ಕಾಸರಗೋಡು: ಜಲ ಪ್ರಾಧಿಕಾರದ ಕಣ್ಣು ತಪ್ಪಿಸಿ ನೀರಿನ ದುರುಪಯೋಗ ನಡೆಸುವುದರ ಜತೆಗೆ ಅನಧಿಕೃತವಾಗಿ ನೀರಿನ ಸಂಪರ್ಕ ಪಡೆಯುವುದನ್ನುಪತ್ತೆಹಚ್ಚಲು ವಿಶೇಷ ತಂಡ ಕಾರ್ಯಾಚರಿಸಲಿದೆ. ಇಂತಹ ಅನಧಿಕೃತ ಸಂಪರ್ಕ ಪತ್ತೆ ಮತ್ತು ಬಾಕಿಯಿರುವ ಶುಲ್ಕ ವಸೂಲಿ ಉದ್ದೇಶಗಳಿಂದ ಕಾಸರಗೋಡು ಜಲ ವಿಭಾಗ ವ್ಯಾಪ್ತಿಯಲ್ಲಿ 3 ವಿಶೇಷ ತಂಡಗಳು ಚಟುವಟಿಕೆ ಆರಂಭಿಸಿವೆ. ಇದರ ಅಂಗವಾಗಿ ವಿವಿಧ ಪ್ರಕರಣಗಳಿಗೆ ಸಂಬಂಧಿಸಿ ವಿಚ್ಛೇದಿಸಿರುವ 128 ಸಂಪರ್ಕ ದಲ್ಲಿ ಬಾಕಿ ಶುಲಕ ಸಂಗ್ರಹಕ್ಕೆ ಕಂದಾಯ ರಿಕವರಿ ಕ್ರಮ ಆರಂಭಿಸಲಾಗಿದೆ. ಜತೆಗೆ 5 ಅಕ್ರಮ ಸಂರ್ಕ ಪತ್ತೆಮಾಡಲಾಗಿದ್ದು, 18,500 ರೂ. ದಂಡ ಹೇರಲಾಗಿದೆ.ದಳಗಳ ಚಟುವಟಿಕೆ ಮುಂದಿನ ದಿನಗಳಲ್ಲಿ ಜಿಲ್ಲೆಯಾದ್ಯಂತ ನಡೆಯಲಿದೆ.
ಬಾಕಿ ಶುಲ್ಕ ಪಾವತಿಸಬೇಕು:
ಕೇರಳ ಜಲ ಪ್ರಧಿಕಾರ ಕಾಸರಗೋಡು ಪಿ.ಹೆಚ್.ಡಿ ಡಿವಿಝನ್ ವ್ಯಾಪ್ತಿಯಲಿ ಜಿಲ್ಲೆಯಲ್ಲಿ ಶುದ್ಧ ನೀರು ಯೋಜನೆಯಿಂದ ಕುಡಿಯುವ ನೀರಿನ ಸಂಪರ್ಕ ಪಡೆದಿರುವ ಗ್ರಾಹಕರಲ್ಲಿ ಶುಲ್ಕ ಪಾವತಿಗೆ ಬಾಕಿಯಿರುವವರು ಡಿ.15ರ ಮುಂಚಿತವಾಗಿ ಮೀಟರ್ ಬದಲಾಯಿಸಿ ಸ್ಥಾಪಿಸಿ ಸ್ಥಾಪಿಸುವುದರ ಜತೆಗೆ ಬಾಕಿ ಶುಲ್ಕ ಪಾವತಿಸಬೇಕು.. ಈ ಆದೇಶ ಉಲ್ಲಂಘಿಸಿದವರ ವಿರುದ್ಧ, ಯಾವುದೇ ಸೂಚನೆಗಳನ್ನು ನೀಡದೇ ರೆವೆನ್ಯೂ ರಿಕವರಿ ಕ್ರಮ ಕೈಗೊಳ್ಳಲಾಗುವುದು ಎಂದು ಸಂಬಂಧಪಟ್ಟ ಅಧಿಕಾರಿಗಳು ಎಚ್ಚರಿಕೆ ನೀಡಿದಾರೆ.