ಕಾಸರಗೋಡು: ರಾಜ್ಯ ಮಟ್ಟದ ಶಾಲಾ ಕಲೋತ್ಸವದ ಮೂರನೇ ದಿನವಾದ ಶುಕ್ರವಾರ ಜನಪ್ರವಾಹ ಅಧಿಕಗೊಂಡ ಹಿನ್ನೆಲೆಯಲ್ಲಿ ಸಂಚಾರ ನಿಯಂತ್ರಣಕ್ಕೆ ಜಿಲ್ಲಾಧಿಕಾರಿಯೇ ಮುಂದಾಗಿದ್ದರು.
ಕಲೋತ್ಸವದ ಸ್ಪರ್ಧಾ ವೇದಿಕೆಯಲ್ಲಿ ದ್ವಿತೀಯವಾಗಿರುವ ದುರ್ಗಾ ಹೈಯರ್ ಸೆಕೆಂಡರಿ ಶಾಲೆಯ ಮಹಾಕವಿ ಕುಟ್ಟಮತ್ ವೇದಿಕೆಯಲ್ಲಿ ನಡೆದ ನೃತ್ಯ ಸ್ಪರ್ಧೆಗಳನ್ನು ವೀಕ್ಷಿಸಲು ಪ್ರೇಕ್ಷಕರ ಸಂಖ್ಯೆ ಅಧಿಕವಾಗಿ ಹರಿದುಬಂದಿತ್ತು. ಶುಕ್ರವಾರ ಬೆಳಗ್ಗಿನಿಂದಲೇ ಜನನಿಭಿಡತೆ ಕಂಡಬಂದಿತ್ತು. ವಾಹನಗಳ ದಟ್ಟಣೆಯೂ ಅಧಿಕವಾಗಿತ್ತು. ಇದರ ಪರಿಣಾಮ ಹೊತ್ತು ಏರುತ್ತಿದ್ದಂತೆ ಸಂಚಾರ ಮೊಟಕು ತಲೆದೋರತೊಡಗಿತ್ತು. ಪೆÇಲೀಸರು ಮತ್ತು ಸ್ವಯಂಸೇವಕರು ಸಂಚಾರ ಮೊಟಕು ತೆರವಿಗೆ ಹರಸಾಹಸ ನಡೆಸಿ ಹೈರಾಣಾದರು. ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಡಾ.ಡಿ.ಸಜಿತ್ ಬಾಬು ವಾಹನ ನಿಯಂತ್ರಣಕ್ಕೆ ರಂಗಕ್ಕಿಳಿದಿದ್ದರು. ಕುಟ್ಟಮತ್ ಸ್ಮಾರಕ ಬಳಿಯ ಜಂಕ್ಷನ್‍ನಿಂದ ವಾಹನಗಳನ್ನು ಪುದಿಯಕೋಟ, ಮೇಲಾಂಗೋಡು ರಸ್ತೆಗಳಿಗೆ, ವೇದಿಕೆಯಿಂದ ಬರುವ ವಾಹನಗಳನ್ನು ನಗರದ ರಸ್ತೆಗಳಲ್ಲಿ ಸಂಚರಿಸುವಂತೆ ಮಾಡಲಾಯಿತು. ಜಿಲ್ಲಾ„ಕಾರಿ ಅವರ ಸಮಯಪ್ರಜ್ಞೆ ಮತ್ತು ಕ್ರಮದಿಂದ ಸಂಚಾರ ಮೊಟಕು ನಿಯಂತ್ರಣಕ್ಕೆ ಬಂದಿತ್ತು.