ಮಂಜೇಶ್ವರ: ಮೀಯಪದವು ಶ್ರೀವಿದ್ಯಾವರ್ಧಕ ಹೈಯರ್ ಸೆಕೆಂಡರಿ ಶಾಲೆಯಲ್ಲಿ ವಿಶ್ವ ವಿಶೇಷ ಚೇತನ ದಿನಾಚರಣೆಯ ಅಂಗವಾಗಿ ಶಾಲಾ ಎಸೆಂಬ್ಲಿಯಲ್ಲಿ ವಿಶೇಷ ಚೇತನ ಮಕ್ಕಳನ್ನು ಗೌರವಿಸಲಾಯಿತು.
ಮೀಂಜ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಪ್ರಭಾಕರ್ ರೈ ಅವರು ವಿಶೇಷ ಚೇತನ ವಿದ್ಯಾರ್ಥಿಗಳನ್ನು ಎಲ್ಲರಂತೆಯೇ ಗೌರವದಿಂದ ಕಾಣಬೇಕು ಎಂದು ಈ ಸಂದರ್ಭ ಉಪಸ್ಥಿತರಿದ್ದು ಕರೆನೀಡಿದರು. ಬಳಿಕ ಏಡ್ಸ್ ರೋಗದ ಕುರಿತು ಮಾಹಿತಿ ನೀಡಿದರು. ಹಿರಿಯ ಅಧ್ಯಾಪಕ ಶಿವಶಂಕರ ಭಟ್ ಉಪಸ್ಥಿತರಿದ್ದರು.