ಕಾಸರಗೋಡು: ಕೂಡ್ಲಿನ ಸಮೀಪದ ಶೇಷವನ ಶ್ರೀಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದಲ್ಲಿ ಚಂಪಾ ಷಷ್ಠಿಉತ್ಸವವು ಶ್ರೀ ಕ್ಷೇತ್ರದ ತಂತ್ರಿವರ್ಯರಾದಬ್ರಹ್ಮಶ್ರೀ ಅರವತ್ ದಾಮೋದರ ತಂತ್ರಿವರ್ಯರ ಮಾರ್ಗದರ್ಶನ ಹಾಗೂ ಬ್ರಹ್ಮಶ್ರೀ ಅರವತ್ ಪದನಾಭತಂತ್ರಿವರ್ಯರ ನೇತೃತ್ವದಲ್ಲಿ ಜರುಗಿತು.
ಬ್ರಹ್ಮವಾಹಕರಾಗಿಕೃಷ್ಣಪ್ರಸಾದ್ ಮುಟ್ಟತ್ತೋಡಿ ಪರಿಚಾರಕರಾಗಿ ಗೋಪಾಲಕೃಷ್ಣ ಅಡಿಗ ಮುಟ್ಟತ್ತೋಡಿ,ಸೂರ್ಯನಾರಾಯಣ ಕಾರಂತ ಸಹಕರಿಸಿದರು. ಪಂಚಮಿ ಉತ್ಸವದಂಗವಾಗಿ ಗಣಪತಿಹವನ, ಶ್ರೀನಾಗ ಸನ್ನಿದಿಯಲ್ಲಿ ಸಾಮೂಹಿಕ ನಾಗತಂಬಿಲ, ಸಾಂಸ್ಕøತಿಕ ಕಾರ್ಯಕ್ರಮದ ಅಂಗವಾಗಿ ಕುತ್ಯಾಳ ಶ್ರೀ ಗೋಪಾಲಕೃಷ್ಣಯಕ್ಷಗಾನ ತರಬೇತಿ ಕೇಂದ್ರದವರಿಂದ ರುಕ್ಮಿಣಿಸ್ವಯಂವರ ಎಂಬ ಕಥಾಭಾಗದತಾಳಮದ್ದಳೆ, ಶ್ರೀ ಸಉಬ್ರಹ್ಮಣ್ಯ ಸ್ವಾಮಿ ಮಹಿಳಾ ಹಾಗು ಯುವಕ ಸಂಘದ ನೇತೃತ್ವದಲ್ಲಿ ಊರಮಕ್ಕಳಿಂದ ನೃತ್ಯಸಂಗಮ ನಡೆಯಿತು. ಚಂಪಾಷಷ್ಠಿ ಅಂಗವಾಗಿ ಗಣಪತಿಹವನ ಬಿಂಬ ಶುದ್ಧಿ,ಕಲಶ ಪೂಜೆ, ಕಲಶಾಭಿಷೇಕ ಮಹಾಪೂಜೆ,ಶ್ರೀರಕ್ತೇಶ್ವರಿ ಗುಳಿಗ ಸನ್ನಿಧಿüಯಲ್ಲಿ ತಂಬಿಲ, ಕಲಾರತ್ನ ಶಂನಾಡಿಗ ಕುಂಬಳೆ ಇವರಶಿಷ್ಯೆಯರಾದ ಅರುಣ, ಮೃದುಲ, ಪೂಜಾ, ನೀಶಾ ಇವರಿಂದ ಹರಿಕಥಾ ಸತ್ಸಂಗಜರಗಿತು. ತಾಯಂಬಕ ಭsÀಜನೆ, ರಾತ್ರಿ ಪೂಜೆಶ್ರೀಭೂತಬಲಿ, ವಿಶೇಷ ಪಾಂಡಿಮೇಳ ಚೆಂಡೆಸೇವೆ, ಸಿಡಿಮದ್ದು ಸೇವೆ, ದರ್ಶನಬಲಿ, ಬಟ್ಟಲುಕಾಣಿಕೆ ರಾಜಾಂಗಣಪ್ರಸಾದ ನಡೆಯಿತು. ಅನುವಂಶಿಕಮೊಕ್ತೇಸರಸದಾಶಿವ,ಆಡಳಿತ ಮೊಕ್ತೇಸರ ವೇಣುಗೋಪಾಲಕೂಡ್ಲು, ಕಾರ್ಯದರ್ಶಿ ಸುರೇಶ್ ಮಣಿಯಾಣಿ,ಕೋಶಾಧಿಕಾರಿ ಪ್ರಕಾಶ್ ಶೆಟ್ಟಿ, ಹಾಗು ಟ್ರಸ್ಟಿಗಳು,ಉತ್ಸವ ಸಮಿತಿಯ ಗೌರವ ಅಧ್ಯಕ್ಷ, Àಮಧೂರು ಕ್ಷೇತ್ರದ ಪ್ರಧಾನಅರ್ಚಕ ಶ್ರೀಕೃಷ್ಣಪಾದ್ಯಾಯರು, ಕಾಯಾಧ್ಯಕ್ಷರಮೇಶ್ ರೈ, ಕಾರ್ಯದರ್ಶಿ ವೆಂಕಟೇಶ ಶೆಟ್ಟಿ,ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಯುವಕ ಸಂಘ,ಶೇಷವನ ಶ್ರೀ ಸುಬ್ರಹ್ಮಣ್ಯ ಸ್ವಾಮಿ ಮಹಿಳಾ ಸಂಘದಪದಾಧಿಕಾರಿಗಳು ಮತ್ತು ಸದಸ್ಯರು ಸಹಕರಿಸಿದರು.