ಕುಂಬಳೆ: ಶಿವಳ್ಳಿ ಬ್ರಾಹ್ಮಣ ಸಭಾದ ಜಿಲ್ಲಾ ಮಟ್ಟದ ವಾರ್ಷಿಕ ಕ್ರೀಡಾ ಕೂಟದ ಅಂಗವಾಗಿ ಕ್ರಿಕೆಟ್ ಹಾಗೂ ಟೆನ್ನಿಕ್ಯಾಟ್ ಸ್ಪರ್ಧೆಗಳು ನಾಯ್ಕಾಪಿನ ಶಾಸ್ತಾ ಮೈದಾನದಲ್ಲಿ ಇತ್ತೀಚೆಗೆ ನಡೆಯಿತು. ಕ್ರೀಡಾಕೂಟದಲ್ಲಿ ಕಾಸರಗೋಡು, ಕಾಞÂಂಗಾಡ್, ಮುಳ್ಳೇರಿಯ, ಮಂಜೇಶ್ವರ ಹಾಗೂ ಏತಡ್ಕ ಘಟಕಗಳ ತಂಡಗಳು ಭಾಗವಹಿಸಿದ್ದವು.
ಶಿವಳ್ಳಿ ಬ್ರಾಹ್ಮಣ ಸಭಾ ಕಾಸರಗೋಡು ವಲಯ ಗೌರವಾಧ್ಯಕ್ಷ ಉಳಿಯತ್ತಾಯ ವಿಷ್ಣು ಆಸ್ರ, ಅಧ್ಯಕ್ಷ ಚಕ್ರಪಾಣಿದೇವ ಪೂಜಿತ್ತಾಯ, ಪ್ರಧಾನ ಸಂಚಾಲಕ ಸೀತಾರಾಮ ಕಡಮಣ್ಣಾಯ, ಖಜಾಂಜಿ ಮುರಳೀಧರ ಕಡಮಣ್ಣಾಯ, ವೇಣುಗೋಪಾಲ ಕಲ್ಲೂರಾಯ, ಲಕ್ಷ್ಮೀಶ ಕಡಂಬಾರ್, ಅರವಿಂದಕುಮಾರ್ ಅಲೆವೂರಾಯ, ಮಂಜುನಾಥ ಟಿ.ಕೆ.ಮೊದಲಾದವರು ಉಪಸ್ಥಿತರಿದ್ದು ಕ್ರೀಟಾಕೂಟಕ್ಕೆ ಶುಭಹಾರೈಸಿದರು. ಬಳಿಕ ಯುವ ತಂಡಗಳ ಹಿರಿಯ-ಕಿರಿಯ ಕ್ರಿಕೆಟ್ ಸ್ಪರ್ಧೆಗಳು ನಡೆಯಿತು. ಮುಳ್ಳೇರಿಯ(ಪ್ರಥಮ) ಹಾಗೂ ಕಾಸರಗೋಡು(ದ್ವಿತೀಯ) ಬಹುಮಾನಗಳನ್ನು ಗಳಿಸಿದವು. ಅಪರಾಹ್ನ ಮಹಿಳೆಯರಿಗೆ ಟೆನ್ನಿಕ್ಯಾಟ್ ಸ್ಪರ್ಧೆ ನಡೆಯಿತು. ಕಾಸರಗೋಡು ವಲಯ ಕಾರ್ಯದರ್ಶಿ ಶ್ರೀನಿವಾಸ ಕಡಮಣ್ಣಾಯ ಹಾಗೂ ಯುವ ವಿಭಾಗದ ಸದಸ್ಯರು ಸಹಕರಿಸಿದರು. ವಿಜೇತರಿಗೆ ಬಹುಮಾನಗಳನ್ನು ಈ ಸಂದರ್ಭ ವಿತರಿಸಲಾಯಿತು.
ಡಿ.21 ಹಾಗೂ 22 ರಂದು ಮುಜುಂಗಾವು ಶ್ರೀಭಾರತಿ ವಿದ್ಯಾಪೀಠ ಪರಿಸರದಲ್ಲಿ ನಡೆಯಲಿರುವ ಸಾಂಸ್ಕøತಿಕ ಉತ್ಸವಕ್ಕೆ ಎಲ್ಲಾ ವಲಯದ ಸದಸ್ಯರು ಭಾಗವಹಿಸಬೇಕೆಂದು ಮನವಿ ಮಾಡಲಾಯಿತು. ಡಿ.21 ಹಾಗೂ 22 ರಂದು ಲಘುಸಂಗೀತ, ಶಾಸ್ತ್ರೀಯ ಸಂಗೀತ, ಸಂಗೀತ, ಗೀತಾ ಕಂಠಪಾಠ, ಭಾಷಣ, ಪೌರಾಣಿಕ ವಸ್ತುಗಳ ಕ್ವಿಜ್, ಭರತನಾಟ್ಯ, ದೇಶಭಕ್ತಿಗೀತೆ, ಶಂಖ ಧ್ವನಿ, ಭಜನೆ, ಶ್ರೀಸೂಕ್ತ ಮೊದಲಾದ ಸ್ಪರ್ಧೆಳು ನಡೆಯಲಿದೆ. ಸಮಾರೋಪದಲ್ಲಿ ಮಂಗಳೂರಿನ ತುಳುನಾಡು ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಮುರಳೀಕೃಷ್ಣ ಆಚಾರ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು.