ನು ಕಾಣಬಹುದಾಗಿದೆ. ನೀರಿನ ಕೊರತೆಯು ಈ ಬಾರಿ ಅಡಿಕೆ ಕೃಷಿಗೆ ಭಾರೀ ಹೊಡೆತವನ್ನೇ ನೀಡಿದೆ.
                  - ಗಣಪತಿ ಭಟ್ ಮಡಿಪ್ಪು, ಸ್ಥಳೀಯ ಹಿರಿಯ ಕೃಷಿಕರು.
     :2)
         ಅಂತರ್ಜಲ ಮಟ್ಟದ ವೃದ್ಧಿಗೆ ಹಾಗೂ ಕೃಷಿಭೂಮಿಯ ಅಭಿವೃದ್ಧಿಗೆ ಕಟ್ಟಗಳು ಪೂರಕವಾಗಿವೆ. ಇಲ್ಲಿನ ಕಿರುಅಣೆಕಟ್ಟು ಇಡೀ ಊರಿಗೆ ಪ್ರಯೋಜಕಾರಿಯಾಗಿದ್ದು, ಇದರ ದುರಸ್ತಿ ಕಾರ್ಯಗಳಿಗೆ ಮುಂದಿನ ಯೋಜನೆಯಲ್ಲಿ 2ರಿಂದ 3 ಲಕ್ಷದಷ್ಟು ಮೊತ್ತವನ್ನು ಮಂಜೂರು ಮಾಡಲು ಅಗತ್ಯಕ್ರಮಗಳನ್ನು ಕೈಗೊಳ್ಳಲಾಗುವುದು.
       - ಕೆ.ಎನ್.ಕೃಷ್ಣ ಭಟ್, ಬದಿಯಡ್ಕ ಗ್ರಾಪಂ ಅಧ್ಯಕ್ಷರು.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries