HEALTH TIPS

ಕೇರಳ ರಾಜ್ಯ ಕಲೋತ್ಸವದಲ್ಲಿ ಕನ್ನಡ ನಾಟಕ ಸ್ಪರ್ಧೆ ಆಯೋಜಿಸಲು ಮನವಿ

 
     ಪೆರ್ಲ: ರಾಜ್ಯ ಕಲೋತ್ಸವದಲ್ಲಿ ಕನ್ನಡ ನಾಟಕವನ್ನು ಪರಿಗಣಿಸಿದರೆ ಭಾಷೆಯ ಸಾಂಸ್ಕøತಿಕ ವಿನಿಮಯ ಹಾಗೂ ಕನ್ನಡ ರಂಗಭೂಮಿಯ ವೈವಿಧ್ಯತೆಯನ್ನು ರಾಜ್ಯದ ಪ್ರೇಕ್ಷಕರಿಗೆ ಲಭಿಸಲು ಸಾಧ್ಯವಾಗುವುದಲ್ಲದೇ ಸಾಂಸ್ಕøತಿಕ ಭಾವೈಕ್ಯತೆಗೆ ಸಾಕ್ಷಿಯಾಗುತ್ತದೆ. ಕಾಸರಗೋಡಿನ ಕನ್ನಡ ಶಾಲೆಗಳ ಅದೆಷ್ಟೊ ರಂಗಭೂಮಿ ಪ್ರತಿಭೆಗಳ ತಂಡ ಉಪಜಿಲ್ಲಾ ಮಟ್ಟದಲ್ಲಿ ಪ್ರಥಮ ಪಡೆದು ಜಿಲ್ಲಾ ಮಟ್ಟದಲ್ಲಿ ಮಲಯಾಳಂ ಭಾಷಾ ನಾಟಕದ ಜೊತೆ ಏಕಾಂಗಿ ಸ್ಪಧಾ9 ತಂಡವಾಗಿ ಭಾಗವಹಿಸುವುದರಿಂದ ಕನ್ನಡ ತಿಳಿಯದ ತೀರ್ಪುಗಾರರು ಕನ್ನಡ ನಾಟಕವನ್ನು ಕಡೆಗಣಿಸುತ್ತಾರೆ. ಇದರಿಂದ ನಾಳೆಯ ರಂಗಭೂಮಿಯನ್ನು ಪೆÇೀಷಿಸುವ ಮಕ್ಕಳ ಪ್ರತಿಭೆಯನ್ನು ಎಳೆವೆಯಲ್ಲೇ ಚಿವುಟಿದಂತೆ ಆಗುತ್ತದೆ.  ಕಣ್ಣೂರು ವಿಶ್ವವಿದ್ಯಾಲಯ ಕಲೋತ್ಸವದಲ್ಲಿ ಪ್ರತ್ಯೇಕ ಕನ್ನಡ ನಾಟಕ ವಿಭಾಗ ಇದೆ. ಆದರೆ ಹೈಯರ್ ಸೆಕಂಡರಿ ಮತ್ತು ಹೈಸ್ಕೂಲ್ ವಿಭಾಗಕ್ಕೆ ಶಾಲಾ ಕಲೋತ್ಸವದಲ್ಲಿ ಕನ್ನಡ ವಿಭಾಗ ನಾಟಕ ಸ್ಪರ್ಧೆಗೆ ಅವಕಾಶ ಇಲ್ಲದ ಕೊರತೆಯನ್ನು ನೀಗಿಸಬೇಕು. ಸಮಾಜದ ಧ್ವನಿಯಾಗಿರುವ ನಾಟಕ ಕಲೆ ನಾಶವಾಗಬಾರದು ಎಂಬ ಮನವಿಯನ್ನು ಕಾಸರಗೋಡು ಜಿಲ್ಲಾಧಿಕಾರಿ ಕಚೇರಿಯಲ್ಲಿ ಇತ್ತೀಚೆಗೆ ಜರಗಿದ ಭಾಷಾ ಅಲ್ಪಸಂಖ್ಯಾತ ಅದಾಲತ್ ನಲ್ಲಿ ಕೇರಳ ಸರ್ಕಾರದ ಭಾಷಾ ಅಲ್ಪಸಂಖ್ಯಾತ ಇಲಾಖೆಯ ಕಾಯ9ದಶಿ9 ನಡುವಟ್ಟಂ ಗೋಪಾಲಕೃಷ್ಣರವರಿಗೆ ರಂಗನಿದೇ9ಶಕ ಉದಯ ಸಾರಂಗ ರವರು ವಿವರಿಸಿ ಮನವರಿಕೆ ಮಾಡಿ ಮನವಿ ಸಲ್ಲಿಸಿದ್ದಾರೆ. ಅಶೋಕ ಮಾಸ್ತರ್ ಕೊಡ್ಲಮೊಗರು, ಸದಾಶಿವ ಮಾಸ್ತರ್ ಪೆÇಯ್ಯೆ, ಸತೀಶ್ ಮೊದಲಾದ ರಂಗ ಕರ್ಮಿಗಳ ನಿಯೋಗ ಕೂಡಾ ಕನ್ನಡ ನಾಟಕಕ್ಕಾಗಿ ಮನವಿಯನ್ನು ಸಲ್ಲಿಸಿದ್ದಾರೆ.

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries